HIV Positive: ಅನೇಕ ರೋಗಿಗಳಿಗೆ ಒಂದೇ ಸಿರಿಂಜ್, ಸೂಜಿ ಬಳಕೆ: ಬಾಲಕಿಗೆ ಎಚ್​ಐವಿ ಪಾಸಿಟಿವ್

|

Updated on: Mar 05, 2023 | 9:09 AM

ಹಲವರಿಗೆ ಒಂದೇ ಸಿರಿಂಜ್ , ಸೂಚಿ ಬಳಕೆ ಮಾಡಿದ ಪರಿಣಾಮ ಬಾಲಕಿಯೊಬ್ಬಳಿಗೆ ಎಚ್​ಐವಿ ತಗುಲಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.

HIV Positive: ಅನೇಕ ರೋಗಿಗಳಿಗೆ ಒಂದೇ ಸಿರಿಂಜ್, ಸೂಜಿ ಬಳಕೆ: ಬಾಲಕಿಗೆ ಎಚ್​ಐವಿ ಪಾಸಿಟಿವ್
ಸಿರಿಂಜ್
Follow us on

ಹಲವರಿಗೆ ಒಂದೇ ಸಿರಿಂಜ್ , ಸೂಚಿ ಬಳಕೆ ಮಾಡಿದ ಪರಿಣಾಮ ಬಾಲಕಿಯೊಬ್ಬಳಿಗೆ ಎಚ್​ಐವಿ ತಗುಲಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ. ಶನಿವಾರ ಒಂದೇ ಸಿರಿಂಜ್‌ನಿಂದ ಹಲವಾರು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಆಸ್ಪತ್ರೆಗೆ ದಾಖಲಾದ ಬಾಲಕಿಯ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಕಿತ್ ಕುಮಾರ್ ಅಗರ್ವಾಲ್ ಅವರಿಗೆ ದೂರು ನೀಡಿದ್ದಾರೆ.

ಫೆಬ್ರವರಿ 20 ರಂದು ಆಸ್ಪತ್ರೆಗೆ ದಾಖಲಾದ ಬಾಲಕಿಯ ಸಂಬಂಧಿಕರು, ಮಗುವಿಗೆ ಎಚ್‌ಐವಿ ಪಾಸಿಟಿವ್ ಎಂದು ಪತ್ತೆಯಾd ಬಳಿಕ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಯಿಂದ ಮಗುವನ್ನು ಕಳುಹಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್,
ಇಟಾಹ್‌ನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು ಒಂದೇ ಸಿರಿಂಜ್‌ನಿಂದ ಹಲವಾರು ರೋಗಿಗಳಿಗೆ ಚುಚ್ಚುಮದ್ದು ನೀಡಿ ಮಗುವಿನ ಪರೀಕ್ಷೆಯ ವರದಿ ಎಚ್‌ಐವಿ ಪಾಸಿಟಿವ್ ಬಂದಾಗ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಂದ ವಿವರಣೆ ಕೇಳಲಾಗಿದೆ. ಯಾವುದೇ ವೈದ್ಯರು ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತ್ತಷ್ಟು ಓದಿ: World AIDS Vaccine Day 2022 : ವೇಷ ಮರೆಸಿಕೊಂಡು ಓಡಾಡುವ ಏಡ್ಸ್ ಎಂಬ ಕಳ್ಳನಿಗೆ ಲಸಿಕೆ ಕಂಡುಹಿಡಿಯುವುದು ಸುಲಭವೆ?

ವ್ಯಾಕ್ಸಿನೇಷನ್ ಮಾಡಲು ಯಾವಾಗಲೂ ಹೊಸ ಸಿರಿಂಜ್ ಮತ್ತು ಸೂಜಿ ಬಳಸುವಂತೆ ಸೂಚನೆ ನೀಡಲಾಗುತ್ತದೆ. ವೈದ್ಯರು ಮತ್ತು ತಜ್ಞರ ಸೂಚನೆಯಂತೆ ಈಗಾಗಲೇ ಭಾರತದಲ್ಲಿ ಏಕ ಬಳಕೆಯ ಸಿರಿಂಜ್ ಮತ್ತು ಸೂಜಿ ಬಳಸಲು ಹೇಳಲಾಗಿದೆ.

ಆದರೆ ಇತ್ತೀಚೆಗೆ ಮಧ್ಯಪ್ರದೇಶದ ಆರೋಗ್ಯ ಅಧಿಕಾರಿಯೊಬ್ಬರು ಒಂದೇ ಸಿರಿಂಜ್‌ ಬಳಸಿ 30 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ್ದರು. ಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುತ್ತಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಜನರು ಸೂಜಿ ಮರುಬಳಕೆ ಮಾಡುವ ಅಪಾಯದ ಬಗ್ಗೆ ಮಾತ್ರ ತಿಳಿದುಕೊಂಡಿರ್ತಾರೆ. ಅದರಲ್ಲೂ ಸಿರಿಂಜ್ ಅನ್ನು ಮರುಬಳಕೆ ಮಾಡುವುದು ಅಪಾಯಕಾರಿ ಎಂಬುದು ಕೆಲವೇ ಜನರಿಗೆ ತಿಳಿದಿರುವುದು ಖೇದಕರ ಸಂಗತಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ