
ಮೀರತ್, ಮೇ 1: ಗಂಡ-ಹೆಂಡತಿ(Wife) ನಡುವೆ ಹಲವು ವಿಚಾರಗಳಿಗೆ ಮನಸ್ತಾಪಗಳಾಗುತ್ತಿರುತ್ತವೆ. ಆದರೆ ಗಡ್ಡ ತೆಗೆಯುವ ವಿಚಾರದಲ್ಲಾದ ಜಗಳದ ಬಳಿಕ ಮಹಿಳೆ ಗಂಡನ ಬಿಟ್ಟು ಮೈದುನನೊಟ್ಟಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಹಾಸಿಗೆ ಮೇಲೆ ಒದ್ದೆ ಟವೆಲ್ ಎಸೆಯುವುದು, ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಹೀಗೆ ಹಲವು ವಿಚಾರಗಳು ಪತ್ನಿಗೆ ಕೋಪ ತರಿಸುತ್ತವೆ. ಕೆಲವೊಮ್ಮೆ ಹೆಂಡತಿಯ ಶಾಪಿಂಗ್ ಹುಚ್ಚು ಕೂಡ ಜಗಳಕ್ಕೆ ಕಾರಣವಾಗುತ್ತದೆ.
ಆದರೆ ಇಲ್ಲಿ ನಡೆದಿರುವುದೇ ಬೇರೆ, ಗಂಡ ಗಡ್ಡ ತೆಗೆಯಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆ ಮೈದುನನೊಂದಿಗೆ ಓಡಿ ಹೋಗಿದ್ದಾಳೆ. ಈ ವಿವಾಹೇತರ ಸಂಬಂಧದ ಹಿಂದಿನ ಕಾರಣ ಸಾಕಷ್ಟು ಕುತೂಹಲಕಾರಿಯಾಗಿದೆ.
ಮಹಿಳೆ ಮೀರತ್ನಲ್ಲಿ ಮೌಲಾನಾ ಒಬ್ಬರನ್ನು ವಿವಾಹವಾಗಿದ್ದಳು, ಮದುವೆಯ ಸಮಯದಲ್ಲಿ ಗಂಡನಿಗಿದ್ದ ಗಡ್ಡ ಆಕೆಗೆ ಇಷ್ಟವಾಗಲಿಲ್ಲ. ಆಕೆ ತನ್ನ ಮನಸ್ಸಿನಲ್ಲಿರುವುದನ್ನು ಗಂಡನ ಬಳಿ ಹೇಳಿಕೊಂಡು ಗಡ್ಡವನ್ನು ಬೋಳಿಸಲು ಕೇಳಿದ್ದಾಳೆ. ಆದರೆ ಆತ ಅದನ್ನು ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.
ಆದರೆ ಸ್ವಲ್ಪ ಸಮಯದ ನಂತರ ಆಕೆ ಜಗಳವಾಡುವುದನ್ನು ನಿಲ್ಲಿಸಿದ್ದಳು, ಅದು ಬಿರುಗಾಳಿ ಬರುವುದಕ್ಕೂ ಮುನ್ನ ಇರುವ ಶಾಂತತೆಯ ರೀತಿ ಅನಿಸುತ್ತಿತ್ತು. ಆಕೆ ತನ್ನ ಗಂಡನ ತಮ್ಮನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ಬಳಿಕ ಆಕೆ ಮೈದುನನ ಜತೆ ಓಡಿ ಹೋಗಿದ್ದಾಳೆ. ಆತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಕೆಯನ್ನು ಹುಡುಕಲಾಗುತ್ತಿದೆ.
ಮತ್ತಷ್ಟು ಓದಿ: ಮದುವೆ ಕಾರ್ಡ್ ನಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಅರ್ಹತೆ ಉಲ್ಲೇಖಿಸಿದ ಮದುಮಗ
ಮೀರತ್‌ನ ಲಿಸಾಡಿ ಗೇಟ್‌ನ ಉಜ್ವಲ್ ಗಾರ್ಡನ್‌ನಲ್ಲಿ ಇಬ್ಬರು ವಾಸವಿದ್ದರು. ಏಳು ತಿಂಗಳ ಹಿಂದೆ ಇಂಚೌಲಿಯ ಯುವತಿಯನ್ನು ವಿವಾಹವಾಗಿದ್ದರು. ಅವನು ತನ್ನೊಂದಿಗೆ ವಾಸಿಸಲು ಬಯಸಿದರೆ, ಅವನು ತನ್ನ ಗಡ್ಡವನ್ನು ಬೋಳಿಸಿಕೊಳ್ಳಬೇಕು ಎಂದು ಆ ಮಹಿಳೆ ಹೇಳಿದಳು. ಆದರೆ ಇದಾದ ನಂತರವೂ ಪತಿ ಕೇಳದಿದ್ದಾಗ, ಮಹಿಳೆ ತನ್ನ ಮೈದುನನ ಜತೆ ಓಡಿ ಹೋಗಿದ್ದಾಳೆ. ದೂರಿನಲ್ಲಿ ಪತಿ ಇಬ್ಬರ ನಡುವಿನ ಪ್ರೇಮ ಸಂಬಂಧವನ್ನು ಉಲ್ಲೇಖಿಸಿದ್ದಾರೆ.
ತನಿಖೆಯಿಂದ ಮಹಿಳೆ ಲುಧಿಯಾನದಲ್ಲಿದ್ದಾಳೆಂದು ತಿಳಿದುಬಂದಿದೆ. ಮಹಿಳೆಯನ್ನು ಕರೆತರಲು ಪೊಲೀಸರು ಒಂದು ತಂಡವನ್ನು ರಚಿಸಿದ್ದು, ಮಹಿಳೆ ನಿರ್ದಿಷ್ಟ ಸ್ಥಳಕ್ಕೆ ತೆರಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ