Uttar Pradesh: ಗೂಡ್ಸ್​ ರೈಲು ಮೈ ಮೇಲೆ ಹರಿದರೂ ಪವಾಡವೆಂಬಂತೆ ಬದುಕಿ ಬಂದ ಮಹಿಳೆ

|

Updated on: Jul 03, 2023 | 12:18 PM

ಗೂಡ್ಸ್​ ರೈಲೊಂದು ಮೈ ಮೇಲೆ ಹರಿದರೂ ಪವಾಡವೆಂಬಂತೆ ಮಹಿಳೆ ಬದುಕಿ ಬಂದಿದ್ದಾಳೆ. ಉತ್ತರ ಪ್ರದೇಶದ ಕಾಸ್​ಗಂಜ್​ನಲ್ಲಿ ಘಟನೆ ನಡೆದಿದೆ. ಹರ್​ಪ್ಯಾರಿ ಎನ್ನುವ ಆರ್ಯ ನಗರ ನಿವಾಸಿ ಔಷಧಿ ತರಲೆಂದು ಹೋಗುತ್ತಿದ್ದರು

Uttar Pradesh: ಗೂಡ್ಸ್​ ರೈಲು ಮೈ ಮೇಲೆ ಹರಿದರೂ ಪವಾಡವೆಂಬಂತೆ ಬದುಕಿ ಬಂದ ಮಹಿಳೆ
ಗೂಡ್ಸ್​ ರೈಲು( ಸಾಂದರ್ಭಿಕ ಚಿತ್ರ)
Follow us on

ಗೂಡ್ಸ್​ ರೈಲೊಂದು ಮೈ ಮೇಲೆ ಹರಿದರೂ ಪವಾಡವೆಂಬಂತೆ ಮಹಿಳೆ ಬದುಕಿ ಬಂದಿದ್ದಾಳೆ. ಉತ್ತರ ಪ್ರದೇಶದ ಕಾಸ್​ಗಂಜ್​ನಲ್ಲಿ ಘಟನೆ ನಡೆದಿದೆ.
ಹರ್​ಪ್ಯಾರಿ ಎನ್ನುವ ಆರ್ಯ ನಗರ ನಿವಾಸಿ ಔಷಧಿ ತರಲೆಂದು ಹೋಗುತ್ತಿದ್ದರು. ಸಹಾವರ್ ಗೇಟ್​ನಲ್ಲಿ ರೈಲ್ವೆ ಗ್ರೇಡ್-ಕ್ರಾಸಿಂಗ್ ಅನ್ನು ಹಾದು ಹೋಗುವಾಗ ರೈಲು ಬಂದಿದೆ ಭಯಗೊಂಡು ಹಳಿ ಮೇಲೆ ಬಿದ್ದಿದ್ದಾಳೆ. ಆದರೂ ಹೆಚ್ಚಿನ ಗಾಯಗಳಾಗದೆ ಪಾರಾಗಿದ್ದಾರೆ.

ಪಕ್ಕದಲ್ಲಿದ್ದವರ್ಯಾರು ಆಕೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ, ತಕ್ಷಣವೇ ಸರಕು ಸಾಗಣೆ ರೈಲನ್ನು ನಿಲ್ಲಿಸಲಾಯಿತು. ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುವುದು ರೈಲ್ವೆ ನಿಯಮದಡಿ ಶಿಕ್ಷಾರ್ಹ ಅಪರಾಧ. ಇದರಡಿ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಕಾನೂನಿನ ಹೊರತಾಗಿಯೂ, ಮಾನವರಹಿತ ರೈಲು ಹಳಿಗಳನ್ನು ಮತ್ತು ಕ್ರಾಸಿಂಗ್​ಗಳನ್ನು ದಾಟುವ ಅಪಾಯಕಾರಿ ಅಭ್ಯಾಸವು ದೇಶದಲ್ಲಿ ಮುಂದುವರೆದಿದೆ.

ಮತ್ತಷ್ಟು ಓದಿ: Rajasthan: ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ ಮಗಳು ಸಾವು

ಮತ್ತೊಂದು ಘಟನೆ

ರೈಲು ಹತ್ತುವಾಗ ಆಯತಪ್ಪಿ ಬಿದ್ದು ತಂದೆ ಹಾಗೂ 5 ವರ್ಷದ ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ನಿಲ್ದಾಣದಲ್ಲಿ ನಡೆದಿದೆ. ಭೀಮಾರಾವ್ ಅವರು ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಪಾಲಿ ಜಿಲ್ಲೆಯ ಫಲ್ನಾಗೆ ತೆರಳಲು ಬಂದಿದ್ದರು.

ಭೀಮಾರಾವ್ ಕಿಕ್ಕಿರಿದು ತುಂಬಿದ್ದ ಸಬರಮತಿ-ಜೋಧ್​ಪುರ ಪ್ಯಾಸೆಂಜರ್​ ರೈಲು ಹತ್ತುವಾಗ ಸಮತೋಲನ ಕಳೆದುಕೊಂಡು ಮಗಳು ಮೋನಿಕಾ ಜತೆ ಕೆಳಗೆ ಬಿದ್ದಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ