AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jaggery Benefits: ಬೆಲ್ಲದಲ್ಲಿದೆ ಬೆಟ್ಟದಷ್ಟು ಔಷಧೀಯ ಗುಣ, ಒಂದು ತುಣುಕು ಬೆಲ್ಲದಲ್ಲಿದೆ ನಾನಾ ಪ್ರಯೋಜನ

ಭಾರತೀಯ ಪಾಕಪದ್ಧತಿಯಲ್ಲಿ ಬೆಲ್ಲ ಒಂದು ಪ್ರಮುಖ ಅಂಶವಾಗಿದೆ. ಯಾವುದೇ ಸಿಹಿ ಪದಾರ್ಥ ಮಾಡಿದರೂ ಅದಕ್ಕೆ ಸಕ್ಕರೆ ಬದಲು ಬೆಲ್ಲ ಹಾಕಿದರೆ ಅದರ ರುಚಿಯೇ ಬೇರೆ ಇರುತ್ತೆ. ಈ ಹಿಂದೆ ಬೆಲ್ಲವನ್ನೇ ಬಳಸಲಾಗುತ್ತಿತ್ತು. ಆದ್ರೆ ಸಕ್ಕರೆ ಬಂದ ಮೇಲೆ ಬೆಲ್ಲದ ಬಳಕೆ ಕಡಿಮೆಯಾಗಿದೆ. ಕೆಲ ಹಳ್ಳಿಗಳಲ್ಲಿ ಈಗಲೂ ಕೂಡ ಕೇವಲ ಬೆಲ್ಲವನ್ನೇ ಬಳಸುವುದನ್ನು ನಾವು ನೋಡಬಹುದು. ಒಂದೇ ಒಂದು ತುಂಡು ಬೆಲ್ಲ ಪ್ರತಿ ದಿನಾ ಸವಿಯುವುದರಿಂದ ಅನೇಕ ರೀತಿಯ ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು. ಬೆಲ್ಲವು ಚಳಿಗಾಲದ ಋತುವಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಕಾರಣ ಇದನ್ನು ಸೂಪರ್‌ ಫುಡ್‌ ಎಂದು ಕರೆಯಲಾಗುತ್ತದೆ.

TV9 Web
| Edited By: ಆಯೇಷಾ ಬಾನು|

Updated on: Jul 20, 2022 | 7:10 AM

Share
ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಿಸಲು ಸಹಾಯಕಾರಿ: ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಕಾರಣ ಯಾರಿಗೆ ದೇಹದಲ್ಲಿ ಕಬ್ಬಿಣದ ಸಮಸ್ಯೆ ಇರುತ್ತದೆಯೋ ಅವರು ಬೆಲ್ಲದ ಕಷಾಯ ಅಥವಾ ಬೆಲ್ಲದ ಒಂದು ತುಂಡನ್ನು ಸೇವಿಸಬೇಕು. ಮುಟ್ಟಿನ ಸೆಳೆತ, ಹೊಟ್ಟೆ ನೋವು, ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಯ ನಿವಾರಣೆಗೆ ಬೆಲ್ಲದ ಕಷಾಯ ಹೆಚ್ಚು ಪರಿಣಾಮಕಾರಿ.

1 / 7
ಬೆಲ್ಲ ಶ್ವಾಸಕೋಶದ ದಕ್ಷತೆ ಕಾಪಾಡುತ್ತದೆ: ಬೆಲ್ಲ ರಕ್ತ ಮತ್ತು ಶ್ವಾಸಕೋಶವನ್ನು ನಿರ್ವಿಷಗೊಳಿಸುವುದಲ್ಲದೆ, ಶ್ವಾಸಕೋಶದ ದಕ್ಷತೆಯನ್ನು ಹೆಚ್ಚಿಸುತ್ತದೆ. ಉಸಿರಾಟದ ಸಮಸ್ಯೆ ಇರುವವರು ಬೆಲ್ಲೆ ಸವಿಯುವುದರಿಂದ ಹೆಚ್ಚು ಪ್ರಯೋಜನಗಳಿವೆ.

2 / 7
ಮಧುಮೇಹ ಇರುವವರಿಗೆ ಬೆಲ್ಲ ಸೇವನೆ ಸಹಾಯಕಾರಿ: ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಬೆಲ್ಲ ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹ ಹೊಂದಿರುವವರು ಸಕ್ಕರೆಯ ಬದಲಾಗಿ ಬೆಲ್ಲವನ್ನು ಸೇವನೆ ಮಾಡಬಹುದು.

3 / 7
ಬೆಲ್ಲ ಮನೆಮದ್ದು: ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಇದು ಅದ್ಭುತವಾದ ಮನೆಮದ್ದು. ಶೀತ, ಹೊಟ್ಟೆ ನೋವು, ಮುಟ್ಟಿನ ನೋವು, ಸೆಳೆತ, ಆತಂಕ, ತಲೆನೋವು, ಪಾದಗಳು ಊದಿಕೊಂಡಾಗ ಬೆಲ್ಲವನ್ನು ಮನೆಮದ್ದಾಗಿ ಬಳಸಲಾಗುತ್ತೆ.

4 / 7
ಬೆಲ್ಲದ ತಿನಿಸುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು: ಚಳಿಗಾಲದಲ್ಲಿ ಬೆಲ್ಲದ ರೊಟ್ಟಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಲ್ಲವು ತೂಕ ನಷ್ಟಕ್ಕೆ ಕಾರಣವಾಗುವುದರಿಂದ ನಿಯಮಿತವಾಗಿ ಸಕ್ಕರೆಯ ಪರ್ಯಾಯವಾಗಿ ಬಳಸಬಹುದು.

5 / 7
ಗ್ಯಾಸ್ಟಿಕ್ ಸಮಸ್ಯೆಗೆ ಬೆಲ್ಲ ಉಪಕಾರಿ: ಬೆಲ್ಲವನ್ನು ಪ್ರತಿದಿನ ಒಂದು ಲೋಟ ಹಾಲು ಅಥವಾ ನೀರಿನ ಜೊತೆ ಸೇವಿಸುವುದರಿಂದ ಹೊಟ್ಟೆ ತಣ್ಣಗಾಗುತ್ತದೆ ಮತ್ತು ಗ್ಯಾಸ್ಟಿಕ್ನಿಂದ ಹೊಟ್ಟೆ ಉಬ್ಬರಿಸುವಿಕೆಯನ್ನು ತಡೆಯಬಹುದು.

6 / 7
ಆಯಾಸ, ದುರ್ಬಲತೆಗೆ ಬೆಲ್ಲ ರಾಮಬಾಣ: ದೇಹವನ್ನು ದುರ್ಬಲಗೊಳಿಸುವ ಯಾವುದೇ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ಬೆಲ್ಲವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದ ಶಕ್ತಿಯ ಮಟ್ಟವನ್ನು ತ್ವರಿತವಾಗಿ ಹೆಚ್ಚಾಗಿಸುತ್ತದೆ. ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇಡೀ ದಿನ ಕೆಲಸ ಮಾಡಿದ ನಂತರ ನಿಮಗೆ ದಣಿದಿದ್ದರೆ, ನೀವು ತಕ್ಷಣ ಬೆಲ್ಲ ಸೇವಿಸುವುದು ಉತ್ತಮ.

7 / 7
Web contact
Web contact

TV9 Kannada

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್

ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ

ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ

ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ

IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ

ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ

ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ

ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!