ಕೆನಡಾದಲ್ಲಿ ಮದುವೆ ಆರತಕ್ಷತೆ ವೇಳೆ ಗುಂಡಿನ ದಾಳಿ, ಇಬ್ಬರು ಸಾವು, ಆರು ಮಂದಿಗೆ ಗಾಯ

ಕೆನಡಾದ ಒಟ್ಟಾವಾದಲ್ಲಿ ಮದುವೆ ಆರತಕ್ಷತೆ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ಕೆನಡಾದ ಒಟ್ಟಾವಾದಲ್ಲಿ ಮದುವೆ ಆರತಕ್ಷತೆ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ಆ ಸ್ಥಳದಲ್ಲಿ ಎರಡು ಮದುವೆಗಳು ನಡೆಯುತ್ತಿತ್ತು, ಹೊರಗೆ ಬಂದೂಕಿನ ಸದ್ದು ಕೇಳಿ, ಅತಿಥಿಗಳು ಓಡಲು ಆರಂಭಿಸಿದರು. ಶನಿವಾರ ರಾತ್ರಿ 10:21 ಗಂಟೆಗೆ (ಸ್ಥಳೀಯ ಕಾಲಮಾನ) ಸಂತ್ರಸ್ತರು ಒಟ್ಟಾವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಇನ್ಫಿನಿಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ.

ಕೆನಡಾದಲ್ಲಿ ಮದುವೆ ಆರತಕ್ಷತೆ ವೇಳೆ ಗುಂಡಿನ ದಾಳಿ, ಇಬ್ಬರು ಸಾವು, ಆರು ಮಂದಿಗೆ ಗಾಯ
ಪೊಲೀಸ್
Follow us
ನಯನಾ ರಾಜೀವ್
|

Updated on: Sep 04, 2023 | 8:12 AM

ಕೆನಡಾದ ಒಟ್ಟಾವಾದಲ್ಲಿ ಮದುವೆ ಆರತಕ್ಷತೆ ಸಮಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿಗೆ ಗಾಯಗಳಾಗಿವೆ. ಆ ಸ್ಥಳದಲ್ಲಿ ಎರಡು ಮದುವೆಗಳು ನಡೆಯುತ್ತಿತ್ತು, ಹೊರಗೆ ಬಂದೂಕಿನ ಸದ್ದು ಕೇಳಿ, ಅತಿಥಿಗಳು ಓಡಲು ಆರಂಭಿಸಿದರು. ಶನಿವಾರ ರಾತ್ರಿ 10:21 ಗಂಟೆಗೆ (ಸ್ಥಳೀಯ ಕಾಲಮಾನ) ಸಂತ್ರಸ್ತರು ಒಟ್ಟಾವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಇನ್ಫಿನಿಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ.

ಗುಂಡಿನ ದಾಳಿಯ ಕೆಲವು ಗಂಟೆಗಳ ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇಬ್ಬರು ಮೃತರು  26 ವರ್ಷದ ಸೈದ್ ಮೊಹಮ್ಮದ್ ಅಲಿ ಮತ್ತು 29 ವರ್ಷದ ಅಬ್ದಿಶಕುರ್ ಅಬ್ದಿ-ದಾಹಿರ್ — ಟೊರೊಂಟೊ ಮೂಲದವರು. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಆರು ಮಂದಿಗೆ ಪ್ರಾಣಾಪಾಯದಲ್ಲಿಲ್ಲ ಎಂದು ಒಟ್ಟಾವಾ ಪ್ಯಾರಾಮೆಡಿಕ್ ವಕ್ತಾರ ಮಾರ್ಕ್-ಆಂಟೊಯಿನ್ ಡೆಸ್ಚಾಂಪ್ಸ್ ಹೇಳಿದ್ದಾರೆ.

ಗುಂಡಿನ ದಾಳಿ ದ್ವೇಷ ಪ್ರೇರಿತವಾಗಿರಬಹುದು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ತನಿಖೆ ನಡೆಯುತ್ತಿದೆ ಮತ್ತು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು, ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗುಂಡಿನ ದಾಳಿ ನಡೆದಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ಇಲ್ಲಿಯವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ, ಯಾರ ವಿವರವನ್ನೂ ನೀಡಿಲ್ಲ. ಗುಂಡಿನ ದಾಳಿ ಅಥವಾ ಶಂಕಿತರ ಬಗ್ಗೆ ಏನಾದರೂ ಮಾಹಿತಿ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

ಕೆನಡಾದ ರಾಜಧಾನಿ ಒಟ್ಟಾವಾವು 1 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ, 2023ರಲ್ಲಿ 12 ಮಂದಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. 2009ರಿಂದ ಗುಂಡಿನ ದಾಳಿ ಶೇ.81ರಷ್ಟು ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ