ಉತ್ತರ ಪ್ರದೇಶದ ಟೋಲ್ ಒಂದರಲ್ಲಿ ಕಾರು ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿರುವ ಘಟನೆ ವರದಿಯಾಗಿದೆ. ದೆಹಲಿ-ಲಕ್ನೋ ಹೆದ್ದಾರಿಯಲ್ಲಿರುವ ಛಜರ್ಸಿ ಟೋಲ್ ಪ್ಲಾಜಾದಲ್ಲಿ, ವ್ಯಕ್ತಿಯೊಬ್ಬ ತನ್ನ ಕಾರನ್ನು ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆಸಿ ಬಳಿಕ ಕಾರಿನಲ್ಲಿ ಸ್ವಲ್ಪ ದೂರ ಎಳೆದೊಯ್ದ ಘಟನೆ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳಲ್ಲಿ ಚಾಲಕ ಅತಿವೇಗದಲ್ಲಿ ಬಂದ ಕಾರು, ಬೇಕಂತಲೇ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದಂತೆ ತೋರುತ್ತದೆ.
ಡಿಕ್ಕಿ ಹೊಡೆದ ಬಳಿಕ ಇದಾದ ಬಳಿಕ ಸ್ವಲ್ಪ ದೂರ ಎಳೆದೊಯ್ದಿದ್ದಾರೆ. ಅಷ್ಟರಲ್ಲಿ ಅಲ್ಲಿ ನಿಂತಿದ್ದವರ ಕೂಗಾಟದಿಂದಾಗಿ ಕಾರನ್ನು ನಿಲ್ಲಿಸಿದ್ದಾರೆ.
#Hapur, #UttarPradesh: A car rams into a toll booth staff at Delhi-Lucknow highway at Chhajarsi Toll Plaza. pic.twitter.com/kQJfcDpgXq
— Sanjay Jha (@JhaSanjay07) August 6, 2023
ಘಟನೆಯ ಕುರಿತು ಪಿಲ್ಖುವಾ ಸರ್ಕಲ್‌ನ ಡಿಸಿಪಿ ವರುಣ್ ಮಿಶ್ರಾ, ಮಾತನಾಡಿ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಛಜರ್ಸಿ ಟೋಲ್ ಪ್ಲಾಜಾ ಸಿಬ್ಬಂದಿಗೆ ಕಾರು ಡಿಕ್ಕಿ ಹೊಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ: ಟೋಲ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ; ಫಾಲೋ ಮಾಡಿಕೊಂಡು ಹೋಗಿ ಟೋಲ್ ಸಿಬ್ಬಂದಿ ಹತ್ಯೆ
ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಶೀಘ್ರದಲ್ಲೇ ಕಾರು ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಟೋಲ್ ಪ್ಲಾಜಾ ಸಿಬ್ಬಂದಿ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ