ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(Aligarh Muslim University)ದ ಆವರಣದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಸೈನ್ಸ್(ಬಿಯುಎಂಎಸ್)ನ ಹಳೆಯ ವಿದ್ಯಾರ್ಥಿಗಳು ಹಾಗೂ ಇತರೆ ವಿದ್ಯಾರ್ಥಿಗಳ ನಡುವೆ ಘಟನೆ ನಡೆದಿದೆ. ಇದರಲ್ಲಿ ಇತರೆ 11 ಅಪರಿಚಿತ ವ್ಯಕ್ತಿಗಳು ಕೂಡ ಭಾಗಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ಗುಂಡಿನ ದಾಳಿ ನಡೆದಿದೆ, ಹಳೆಯ ವಿದ್ಯಾರ್ಥಿ ಸಾದಿಕ್ ಹಸನ್ ಮತ್ತು ಇತರೆ ಇಬ್ಬರು ವಿದ್ಯಾರ್ಥಿಗಳಾದ ಫಿರೋಜ್ ಮತ್ತು ಅಬ್ದುಲ್ಲಾ ಅವರನ್ನು ಬಿಎಂ ಹಾಲ್ನಿಂದ ಸರ್ ಸೈಯದ್ ಹಾಲ್ಗೆ ಹಸ್ತಾಂತರಿಸಲಾಗಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಎಎಂಯು ಕ್ಯಾಂಪಸ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ದೃಢಪಡಿಸಿದ್ದಾರೆ.
ತಡರಾತ್ರಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ. ಈ ವೇಳೆ ಗುಂಡಿನ ಚಕಮಕಿಯೂ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಚಲಿಸುತ್ತಿದ್ದ ಜೈಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಗುಂಡಿನ ದಾಳಿ, ನಾಲ್ವರು ಸಾವು
ಮಾಧ್ಯಮ ವರದಿಗಳ ಪ್ರಕಾರ, ಈ ಬುಲೆಟ್‌ಗಳನ್ನು ವಿಶ್ವವಿದ್ಯಾಲಯದ ನಾರ್ತ್ ಹಾಲ್ ಹಾಸ್ಟೆಲ್‌ನಲ್ಲಿ ಹಾರಿಸಲಾಗಿದೆ. ಗುಂಡಿನ ದಾಳಿಯ ಮಾಹಿತಿ ಸಿಕ್ಕ ತಕ್ಷಣ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರೊ. ವಾಸಿಂ ಅಹಮದ್, ಪ್ರಾಕ್ಟೋರಿಯಲ್ ತಂಡ ಮತ್ತು ಸಿವಿಲ್ ಲೈನ್ಸ್ ಪೊಲೀಸರು ಸ್ಥಳಕ್ಕೆ ತಲುಪಿದ್ದರು.
ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲವು ವಿದ್ಯಾರ್ಥಿಗಳು ಎಎಂಯುನ ವಿಎಂ ಹಾಲ್ ಬಳಿ ಕುಳಿತಿದ್ದರು. ಆಗ ಒಂದು ಗುಂಪಿನಿಂದ ಕೆಲವರು ಅಲ್ಲಿಗೆ ಬಂದು ಗುಂಡು ಹಾರಿಸತೊಡಗಿದರು. ಈ ಜನರೆಲ್ಲ ಮುಖ ಮುಚ್ಚಿಕೊಂಡಿದ್ದರು. ಬಳಿಕ ಕ್ಯಾಂಪಸ್‌ನಲ್ಲಿ ನೂಕುನುಗ್ಗಲು ಉಂಟಾಯಿತು. ಇದಾದ ನಂತರ ಬೇರೆ ಬೇರೆ ಗುಂಪಿನವರೂ ಅಲ್ಲಿಗೆ ಆಗಮಿಸಿದ್ದು, ಜಗಳ ತಾರಕಕ್ಕೇರಿದೆ. ಈ ಗಲಾಟೆಯಲ್ಲಿ ಹಲವು ಸುತ್ತಿನ ಗುಂಡುಗಳು ಹಾರಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ಆವರಣದಲ್ಲಿ ಮಾರಾಮಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಗಲಾಟೆ ಸೃಷ್ಟಿಸಿದರು. ವಿಶ್ವವಿದ್ಯಾಲಯದ ಪ್ರೊಕ್ಟರ್ ಪ್ರೊ. ವಾಸೀಂ ಅಹ್ಮದ್ ಅವರು ಗಲಭೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು ಮತ್ತು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಗದ್ದಲ ನಿಲ್ಲಿಸಿದರು.
ಈ ಘಟನೆಗೂ ಮುನ್ನ ಎಎಂಯುನಲ್ಲಿ ಪಿಯು ವಿದ್ಯಾರ್ಥಿಗೆ ಹಾವು ಕಚ್ಚಿದ್ದು, ವಿದ್ಯಾರ್ಥಿಗಳಲ್ಲಿ ಭಯ ಮೂಡಿತ್ತು. ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದ್ದು, ವಿಶೇಷ ಚಿಕಿತ್ಸೆಗಾಗಿ ದೆಹಲಿಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ