ಶಾಲೆ ತಪ್ಪಿಸೋದೇಕೆ ಎಂದು ತಾಯಿ ಗದರಿದ್ದಕ್ಕೆ, ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಬಾಲಕಿ ಆತ್ಮಹತ್ಯೆ

|

Updated on: Dec 08, 2023 | 9:10 AM

ಯಾಕೆ ಶಾಲೆಗೆ ಪದೇ ಪದೇ ರಜೆ ಹಾಕ್ತೀಯಾ ಎಂದು ತಾಯಿ ಗದರಿದ್ದಕ್ಕೆ 13 ವರ್ಷದ ಬಾಲಕಿ ಚಲಿಸುತ್ತಿದ್ದ ರೈಲಿನ ಎದುರು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, 13 ವರ್ಷದ ಖುಷಿ ಶರ್ಮಾಗೆ ಬುಧವಾರ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಇದರಿಂದ ಕೋಪಗೊಂಡ ತಾಯಿ ಮಗಳು ಶಾಲೆಗೆ ಹೋಗುವಂತೆ ಒತ್ತಾಯಿಸಿ ಕಾಪಳಕ್ಕೆ ಬಾರಿಸಿದ್ದಾರೆ.

ಶಾಲೆ ತಪ್ಪಿಸೋದೇಕೆ ಎಂದು ತಾಯಿ ಗದರಿದ್ದಕ್ಕೆ, ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಬಾಲಕಿ ಆತ್ಮಹತ್ಯೆ
ರೈಲು-ಸಾಂದರ್ಭಿಕ ಚಿತ್ರ
Follow us on

ಯಾಕೆ ಶಾಲೆಗೆ ಪದೇ ಪದೇ ರಜೆ ಹಾಕ್ತೀಯಾ ಎಂದು ತಾಯಿ ಗದರಿದ್ದಕ್ಕೆ 13 ವರ್ಷದ ಬಾಲಕಿ ಚಲಿಸುತ್ತಿದ್ದ ರೈಲಿನ ಎದುರು ಹಾರಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, 13 ವರ್ಷದ ಖುಷಿ ಶರ್ಮಾಗೆ ಬುಧವಾರ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಇದರಿಂದ ಕೋಪಗೊಂಡ ತಾಯಿ ಮಗಳು ಶಾಲೆಗೆ ಹೋಗುವಂತೆ ಒತ್ತಾಯಿಸಿ ಕಾಪಳಕ್ಕೆ ಬಾರಿಸಿದ್ದಾರೆ.

ರಣವೀರ್ ಶರ್ಮಾ ಪುತ್ರಿ ಖುಷಿ ಶಾಲೆಗೆ ಹೋಗುವ ಬದಲು ಅಲ್ವಾರ್-ಮಥುರಾ ರೈಲ್ವೇ ಹಳಿ ಬಳಿ ಹೋಗಿ ರೈಲಿನ ಮುಂದೆ ಜಿಗಿದಿದ್ದಾಳೆ. ಘಟನೆಯನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮತ್ತಷ್ಟು ಓದಿ: Mumbai: ರೈಲಿಗೆ ಮೈಯೊಡ್ಡಿ ಮುಖ್ಯ ಲೋಕೋ ಪೈಲಟ್ ಸಾವು

ಖುಷಿಯ ತಂದೆ ರಾಮ್‌ವೀರ್ ಇಂಡಿಯಾ ಟುಡೇಗೆ ಆಕೆಯ ಸಹೋದರ 12 ನೇ ತರಗತಿಯಲ್ಲಿ ಓದುತ್ತಿದ್ದರೆ, ಅವಳ ತಂಗಿ 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ಹೇಳಿದ್ದಾರೆ. ತಾಯಿ ಪದೇ ಪದೇ ಬೈಯುತ್ತಿದ್ದರಿಂದ ಬಾಲಕಿ ಅಸಮಾಧಾನಗೊಂಡಿದ್ದಾಳೆ ಎಂದು ಹೇಳಲಾಗಿದೆ. ದಿನದಿಂದ ದಿನಕ್ಕೆ ಮಕ್ಕಳು ತುಂಬಾ ಸೂಕ್ಷ್ಮವಾಗುತ್ತಾ ಹೋಗುತ್ತಿದ್ದಾರೆ. ತಂದೆ ತಾಯಿಯಿಂದ ಪೆಟ್ಟು ತಿನ್ನುವುದು ಹಾಗಿರಲಿ ಬೈದರೂ ಮಕ್ಕಳಿಗೆ ಸಹಿಸಿಕೊಳ್ಳುವಷ್ಟು ವ್ಯವಧಾನವೇ ಇರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ