Excellence Awards: ಮೈ ಹೋಮ್ ಇಂಡಸ್ಟ್ರೀಸ್ಗೆ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಪ್ರಶಸ್ತಿ; ತೆಲಂಗಾಣದ 21 ಇತರ ಸಂಸ್ಥೆಗಳಿಗೂ ವಿವಿಧ ಪ್ರಶಸ್ತಿಗಳು
FTCCI Gives 22 Excellence Awards in Telangana: ತೆಲಂಗಾಣದ ಎಫ್ಟಿಸಿಸಿಐ ಸಂಘಟನೆಯು ವಿವಿಧ ಉದ್ಯಮಗಳನ್ನು ಒಳಗೊಂಡಂತೆ 22 ಸಂಸ್ಥೆ ಮತ್ತು ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ. ಇದರಲ್ಲಿ ಮೈ ಹೋಮ್ ಇಂಡಸ್ಟ್ರೀಸ್ ಸಂಸ್ಥೆಗೆ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಪ್ರಶಸ್ತಿ ಕೊಡಲಾಗಿದೆ.
ಹೈದರಾಬಾದ್: ಮೈ ಹೋಮ್ ಇಂಡಸ್ಟ್ರೀಸ್ ಪ್ರೈ ಲಿ ಸಂಸ್ಥೆಗೆ ತೆಲಂಗಾಣ ವಾಣಿಜ್ಯ ಮತ್ತು ಉದ್ಯಮ ಮಹಾ ಮಂಡಳಿ (FTCCI- Federation of Telangana Chambers of Commerce and Industries) ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಶ್ರೇಷ್ಠತೆ (Excellence in Corporate Social Responsibility) ಪ್ರಶಸ್ತಿಗೆ ಮೈ ಹೋಮ್ ಇಂಡಸ್ಟ್ರೀಸ್ (My Home Industries) ಅನ್ನು ಆಯ್ಕೆ ಮಾಡಲಾಗಿದೆ. ಮೈ ಹೋಮ್ ಇಂಡಸ್ಟ್ರೀಸ್ ಸೇರಿದಂತೆ 22 ಸಂಸ್ಥೆಗಳಿಗೆ 2022ರ ಸಾಲಿನ ಎಫ್ಟಿಸಿಸಿಐ ಎಕ್ಸೆಲೆನ್ಸ್ ಪ್ರಶಸ್ತಿಗಳು ಲಭಿಸಿವೆ. ಮಹೀಂದ್ರ ಅಂಡ್ ಮಹೀಂದ್ರ ಕಂಪನಿಗೆ ಆಲ್ರೌಂಡ್ ಸಾಧನೆಯಲ್ಲಿ ಶ್ರೇಷ್ಠತೆ ಪ್ರಶಸ್ತಿ ಲಭಿಸಿದೆ. ವರ್ಷದ ಅತ್ಯುತ್ತಮ ಸ್ಟಾರ್ಟಪ್ ಪ್ರಶಸ್ತಿಗೆ ಸ್ಮಾರ್ಟ್ ಚೆಕ್ ಅನ್ನು ಆಯ್ಕೆ ಮಾಡಲಾಗಿದೆ. ಟಾಲಿವುಡ್ನ ಉಷಾ ಕಿರಣ್ ಮೂವೀಸ್ಗೆ ಪ್ರವಾಸೋದ್ಯೋಮಕ್ಕೆ ಉತ್ತೇಜಿಸಿದ ಕಾರ್ಯಕ್ಕೆ ಪ್ರಶಸ್ತಿ ಕೊಡಲಾಗಿದೆ.
ಇಂದು (ಜುಲೈ 3) ಹೈದರಾಬಾದ್ನಲ್ಲಿ ನಡೆಯುವ ಸಮಾರಂಭದಲ್ಲಿ ತೆಲಂಗಾಣ ಐಟಿ ಮತ್ತು ಉದ್ಯಮ ಸಚಿವ ಕೆ.ಟಿ. ರಾಮರಾವ್ ಮುಖ್ಯ ಅತಿಥಿಯಾಗಿದ್ದು, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಗ್ರೀನ್ಕೋ ಗ್ರೂಪ್ನ ಸಿಇಒ ಮತ್ತು ಎಂಡಿ ಅನಿಲ್ ಕುಮಾರ್ ಚಾಮಲಶೆಟ್ಟಿ, ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಎಸ್ ಅಧಿಕಾರಿ ಜಯೇಶ್ ರಂಜನ್ ಅವರೂ ಅತಿಥಿಗಳಾಗಿದ್ದು, ಅವರಿಂದಲೂ ಕೆಲವರಿಗೆ ಪ್ರಶಸ್ತಿ ಪ್ರದಾನ ಆಗಲಿದೆ.
ಇದನ್ನೂ ಓದಿ: Tata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ
ಮೈ ಹೋಮ್ ಇಂಡಸ್ಟ್ರೀಸ್ ಸಂಸ್ಥೆ ದಕ್ಷಿಣ ಭಾರತದ ಅತಿದೊಡ್ಡ ಸಿಮೆಂಟ್ ಕಂಪನಿಗಳಲ್ಲಿ ಒಂದಾಗಿದೆ. ಇದರ ಮಹಾ ಸಿಮೆಂಟ್ ಕರ್ನಾಟಕ ಸೇರಿದಂತೆ ವಿವಿಧ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಒಡಿಶಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ ಮೊದಲಾದ ರಾಜ್ಯಗಳಲ್ಲಿ ಮಾರುಕಟ್ಟೆ ಹೊಂದಿದೆ. ಸಿಮೆಂಟ್ ಉತ್ಪಾದನೆಯಲ್ಲಿ ಜಾಗತಿಕ ದೈತ್ಯ ಸಿಆರ್ಎಚ್ ಪಿಎಲ್ಸಿ ಜೊತೆ ಮೈ ಹೋಮ್ ಇಂಡಸ್ಟ್ರೀಸ್ ಒಪ್ಪಂದ ಹೊಂದಿದೆ. ಮೈ ಹೋಮ್ ಇಂಡಸ್ಟ್ರೀಸ್ ಸಿಮೆಂಟ್ ಮಾತ್ರವಲ್ಲ, ರಿಯಲ್ ಎಸ್ಟೇಟ್, ಸಾರಿಗೆ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲೂ ಇದೆ. ಕಳೆದ ಕೆಲ ವರ್ಷಗಳಿಂದ ಗಣನೀಯವಾಗಿ ವ್ಯವಹಾರ ವೃದ್ದಿ ಕಂಡಿರುವ ಮೈ ಹೋಮ್ ಇಂಡಸ್ಟ್ರೀಸ್ ಹಲವು ಸಾಮಾಜಿಕ ಕಲ್ಯಾಣ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸಿ ಸಾಮಾಜಿಕ ಕಳಕಳಿ ತೋರುತ್ತಾ ಬಂದಿದೆ. ಇದರ ಸಾಧನೆ ಗುರುತಿಸಿ ತೆಲಂಗಾಣದ ಎಫ್ಟಿಸಿಸಿಐ ಎಕ್ಸೆಲೆನ್ಸ್ ಅವಾರ್ಡ್ ದಯಪಾಲಿಸಿದೆ.
ಮೈ ಹೋಂ ಸಾಮಾಜಿಕ ಕೈಂಕರ್ಯಗಳು ಸಾಮಾನ್ಯವಲ್ಲ
ಪರಿಸರಕ್ಕೆ ಹಾನಿಯಾಗದ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಾಣಕ್ಕೆ ಮೈ ಹೋಂ ಇಂಡಸ್ಟ್ರೀಸ್ ಹೆಸರುವಾಸಿಯಾಗಿದೆ. ಈಗಾಗಲೇ ಸಾಕಷ್ಟು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ಗಮನ ಸೆಳೆದಿರುವ ಸಂಸ್ಥೆ ಇನ್ನಷ್ಟು ಉತ್ಸಾಹದಿಂದ ಮುನ್ನಗ್ಗಲು ಈ ಪ್ರಶಸ್ತಿ ಸ್ಫೂರ್ತಿ ನೀಡಿರುವುದಾಗಿ ಹೇಳಿಕೊಂಡಿದೆ.
ಇದನ್ನೂ ಓದಿ: Anand Mahindra: ಆ ಒಂದು ಕಾರು ಇಲ್ಲದೇ ಹೋಗಿದ್ದರೆ ನಾನಿಷ್ಟರಲ್ಲಿ ಕಂಪನಿ ಬಿಟ್ಟುಹೋಗಬೇಕಿತ್ತು: ಆನಂದ್ ಮಹೀಂದ್ರ
ಮೆಡಿಕಲ್ ಕ್ಯಾಂಪ್, ವೆಟರಿನರಿ ಕ್ಯಾಂಪ್ಗಳನ್ನು ನಡೆಸುವುದು; ಟಾಯ್ಲೆಟ್ಗಳ ನಿರ್ಮಾಣ, ಶಾಲೆಗಳು, ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು; ಗ್ರಾಮೀಣ ಭಾಗದಲ್ಲಿ ಬೀದಿ ದೀಪ, ರಸ್ತೆ ಸಂಪರ್ಕ; ವಿಪತ್ತು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಉದಾರ ದೇಣಿಗೆ; ಗಣಿಗಾರಿಕೆ ಪ್ರದೇಶಗಳಲ್ಲಿ ಹೊಂಡ ನಿರ್ಮಿಸಿ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು ಇವೇ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಮೈ ಹೋಮ್ಸ್ ಇಂಡಸ್ಟ್ರೀಸ್ ಸಂಸ್ಥೆ ಹೇಳಿದೆ.
ಎಫ್ಟಿಸಿಸಿಐ ಎಕ್ಸೆಲೆನ್ಸ್ ಪ್ರಶಸ್ತಿ 2022 ಪುರಸ್ಕೃತರ ಪಟ್ಟಿ
- ಇಂಡಸ್ಟ್ರಿಯಲ್ ಪ್ರೊಡಕ್ಟಿವಿಟಿ: ವಸಂತ್ ಟೂ ಕ್ರಾಫ್ಟ್ಸ್
- ಆಲ್ರೌಂಡ್ ಪರ್ಫಾರ್ಮೆನ್ಸ್: ಮಹೀಂದ್ರ ಅಂಡ್ ಮಹೀಂದ್ರ
- ಆಗ್ರೋ ಬೇಸ್ಟ್ ಇಂಡಸ್ಟ್ರಿ: ಕರಣ್ ಸ್ಪೈಸಸ್
- ಮಾರ್ಕೆಟ್ ಇನೋವೇಶನ್: ಕೌಡ್ಪೋರ್ಟಲ್ ಟೆಕ್ನಾಲಜಿ ಸಲ್ಯೂಷನ್ಸ್
- ಎಕ್ಸ್ಪೋರ್ಟ್ ಪರ್ಫಾರ್ಮೆನ್ಸ್: ನವಾ ಲಿಮಿಟೆಡ್
- ಎಕ್ಸ್ಪೋರ್ಟ್ ಪರ್ಫಾರ್ಮೆನ್ಸ್ (ಎಂಎಸ್ಇ): ಹನ್ಸ್ ಪ್ರಾಡಕ್ಟ್ಸ್
- ರಿನಿವಬಲ್ ಎನರ್ಜಿ ಡೆವಲಪ್ಮೆಂಟ್: ವಿಂಡ್ಸ್ಟ್ರೀಮ್ ಎನರ್ಜಿ ಟೆಕ್ನಾಲಜೀಸ್
- ಎಂಪ್ಲಾಯೀಸ್ ವೆಲ್ಫೇರ್ ಇನಿಷಿಯೇಟಿವ್ಸ್: ಎನ್ಸಿಎಲ್ ಇಂಡಸ್ಟ್ರೀಸ್ ಲಿ
- ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ: ಮೈ ಹೋಮ್ ಇಂಡಸ್ಟ್ರೀಸ್ ಲಿ
- ಪ್ರಾಡಕ್ಟ್ ಇನೋವೇಶನ್: ಶಿವನಾರಾಯಣ್ ಜ್ಯೂವೆಲರ್ಸ್
- ಪ್ರಾಡಕ್ಟ್ (ಎಂಎಸ್ಇ): ಎಚ್ಸಿ ರೋಬೋಟಿಕ್ಸ್ ಪ್ರೈ ಲಿ
- ಇನೋವೇಟಿವ್ ಪ್ರಾಡಕ್ಟ್ ಇನ್ ಹೆಲ್ತ್ಕೇರ್: ರೆಲಿಸಿಸ್ ಮೆಡಿಕಲ್ ಡಿವೈಸಸ್
- ರೀಸರ್ಚ್ ಅಂಡ್ ಡೆವಲಪ್ಮೆಂಟ್ (ಎಂಎಸ್ಇ): ಮೋಷನ್ ಡೈನಮಿಕ್ ಪ್ರೈ ಲಿ
- ಏರೋಸ್ಪೇಸ್ ಅಂಡ್ ಡಿಫೆನ್ಸ್ ಇಂಡಸ್ಟ್ರಿಗೆ ಕೊಡುಗೆ: ಎಂಕ್ಯೂಎಸ್ ಟೆಕ್ನಾಲಜೀಸ್
- ಇನ್ಫಾರ್ಮೇಶನ್ ಟೆಕ್ನಾಲಜಿ: ದಿ ಆದರ್ಶ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್
- ಟೂರಿಸಂ ಪ್ರೊಮೋಷನ್: ಉಷಾ ಕಿರಣ್ ಮೂವೀಸ್
- ಉದ್ಯಮ, ವಾಣಿಜ್ಯ ಮತ್ತು ಆರ್ಥಿಕತೆಗೆ ಸೇವೆ: ತೆಲಂಗಾಣ ಮತ್ತು ಆಂಧ್ರಪ್ರದೇಶ ಪ್ಲಾಸ್ಟಿಕ್ ತಯಾರಕರ ಸಂಘ
- ವಿಜ್ಞಾನ ಅಥವಾ ಎಂಜಿನಿಯರಿಂಗ್: ಡಾ. ನಯನಿ ಕಿಶೋರ್ ನಾಥ್
- ಮಹಿಳಾ ಉದ್ಯಮಿ ಸಾಧಕಿ: ಗರಿಮಾ ಭಾರ್ಗವ (ಅಮೋನಿಯಾ ಅಂಡ್ ಕೆಮಿಕಲ್ಸ್ ಸಂಸ್ಥೆ ನಿರ್ದೇಶಕಿ)
- ವಿಶೇಷ ಚೇತನ ವ್ಯಕ್ತಿ ಸಾಕರು: ಹರ್ಮಹರ್ ಕೌರ್ ಗ್ರೆವಾಲ್
- ಮಹಿಳಾ ಸಬಲೀಕರಣಕ್ಕಾಗಿ ಸಮಾಜ ಕಲ್ಯಾಣ ಯೋಜನೆ: ಚೇಯುತಾ ಫೌಂಡೇಶನ್ (ಎನ್ಜಿಒ)
- ವರ್ಷದ ಅತ್ಯುತ್ತಮ ಸ್ಟಾರ್ಟಪ್: ಸ್ಮಾರ್ಟ್ ಚೆಕ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Mon, 3 July 23