Opposition Meeting Postponed: ಜುಲೈ 17-18ರಂದು ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ: ಕಾಂಗ್ರೆಸ್
ಸಂಸತ್ ಮುಂಗಾರು ಅಧಿವೇಶನ(Parliament Monsoon Session) ದ ನೆಪವೊಡ್ಡಿ ಪ್ರತಿಪಕ್ಷಗಳು ತಮ್ಮ ಸಭೆಯನ್ನು ಮತ್ತೆ ಮುಂದೂಡಿವೆ. ಇದೀಗ ಜುಲೈ 17-18ರಂದು ಪ್ರತಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ
ಸಂಸತ್ ಮುಂಗಾರು ಅಧಿವೇಶನ(Parliament Monsoon Session) ದ ನೆಪವೊಡ್ಡಿ ಪ್ರತಿಪಕ್ಷಗಳು ತಮ್ಮ ಸಭೆಯನ್ನು ಮತ್ತೆ ಮುಂದೂಡಿವೆ. ಇದೀಗ ಜುಲೈ 17-18ರಂದು ಪ್ರತಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ. ಎನ್‌ಸಿಪಿಯಲ್ಲಿ ಉದ್ಭವವಾಗಿರುವ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ವಿಪಕ್ಷಗಳ ಒಗ್ಗಟ್ಟಿಗೂ ಬೆದರಿಕೆಗಳು ಎದುರಾಗಿವೆ. ಪಾಟ್ನಾ ನಂತರ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರತಿಪಕ್ಷಗಳ ಸಭೆಯನ್ನು ಸಂಸತ್ ಅಧಿವೇಶನದವರೆಗೆ ಮುಂದೂಡಲಾಗಿದೆ. ಈ ಒಗ್ಗಟ್ಟಿನ ಪ್ರಮುಖ ಮುಖವೆಂದು ಪರಿಗಣಿಸಲಾದ ಶರದ್ ಪವಾರ್ ಅವರ ಪಕ್ಷದ ಆಜ್ಞೆಯನ್ನು ಈಗ ಪ್ರಶ್ನಿಸಿರುವ ಕಾರಣ ಪ್ರತಿಪಕ್ಷಗಳ ಒಗ್ಗಟ್ಟಿಗೂ ದೊಡ್ಡ ಹೊಡೆತ ಬಿದ್ದಿದೆ.
ಈ ಮೊದಲು ಮೇ 23ಕ್ಕೆ ಪಾಟ್ನಾದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು, ಬಳಿಕ ಜುಲೈ 13-14ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ಮುಂಗಾರು ಅಧಿವೇಶನದ ನಂತರ ನಡೆಸಲಾಗುವುದು ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಂಡ ನಾಯಕರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ: ಅಮಿತ್ ಶಾ
ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಸುಮಾರು 15 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಭಾಗವಹಿಸಿದ್ದರು. ಇದಲ್ಲದೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಸಭೆಯಲ್ಲಿದ್ದರು.
ಪಾಟ್ನಾದ ಸಭೆಯ ನಂತರ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದರೂ ಕೂಡ, ಅನೇಕ ಪಕ್ಷಗಳು ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಬಿಜೆಪಿಯಂತೆಯೇ ವಿಭಿನ್ನ ಅಭಿಪ್ರಾಯ ಹೊಂದಿದ್ದವು. ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷವು ಯುಸಿಸಿಗೆ ತಾತ್ವಿಕ ಬೆಂಬಲ ನೀಡಿದ್ದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆ ಕೂಡ ಅದೇ ನಿಲುವನ್ನು ಹೊಂದಿತ್ತು. ಇದಲ್ಲದೆ ಶರದ್ ಪವಾರ್ ಎನ್ಸಿಪಿ ಕೂಡ ತಟಸ್ಥವಾಗಿತ್ತು.
ಅಜಿತ್ ಪವಾರ್ ಎನ್ಸಿಪಿ ತೊರೆದು ಏಕನಾಥ್ ಶಿಂದೆ ಸರ್ಕಾರ ಸೇರಿ ಈಗ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್ಸಿಪಿಯು ಕೂಡ ಶಿವಸೇನೆಯಂತೆ ಇಬ್ಭಾಗವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:00 am, Mon, 3 July 23