Combination Vaccine: ಲಸಿಕೆಗಳ ಸಂಯೋಜನೆ ಎಂದರೇನು?ಪ್ರಯೋಜನ, ಅಡ್ಡಪರಿಣಾಮಗಳನ್ನು ತಿಳಿಯಿರಿ

ಲಸಿಕೆಗಳ ಸಂಯೋಜನೆ ಎಂದರೆ ಒಂದಕ್ಕಿಂತ ಹೆಚ್ಚು  ಔಷಧಿಗಳನ್ನು ಒಂದೇ ಲಸಿಕೆಯಲ್ಲಿ ಮಿಶ್ರಣ ಮಾಡಿ ಒಂದೇ ಬಾರಿಗೆ ನೀಡುವುದು ಎಂದರ್ಥ. ಲಸಿಕೆಗಳ ಸಂಯೋಜನೆ ಎಂದರೇನು? ಅದರ ಪ್ರಯೋಜನ ಹಾಗೂ ಅಡ್ಡಪರಿಣಾಮಗಳೇನು ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

Combination Vaccine: ಲಸಿಕೆಗಳ ಸಂಯೋಜನೆ ಎಂದರೇನು?ಪ್ರಯೋಜನ, ಅಡ್ಡಪರಿಣಾಮಗಳನ್ನು ತಿಳಿಯಿರಿ
Vaccine
Follow us
TV9 Web
| Updated By: ನಯನಾ ರಾಜೀವ್

Updated on:Jul 20, 2022 | 2:59 PM

ಲಸಿಕೆಗಳ ಸಂಯೋಜನೆ ಎಂದರೆ ಒಂದಕ್ಕಿಂತ ಹೆಚ್ಚು  ಔಷಧಿಗಳನ್ನು ಒಂದೇ ಲಸಿಕೆಯಲ್ಲಿ ಮಿಶ್ರಣ ಮಾಡಿ ಒಂದೇ ಬಾರಿಗೆ ನೀಡುವುದು ಎಂದರ್ಥ. ಲಸಿಕೆಗಳ ಸಂಯೋಜನೆ ಎಂದರೇನು? ಅದರ ಪ್ರಯೋಜನ ಹಾಗೂ ಅಡ್ಡಪರಿಣಾಮಗಳೇನು ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಕೊರೊನಾ ಸಂದರ್ಭದಲ್ಲಿ ಎರಡು ವಿಭಿನ್ನ ಕೋವಿಡ್ ಲಸಿಕೆಗಳನ್ನ ಬೆರೆಸುವುದರಿಂದ ಕೋವಿಡ್-19 ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಬಹುದು ಎಂಬ ಅಂಶವು ಕೆಲ ಅಧ್ಯಯನಗಳಿಂದ ತಿಳಿದುಬಂದಿತ್ತು. ಬೇರೆ ಬೇರೆ ರೋಗಗಳ ವಿರುದ್ಧದ ರಕ್ಷಣೆಗಾಗಿ ಸಂಯೋಜಿತ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಡಿಫ್ತಿರಿಯಾ, ಟೆಟನಸ್ ಮತ್ತು ಪೆರ್ಟುಸಿಸ್ (ಡಿಟಿಪಿ) ಲಸಿಕೆಗಳನ್ನು ಒಂದೇ ಉತ್ಪನ್ನವಾಗಿ ಸಂಯೋಜಿಸುವುದರೊಂದಿಗೆ ಲಸಿಕೆಗಳ ಸಂಯೋಜನೆ ಆರಂಣಭವಾಗಿತ್ತು.

ಈ ಸಂಯೋಜಿತ ಲಸಿಕೆಯನ್ನು ಮೊದಲು 1948 ರಲ್ಲಿ ಶಿಶುಗಳು ಮತ್ತು ಮಕ್ಕಳಿಗೆ ಲಸಿಕೆ ಹಾಕಲು ಬಳಸಲಾಯಿತು. ಲಸಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಏಕೆಂದರೆ ಇದು ಮಕ್ಕಳನ್ನು ಅನೇಕ ಮಾರಣಾಂತಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಇತ್ತೀಚಿನ ದಿನಗಳಲ್ಲಿ, ಅನೇಕ ಮಕ್ಕಳಿಗೆ ಸಂಯೋಜಿತ ಲಸಿಕೆಗಳನ್ನು ಸಲಹೆ ಮಾಡಲಾಗುತ್ತಿದೆ.

ಸಂಯೋಜಿತ ಲಸಿಕೆಗಳು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ವಿವಿಧ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡಾ ಸುರೇಶ್ ಬಿರಾಜದಾರ್, ನಿಯೋನಾಟಾಲಜಿಸ್ಟ್ ಮತ್ತು ಪೀಡಿಯಾಟ್ರಿಶಿಯನ್, ಮದರ್‌ಹುಡ್ ಆಸ್ಪತ್ರೆ, ಖಾರ್ಘರ್ ಅವರು ಹಿಂದೂಸ್ತಾನ್​ ಟೈಮ್ಸ್​ಗೆ ನೀಡಿರುವ ಸಂದರ್ಶನದಲ್ಲಿ ಲಸಿಕೆಗಳ ಸಂಯೋಜನೆ ಕುರಿತು ಮಾತನಾಡಿದ್ದಾರೆ.

ಸಂಯೋಜಿತ ಲಸಿಕೆಗಳ ಬಗ್ಗೆ ಮಾಹಿತಿ -ಹೆಕ್ಸಾವೆಲೆಂಟ್ ಲಸಿಕೆ ಇದರಲ್ಲಿ DTaP + Hep B + IPV+Hib ಅನ್ನು ಸಂಯೋಜಿಸಲಾಗಿದೆ ಮತ್ತು ಇದು ಡಿಫ್ತಿರಿಯಾ, ಟೆಟನಸ್, ಪೆರ್ಟುಸಿಸ್, ಹೆಪಟೈಟಿಸ್ ಬಿ, ಹಿಮೋಫಿಲಸ್ ಇನ್ಫ್ಲುಯೆಂಜಾ ಮತ್ತು ಪೋಲಿಯೊದಿಂದ ಮಕ್ಕಳನ್ನು ರಕ್ಷಿಸುತ್ತದೆ.

-ಡಿಫ್ತಿರಿಯಾ, ಪೆರ್ಟುಸಿಸ್, ಟೆಟನಸ್, ಹಿಮೋಫಿಲಸ್ ಮತ್ತು ಪೋಲಿಯೊದಿಂದ ಮಕ್ಕಳನ್ನು ರಕ್ಷಿಸುವ ಪೆಂಟಾವಲೆಂಟ್ ಲಸಿಕೆಗಳಿವೆ. -ತಜ್ಞರ ಮಾರ್ಗದರ್ಶನದಲ್ಲಿ ಈ ಲಸಿಕೆಗಳನ್ನು ತೆಗೆದುಕೊಳ್ಳಿ ಮತ್ತು ಮಕ್ಕಳ ವಿಷಯಕ್ಕೆ ಬಂದಾಗ ಪೋಷಕರು ಎಂದೂ ಹಿಂಜರಿಯಬಾರದು.

-ಮತ್ತೊಂದು ಉದಾಹರಣೆಯೆಂದರೆ MMR + ವರಿಸೆಲ್ಲಾ (ಚಿಕನ್ಪಾಕ್ಸ್) ಸಂಯೋಜನೆಯು ದಡಾರ, ಮಂಪ್ಸ್, ರುಬೆಲ್ಲಾ ಮತ್ತು ವರಿಸೆಲ್ಲಾ ಎಂಬ 4 ರೋಗಗಳನ್ನು ತಡೆಯುತ್ತದೆ.

-ಒಬ್ಬರಿಗೆ ಕಡಿಮೆ ಶಾಟ್​ಗಳು ಬೇಕಾಗುತ್ತವೆ, ಕಡಿಮೆ ನೋವು ಮತ್ತು ಅಸ್ವಸ್ಥತೆ ಇರುತ್ತದೆ ಮತ್ತು ಸಮಯಕ್ಕೆ ರಕ್ಷಣೆ ಸಿಗುತ್ತದೆ ಎಲ್ಲಾ ಮಕ್ಕಳಿಗೆ ಈ ಲಸಿಕೆ ಪಡೆಯಲು ಸೂಚಿಸಲಾಗುತ್ತದೆ.

ಸಂಯೋಜಿತ ಲಸಿಕೆಗಳ ಪ್ರಯೋಜನ ಸಂಯೋಜಿತ ಲಸಿಕೆಗಳನ್ನು ಅನುಮೋದಿಸುವ ಮೊದಲು ಅದರ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪರೀಕ್ಷಿಸಲು ಎಚ್ಚರಿಕೆಯಿಂದ ಪರೀಕ್ಷೆ ನಡೆಸಲಾಗುತ್ತದೆ.

ಬಳಿಕ ಎಲ್ಲಾ ಆಗುಹೋಗುಗಳನ್ನು ಅರಿತ ಬಳಿಕ ಅನುಮೋದಿಸಲಾಗುತ್ತದೆ. ಲಸಿಕೆಗಳ ಪ್ರತಿಕೂಲ ಪರಿಣಾಮಗಳು ಸೌಮ್ಯವಾಗಿರುತ್ತವೆ.

ಅಡ್ಡಪರಿಣಾಮಗಳೇನು? ಲಸಿಕೆ ನೀಡಿದ ಜಾಗದಲ್ಲಿ ನೋವು ಅಥವಾ ಊತ ಕಾಣಿಸಿಕೊಳ್ಳಬಹುದು, ಆದರೆ ಮಕ್ಕಳು ಇದಕ್ಕೆ ಭಯ ಪಡುವ ಅಗತ್ಯವಿಲ್ಲ. ಆದರೆ ಬೇರೆ ಬೇರೆ ಲಸಿಕೆಗಳನ್ನು ಬೇರೆ ಬೇರೆ ಸಮಯದಲ್ಲಿ ತೆಗೆದುಕೊಂಡರೆ ಅದೇ ಪರಿಣಾಮವನ್ನು ಪದೇ ಪದೇ ಎದುರಿಸಬೇಕಾಗುತ್ತದೆ.

-ಲಸಿಕೆಗಳಿಂದ ಜ್ವರ, ಊತದ ಅನುಭವ 2-3 ದಿನಗಳವರೆಗೆ ಇರುತ್ತದೆ. ಆದರೆ ಪೋಷಕರು ಯಅವುದನ್ನೂ ನೆಗ್ಲೆಕ್ಟ್​ ಮಾಡಬಾರದು.

Published On - 2:59 pm, Wed, 20 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ