Rajasthan: ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ ಮಗಳು ಸಾವು
ರೈಲು ಹತ್ತುವಾಗ ಆಯತಪ್ಪಿ ಬಿದ್ದು ತಂದೆ ಹಾಗೂ 5 ವರ್ಷದ ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ನಿಲ್ದಾಣದಲ್ಲಿ ನಡೆದಿದೆ.
ರೈಲು ಹತ್ತುವಾಗ ಆಯತಪ್ಪಿ ಬಿದ್ದು ತಂದೆ ಹಾಗೂ 5 ವರ್ಷದ ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ನಿಲ್ದಾಣದಲ್ಲಿ ನಡೆದಿದೆ. ಭೀಮಾರಾವ್ ಅವರು ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಪಾಲಿ ಜಿಲ್ಲೆಯ ಫಲ್ನಾಗೆ ತೆರಳಲು ಬಂದಿದ್ದರು.
ಭೀಮಾರಾವ್ ಕಿಕ್ಕಿರಿದು ತುಂಬಿದ್ದ ಸಬರಮತಿ-ಜೋಧ್ಪುರ ಪ್ಯಾಸೆಂಜರ್ ರೈಲು ಹತ್ತುವಾಗ ಸಮತೋಲನ ಕಳೆದುಕೊಂಡು ಮಗಳು ಮೋನಿಕಾ ಜತೆ ಕೆಳಗೆ ಬಿದ್ದಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಮತ್ತಷ್ಟು ಓದಿ: ಕೊಪ್ಪಳದಲ್ಲಿ ಚಲಿಸುವ ರೈಲಿನಿಂದ ಹಾರಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ರೈಲು ಹತ್ತುವಾಗ ಇಳಿಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಸಾಕಷ್ಟು ಘಟನೆಗಳಿವೆ, ಹಾಗೆಯೇ ರೈಲ್ವೆ ಪೊಲೀಸರು ಹಲವು ಮಂದಿಯ ಜೀವವನ್ನು ರಕ್ಷಿಸಿದ ಕೆಲವು ಘಟನೆಗಳು ಕೂಡ ನಮ್ಮ ಕಣ್ಣಮುಂದಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ