ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಹುಡುಗನ ಹೆಸರು, ಗಲಾಟೆ, ಕೊನೆಗೆ ಮಗಳ ಮದುವೆಯನ್ನೇ ರದ್ದು ಮಾಡಿದ ಬಿಜೆಪಿ ನಾಯಕ

ಉತ್ತರಾಖಂಡದ ಬಿಜೆಪಿ ಮುಖಂಡರೊಬ್ಬರು ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಮುಸ್ಲಿಂ ಯುವಕನೊಂದಿಗೆ ಮಗಳ ಮದುವೆಯನ್ನು ರದ್ದುಗೊಳಿಸಿದ್ದಾರೆ. ಮೇ 28 ರಂದು ಮದುವೆ ನಡೆಯಬೇಕಿತ್ತು.

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಹುಡುಗನ ಹೆಸರು, ಗಲಾಟೆ, ಕೊನೆಗೆ ಮಗಳ ಮದುವೆಯನ್ನೇ ರದ್ದು ಮಾಡಿದ ಬಿಜೆಪಿ ನಾಯಕ
ಮದುವೆ

Updated on: May 22, 2023 | 12:18 PM

ಉತ್ತರಾಖಂಡದ ಬಿಜೆಪಿ ಮುಖಂಡರೊಬ್ಬರು ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಮುಸ್ಲಿಂ ಯುವಕನೊಂದಿಗೆ ಮಗಳ ಮದುವೆಯನ್ನು ರದ್ದುಗೊಳಿಸಿದ್ದಾರೆ. ಮೇ 28 ರಂದು ಮದುವೆ ನಡೆಯಬೇಕಿತ್ತು. ಪೌರಿ ಮುನಿಸಿಪಾಲಿಟಿ ಅಧ್ಯಕ್ಷ ಯಶ್ಪಾಲ್ ಬೇನಮ್ ತನ್ನ ಮಗಳ ಸಂತೋಷಕ್ಕಾಗಿ ಮುಸ್ಲಿಂ ಹುಡುಗನೊಂದಿಗೆ ಮದುವೆಗೆ ಒಪ್ಪಿಗೆ ನೀಡಿದ್ದರು, ಆದರೆ ಜನರು ಮದುವೆ ಕಾರ್ಡ್‌ನಲ್ಲಿ ಹೆಸರನ್ನು ಓದಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗದ್ದಲ ಸೃಷ್ಟಿಸಿದ್ದರು.

ಈಗ ಸೃಷ್ಟಿಯಾಗಿರುವ ವಾತಾವರಣ ನೋಡಿ ಎರಡೂ ಕುಟುಂಬಗಳು ಒಟ್ಟಾಗಿ ಕುಳಿತು ಸಾರ್ವಜನಿಕ ಪ್ರತಿನಿಧಿಯಾಗಿ ಪೊಲೀಸರ ಭದ್ರತೆಯಲ್ಲಿ ಮದುವೆ ಮಾಡುವುದು ಸರಿಯಲ್ಲ ಎಂದು ತೀರ್ಮಾನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮದುವೆ ಕಾರ್ಡ್ ವೈರಲ್ ಆಗಿದೆ
ಬಿಜೆಪಿ ಮುಖಂಡರೊಬ್ಬರ ಮಗಳ ಮದುವೆ ಕಾರ್ಡ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾರ್ಡ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು

ಬಿಜೆಪಿಯ ಬೆಂಬಲಿಗರು ಮತ್ತು ವಿರೋಧಿಗಳು ಬೇನಾಮ್ ಅನ್ನು ಟೀಕಿಸಿದ್ದಾರೆ.. ಸುದ್ದಿಗಾರರೊಂದಿಗೆ ಮಾತನಾಡಿದ ಯಶ್ಪಾಲ್ ಬೇನಮ್, ಮಗಳ ಸಂತೋಷಕ್ಕಾಗಿ ಮುಸ್ಲಿಂ ಹುಡುಗನಿಗೆ ಮದುವೆ ಯೋಜಿಸಿದ್ದೆ ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us