ಉತ್ತರಾಖಂಡ: ಪಿಕಪ್ ವಾಹನ ಕಮರಿಗೆ ಬಿದ್ದು ಎಂಟು ಸಾವು, ಮೂವರಿಗೆ ಗಾಯ

|

Updated on: Nov 17, 2023 | 3:59 PM

ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಚೆಡಾಖಾನ್-ಮಿದರ್ ರಸ್ತೆಯಲ್ಲಿ ಪಿಕ್-ಅಪ್ ವಾಹನವು ಕಮರಿಗೆ ಬಿದ್ದು ಎಂಟು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪಿಕ್-ಅಪ್ ಎಂಟು ಗಂಟೆ ಹೊತ್ತಿಗೆ ಪಟ್ಲೋಟ್‌ನಿಂದ ಅಮ್ಜದ್ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ನೈನಿತಾಲ್ ಹಿರಿಯ ಪೊಲೀಸ್ ಅಧೀಕ್ಷಕ ಪ್ರಹ್ಲಾದ್ ನಾರಾಯಣ ಮೀನಾ ತಿಳಿಸಿದ್ದಾರೆ.

ಉತ್ತರಾಖಂಡ: ಪಿಕಪ್ ವಾಹನ ಕಮರಿಗೆ ಬಿದ್ದು ಎಂಟು ಸಾವು, ಮೂವರಿಗೆ ಗಾಯ
ಅಪಘಾತ
Follow us on

ಇಂದು ಮುಂಜಾನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಚೆಡಾಖಾನ್-ಮಿದರ್ ರಸ್ತೆಯಲ್ಲಿ ಪಿಕಪ್ ವಾಹನವು ಕಮರಿಗೆ ಬಿದ್ದು ಎಂಟು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಪಿಕಪ್ ಎಂಟು ಗಂಟೆ ಸುಮಾರಿಗೆ ಪಟ್ಲೋಟ್‌ನಿಂದ ಅಮ್ಜದ್ ಗ್ರಾಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ನೈನಿತಾಲ್ ಹಿರಿಯ ಪೊಲೀಸ್ ಅಧೀಕ್ಷಕ ಪ್ರಹ್ಲಾದ್ ನಾರಾಯಣ ಮೀನಾ ತಿಳಿಸಿದ್ದಾರೆ. ಪಿಕಪ್ ಚಾಲಕ ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್​​​ನ್ನು ತಪ್ಪಿಸಲು ಹೋಗಿ ಪಿಕಪ್​​​​ ಕಮರಿಗೆ ಹೋಗಿ ಬಿದ್ದಿದೆ.

ಈ ಘಟನೆಯಿಂದ ಎಂಟು ಜನ ಸಾವನ್ನಪ್ಪಿದ್ದಾರೆ. ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇದರಲ್ಲಿ ಮೂರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾವನ್ನಪ್ಪಿರುವವರಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಕಾರಿಗೆ ಅಡ್ಡ ಬಂದ ಪ್ರಾಣಿಯನ್ನು ತಪ್ಪಿಸಲು ಹೋಗಿ ಅಪಘಾತ, ಐವರು ಸಾವು

ಇನ್ನು ಗಾಯಾಳುಗಳ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಓಖಲಕಂಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ