ಕೊಪ್ಪಳದಲ್ಲಿ ಚಲಿಸುವ ರೈಲಿನಿಂದ ಹಾರಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ

ತೇಜಶ್ರೀ ಕಳೆದ 3 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ನಿನ್ನೆ (ಜುಲೈ 2) ಸಂಜೆ ಹೊತ್ತಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಕೊಪ್ಪಳದಲ್ಲಿ ಚಲಿಸುವ ರೈಲಿನಿಂದ ಹಾರಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಮೃತ ವಿದ್ಯಾರ್ಥಿನಿ ತೇಜಶ್ರೀ
TV9kannada Web Team

| Edited By: sandhya thejappa

Jul 03, 2022 | 2:51 PM

ಕೊಪ್ಪಳ: ಚಲಿಸುತ್ತಿದ್ದ ರೈಲಿನಿಂದ (Rail) ಹಾರಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕಿಡದಾಳ್ ರೈಲ್ವೆ ಗೇಟ್ ಬಳಿ ಸಂಭವಿಸಿದೆ. ಬಳ್ಳಾರಿ ಮೂಲದ ತೇಜಶ್ರೀ(22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ತೇಜಶ್ರೀ ಕಳೆದ 3 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ನಿನ್ನೆ (ಜುಲೈ 2) ಸಂಜೆ ಹೊತ್ತಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಸದ್ಯ ಈ ಬಗ್ಗೆ ಗದಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿದ್ದ ಇಬ್ಬರು ದುರ್ಮರಣ: ಕಲಬುರಗಿ: ಕ್ರೂಸರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ದುರ್ಮರಣ ಹೊಂದಿದ್ದಾರೆ. ಈ ದುರ್ಘಟನೆ ಕಮಲಾಪುರ ತಾಲೂಕಿನ ಭೀಮನಾಳ ಕ್ರಾಸ್ ಬಳಿ ನಡೆದಿದೆ. ತೆಲಂಗಾಣದ ಮೊಹಮ್ಮದ್ ಅಬ್ದುಲ್ ಮಜೀದ ಸಿದ್ಧಿಖಿ(71), ಸಾದಯಾ ಖುನ್ನಿಸಾ ಬೇಗಂ(55) ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: IND vs ENG: ಸಿರಾಜ್, ಶಮಿ, ಬುಮ್ರಾ ಬೆಂಕಿ ಬೌಲಿಂಗ್​: ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆ

ಕಾರಾಗೃಹದ ಮೇಲೆ ಪೊಲೀಸರ ದಾಳಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸಿಮ್ ಕಾರ್ಡ್,‌ ನಗದು,‌ ಮೊಬೈಲ್ ಫೋನ್​ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ಇನ್ನು  ಪಾತ್ರೆಗಳಿಂದ ಮಾಡಿದ ಚಾಕು ಪತ್ತೆಯಾಗಿದೆ. ಡಿಸಿಪಿ ಸುನಿಲ್ ಜೋಶಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ. ಜೈಲಿನ ಒಳಗೆ ಅಕ್ರಮ ಚಟುವಟಿಕೆ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆ ಜೈಲಿನಲ್ಲಿದ್ದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿತ್ತು. ವರ್ಗಾವಣೆಯಾದ 2 ವಾರಗಳ ಬಳಿಕ ಪೊಲೀಸರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ

ಇದನ್ನೂ ಓದಿ: Swollen Gums: ಮಕ್ಕಳ ವಸಡಿನಲ್ಲಿ ಊತ ಕಾಣಿಸಿಕೊಳ್ಳಲು ಕಾರಣಗಳೇನು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada