Uttar Pradesh: ಎಲೆಕ್ಟ್ರಾನಿಕ್ಸ್​ ಶೋರೂಂನಲ್ಲಿ ಅಗ್ನಿ ಅವಘಡ, ನಾಲ್ವರು ಸಜೀವ ದಹನ

ಉತ್ತರ ಪ್ರದೇಶದ ಝಾನ್ಸಿಯ ಎಲೆಕ್ಟ್ರಾನಿಕ್ಸ್​ ಶೋ ರೂಂನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳೆ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.

Uttar Pradesh: ಎಲೆಕ್ಟ್ರಾನಿಕ್ಸ್​ ಶೋರೂಂನಲ್ಲಿ ಅಗ್ನಿ ಅವಘಡ, ನಾಲ್ವರು ಸಜೀವ ದಹನ
ಎಲೆಕ್ಟ್ರಾನಿಕ್ಸ್​ ಶೋ ರೂಂ
Image Credit source: India Today

Updated on: Jul 04, 2023 | 7:18 AM

ಉತ್ತರ ಪ್ರದೇಶದ ಝಾನ್ಸಿಯ ಎಲೆಕ್ಟ್ರಾನಿಕ್ಸ್​ ಶೋ ರೂಂನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳೆ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಸಿಪ್ರಿ ಬಜಾರ್ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಎಲೆಕ್ಟ್ರಾನಿಕ್ಸ್ ಶೋರೂಂ ಮತ್ತು ಕ್ರೀಡಾ ಅಂಗಡಿಗೆ ಬೆಂಕಿ ಆವರಿಸಿದೆ. ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸುಮಾರು 10 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೂವರು ಸಜೀವ ದಹನವಾಗಿದ್ದು, ಮತ್ತೊಬ್ಬ ಮಹಿಳೆ ತೀರಾ ಸುಟ್ಟಗಾಯಗಳಿಂದ ಬಳಲುತ್ತಿದ್ದು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ