ಉತ್ತರ ಪ್ರದೇಶ: ಮೇರೆ ಅಲ್ಲಾ ಬುರಾಯಿ ಸೇ ಬಚಾನಾ ಎಂದು ಪ್ರಾರ್ಥನೆ ಹಾಡಿದ ವಿದ್ಯಾರ್ಥಿಗಳು; ಶಾಲೆಯ ಪ್ರಾಂಶುಪಾಲ ವಜಾ

| Updated By: ರಶ್ಮಿ ಕಲ್ಲಕಟ್ಟ

Updated on: Dec 23, 2022 | 1:04 PM

ಮೇರೆ ಅಲ್ಲಾ ಬುರಾಯಿ ಸೇ ಬಚಾನಾ ಮುಜ್ಕೋ ಎಂದು ಪ್ರಾರ್ಥನೆ ಹಾಡಿದ್ದಕ್ಕೆ ಬಲ ಪಂಥೀಯ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ರಾಜ್ಯದ ಶಿಕ್ಷಣ ಇಲಾಖೆ ಪ್ರಾಂಶುಪಾಲರನ್ನು ವಜಾಮಾಡಿದೆ

ಉತ್ತರ ಪ್ರದೇಶ: ಮೇರೆ ಅಲ್ಲಾ ಬುರಾಯಿ ಸೇ ಬಚಾನಾ ಎಂದು ಪ್ರಾರ್ಥನೆ ಹಾಡಿದ ವಿದ್ಯಾರ್ಥಿಗಳು; ಶಾಲೆಯ ಪ್ರಾಂಶುಪಾಲ ವಜಾ
ಉತ್ತರ ಪ್ರದೇಶದ ಶಾಲಾ ವಿದ್ಯಾರ್ಥಿಗಳು
Follow us on

ಉತ್ತರ ಪ್ರದೇಶದ (Uttar Pradesh) ಬರೇಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ (government school) ಅಸೆಂಬ್ಲಿಯಲ್ಲಿ ಮಕ್ಕಳು ಹಾಡಿದ ಪ್ರಾರ್ಥನೆ ವಿಚಾರದಲ್ಲಿ ಆ ಶಾಲೆಯ ಪ್ರಿನ್ಸಿಪಾಲ್​​ನ್ನು ವಜಾಗೊಳಿಸಲಾಗಿದೆ. ಮೇರೆ ಅಲ್ಲಾ ಬುರಾಯಿ ಸೇ ಬಚಾನಾ ಮುಜ್ಕೋ ಎಂದು ಪ್ರಾರ್ಥನೆ ಹಾಡಿದ್ದಕ್ಕೆ ಬಲ ಪಂಥೀಯ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ರಾಜ್ಯದ ಶಿಕ್ಷಣ ಇಲಾಖೆ ಪ್ರಾಂಶುಪಾಲರನ್ನು(Principal) ವಜಾಮಾಡಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಉರ್ದು ಭಾಷೆಯಲ್ಲಿರುವ ಪ್ರಾರ್ಥನೆ ‘ಲಬ್ ಪೇ ಆತೀ ಹೈ ದುವಾ ಬನ್ಕೇ ತಮನ್ನಾ ಮೇರಿ’ ಎಂದು ಶಾಲಾ ವಿದ್ಯಾರ್ಥಿಗಳು ಹಾಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಶಿಕ್ಷಣ ಇಲಾಖೆ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಂಡಿದೆ. ವೈರಲ್ ವಿಡಿಯೊದಲ್ಲಿ ವಿದ್ಯಾರ್ಥಿಗಳು ಮೇರೆ ಅಲ್ಲಾ ಬುರಾಯಿ ಸೇ ಬಚಾನಾ ಮುಜ್ಕೋ ಎಂದು ಹಾಡುತ್ತಿರುವುದು ಕೇಳುತ್ತದೆ.ಸರ್ಕಾರಿ ಶಾಲೆಯ ದಿನನಿತ್ಯದ ಪ್ರಾರ್ಥನೆಯ ಭಾಗ ಇದಲ್ಲವಾಗಿರುವುದರಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ಇದಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಪ್ರಾರ್ಥನೆಯು ಅನುಮೋದಿತ ಪಟ್ಟಿಯ ಭಾಗವಾಗಿರಲಿಲ್ಲ ಮತ್ತು ಸಮುದಾಯಕ್ಕೆ ಸಂಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಾಂಶುಪಾಲರನ್ನು ವಜಾ ಮಾಡಲಾಗಿದೆ. ಆ ಬಗ್ಗೆ ನಾವು ತನಿಖೆ ನಡೆಸುತ್ತೇವೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ಈ ಹಾಡನ್ನು 1902 ರಲ್ಲಿ ಉರ್ದು ಕವಿ ಮೊಹಮ್ಮದ್ ಇಕ್ಬಾಲ್ ಬರೆದಿದ್ದಾರೆ, ಅವರು “ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ” ಕೂಡಾ ಮೊಹಮ್ಮದ್ ಇಕ್ಬಾಲ್ ಅವರದ್ದೇ ರಚನೆ.


2019 ರಲ್ಲಿ, ವಿದ್ಯಾರ್ಥಿಗಳು ಇದೇ ಹಾಡನ್ನು ಹಾಡಿದ್ದಕ್ಕಾಗಿ ರಾಜ್ಯದ ಪಿಲಿಭಿತ್ ಜಿಲ್ಲೆಯ ಮುಖ್ಯೋಪಾಧ್ಯಾಯರನ್ನು ಸಹ ಅಮಾನತುಗೊಳಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಸ್ಥಳೀಯ ಘಟಕದ ದೂರಿನ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಆ ಸಮಯದಲ್ಲಿ, ಪಿಲಿಭಿತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ವಿದ್ಯಾರ್ಥಿಗಳನ್ನು ರಾಷ್ಟ್ರಗೀತೆ ಹಾಡದ ಕಾರಣ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದರು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: Priyanka Sharma: ಉತ್ತರ ಪ್ರದೇಶದ ಸರ್ಕಾರಿ ಬಸ್​ನ ಮೊದಲ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಶರ್ಮಾ

ಕಳೆದ ತಿಂಗಳು, ಕರ್ನಾಟಕದ ಉಡುಪಿಯಲ್ಲಿ ಬಲಪಂಥೀಯ ಕಾರ್ಯಕರ್ತರು ಖಾಸಗಿ ಶಾಲೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದದ್ದರು. ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ  “ಆಝಾನ್” ಪ್ರದರ್ಶನವನ್ನು ಪ್ರದರ್ಶಿಸಿದರು. ಶಂಕರನಾರಾಯಣ ಪಟ್ಟಣದ ಮದರ್ ತೆರೇಸಾ ಸ್ಮಾರಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಕಾರ್ಯಕರ್ತರು ಇದನ್ನು ಪ್ರಶ್ನಿಸಿದ ನಂತರ ಶಾಲಾ ಅಧಿಕಾರಿಗಳು ಕ್ಷಮೆಯಾಚಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ