ಒಂದೇ ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿ, ಇದರಲ್ಲಿ ನನ್ನ ತಪ್ಪೇನಿದೆ ಎಂದ ಆರೋಗ್ಯ ಕಾರ್ಯಕರ್ತ
ಒಂದೇ ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ಘಟನೆ ಮಧ್ಯಪ್ರದೇಶದ ಸಾಗರ್ನಲ್ಲಿ ವರದಿಯಾಗಿದೆ.
ಒಂದೇ ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ಘಟನೆ ಮಧ್ಯಪ್ರದೇಶದ ಸಾಗರ್ನಲ್ಲಿ ವರದಿಯಾಗಿದೆ. ಅಧಿಕಾರಿಗಳು ಕೇವಲ ಒಂದೇ ಸಿರಿಂಜ್ ಕಳುಹಿಸಿದ್ದಾರೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ನಲ್ಲಿ ಲಸಿಕೆ ಹಾಕಲು ಇಲಾಖೆಯ ಮುಖ್ಯಸ್ಥರು ಹೇಳಿದ್ದಾರೆ ಇದರಲ್ಲಿ ನನ್ನ ತಪ್ಪೇನಿದೆ ಎಂದು ಆರೋಗ್ಯ ಕಾರ್ಯಕರ್ತ ಪ್ರಶ್ನಿಸಿದ್ದಾರೆ.
1990ರ ದಶಕದಿಂದಲೂ ಎಚ್‌ಐವಿ ಹರಡಲು ಆರಂಭಿಸಿದಾಗಿನಿಂದ ಒಬ್ಬರಿಗೆ ಒಂದು ಸಿರಿಂಜ್ನಂತೆ ಬಳಕೆ ಮಾಡಬೇಕು, ಒಂದೇ ಸಿರಿಂಜ್ ಇಬ್ಬರಿಗೆ ಬಳಕೆ ಮಾಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
ಆದರೆ ಈ ವ್ಯಕ್ತಿ 30 ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ನಲ್ಲಿ ಲಸಿಕೆ ನೀಡಿದ್ದಾರೆ. ಒಂದು ಸಿರಿಂಜ್ ಅನ್ನು ಹಲವಾರು ಜನರಿಗೆ ಚುಚ್ಚುಮದ್ದು ಮಾಡಲು ಬಳಸಬಾರದು ಎಂದು ನಿಮಗೆ ತಿಳಿದಿದೆಯೇ ಎಂದು ಕೇಳಿದಾಗ ನನಗೆ ಅದು ತಿಳಿದಿದೆ.
ಅದಕ್ಕಾಗಿಯೇ ನಾನು ಕೇವಲ ಒಂದು ಸಿರಿಂಜ್ ಅನ್ನು ಬಳಸಬೇಕೇ ಎಂದು ಅಧಿಕಾರಿಯನ್ನು ಕೇಳಿದೆ ಮತ್ತು ಅವರು ಹೌದು ಎಂದು ಹೇಳಿದರು. ಇದರಲ್ಲಿ ನನ್ನ ತಪ್ಪೇನಿದೆ ಅವರು ಹೇಳಿದ್ದನ್ನು ನಾನು ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬೆಳಿಗ್ಗೆ ಲಸಿಕೆ ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ಕಳುಹಿಸುವ ಉಸ್ತುವಾರಿ ವಹಿಸಿದ್ದ ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧವೂ ಆರೋಗ್ಯ ಇಲಾಖೆ ವಿಚಾರಣೆ ಆರಂಭಿಸಿದೆ.
ಸಾಗರ್ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಒಂದೇ ಸಿರಿಂಜ್‌ನಿಂದ ಮಕ್ಕಳಿಗೆ ಲಸಿಕೆ ಹಾಕುತ್ತಿರುವುದನ್ನು ಗಮನಿಸಿದ ಪೋಷಕರು ಆತಂಕ ವ್ಯಕ್ತಪಡಿಸಿದರು.
ಪ್ರಭಾರಿ ಜಿಲ್ಲಾಧಿಕಾರಿ ಕ್ಷಿತಿಜ್ ಸಿಂಘಾಲ್ ಅವರು ತಕ್ಷಣ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿಗಳಿಗೆ ತಪಾಸಣೆ ನಡೆಸುವಂತೆ ಸೂಚಿಸಿದರು. ಆದರೆ ತಪಾಸಣೆ ವೇಳೆ ಜಿತೇಂದ್ರ ಹಾಜರಿರಲಿಲ್ಲ. ಘಟನೆ ಬೆಳಕಿಗೆ ಬಂದಾಗಿನಿಂದ ಅವರ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.
Published On - 12:30 pm, Thu, 28 July 22