ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿರಬೇಕೆಂದೇ ಬಯಸುತ್ತಾರೆ, ಎಲ್ಲಾ ಪೋಷಕರಂತೆಯೇ ಈ ಪೋಷಕರು ಕೂಡ ಮಗ ದಾರಿ ತಪ್ಪುತ್ತಿರುವುದನ್ನು ನೋಡಲಾಗದೆ ತಾವು ಇಷ್ಟಪಟ್ಟು ಕೊಡಿಸಿದ್ದ ಬುಲೆಟ್ ಬೈಕ್ನ್ನು ಮಾರಾಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತಾಯಿ ಹಾಗೂ ಅಣ್ಣ ತನ್ನ ಬೈಕ್ ಅನ್ನು ಮಾರಾಟ ಮಾಡಿದ್ದಕ್ಕಾಗಿ, ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕನ ತಾಯಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಜನವರಿ 12 ರಂದು ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಹಿರಿಯ ಮಗನೊಂದಿಗೆ ಮನೆಗೆ ಮರಳಿದರು, ಅವರು ಬಂದಾಗ ಕಿರಿಯ ಮಗ ಮನೆಯ ಬಾಲ್ಕನಿಯಲ್ಲಿ ನಿಂತಿರುವುದನ್ನು ನೋಡಿದ್ದರು.
ಸ್ವಲ್ಪ ಸಮಯದ ಬಳಿಕ ತನ್ನ ರೂಮಿಗೆ ಹೋಗಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದ ಸದಸ್ಯರು ಕೊಠಡಿಯ ಕಿಟಕಿ ಒಡೆದು ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಮತ್ತಷ್ಟು ಓದಿ:
ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಯನ್ನೇ ಹತ್ಯೆಗೈದ ಪತಿ: ಜಾತ್ರೆಯಲ್ಲಿ ಹುಟ್ಟಿದ ಲವ್ ಜಾತ್ರೆಯಲ್ಲೇ ಅಂತ್ಯ
ಆತ್ಮಹತ್ಯೆಗೂ ಮುನ್ನ, ಹುಡುಗ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಸಾವಿನ ನಂತರ ಆತ್ಮಕ್ಕೆ ಏನಾಗುತ್ತದೆ ಎಂದು ಆನ್‌ಲೈನ್‌ನಲ್ಲಿ ಹುಡುಕಿದ್ದ ಎಂದು ವರದಿಯಾಗಿದೆ. ಬುಲಂದ್‌ಶಹರ್ ಮೂಲದ ಈ ಕುಟುಂಬ ಆರು ತಿಂಗಳ ಹಿಂದೆ ಅಪೆಕ್ಸ್ ಕಾಲೋನಿಯಲ್ಲಿ ಮನೆ ಖರೀದಿಸಿ ಮೀರತ್‌ಗೆ ತೆರಳಿತ್ತು. ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಪತಿಯನ್ನು ಕಳೆದುಕೊಂಡ ತಾಯಿ, ತನ್ನ ಇಬ್ಬರು ಗಂಡುಮಕ್ಕಳನ್ನು ಒಬ್ಬರೇ ಕಷ್ಟಪಟ್ಟು ಬೆಳೆಸುತ್ತಿದ್ದರು.
ಘಟನಾ ಸ್ಥಳದಿಂದ ಪೊಲೀಸರು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ತನಿಖೆಯ ಸಮಯದಲ್ಲಿ, ಹಲವು ಬಾರಿ ಆತ ಮಾಡಿಕೊಂಡಿರುವ ಸ್ನೇಹಿತರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿರುವುದಾಗಿ ಬೈದಿರುವುದಾಗಿ ತಾಯಿ ತಿಳಿಸಿದ್ದಾರೆ. ಕೆಟ್ಟವರೊಂದಿಗೆ ಸಹವಾಸ ಬೇಡವೆಂದು ಬೈಕ್ನ್ನು ಮಾರಾಟ ಮಾಡಿದ್ದರು.
ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ ಎಂದು ಮೀರತ್ ಗ್ರಾಮಾಂತರ ಎಸ್ಪಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಕುಟುಂಬವು ಯಾವುದೇ ಔಪಚಾರಿಕ ದೂರನ್ನು ದಾಖಲಿಸಿಲ್ಲಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ