Uttarakhand: ಚೀನಾ ಗಡಿಯಿಂದ 50 ಕಿ.ಮೀ ದೂರದಲ್ಲಿರುವ ನೈನಿ ಸೈನಿ ಏರ್​ಪೋರ್ಟ್​ಗೆ ಡಿಜಿಸಿಎ ಅನುಮೋದನೆ

ಚೀನಾ(China) ಗಡಿಯಿಂದ 50 ಕಿ.ಮೀ ದೂರದಲ್ಲಿರುವ ನೈನಿ, ಸೈನಿ ಏರ್​ಪೋರ್ಟ್​ಗೆ ಡಿಜಿಸಿಎ ಅನುಮೋದನೆ ದೊರೆತಿದೆ. ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ನೈನಿ-ಸೈನಿ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ವಿಮಾನ ಹಾರಾಟ ಆರಂಭಿಸಲಿದೆ.

Uttarakhand: ಚೀನಾ ಗಡಿಯಿಂದ 50 ಕಿ.ಮೀ ದೂರದಲ್ಲಿರುವ ನೈನಿ ಸೈನಿ ಏರ್​ಪೋರ್ಟ್​ಗೆ ಡಿಜಿಸಿಎ ಅನುಮೋದನೆ
ನೈನಿ ಸೈನಿ ಏರ್​ಪೋರ್ಟ್​
Image Credit source: Pithoragarh

Updated on: Jun 15, 2023 | 8:45 AM

ಚೀನಾ(China) ಗಡಿಯಿಂದ 50 ಕಿ.ಮೀ ದೂರದಲ್ಲಿರುವ ನೈನಿ, ಸೈನಿ ಏರ್​ಪೋರ್ಟ್​ಗೆ ಡಿಜಿಸಿಎ ಅನುಮೋದನೆ ದೊರೆತಿದೆ. ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ನೈನಿ-ಸೈನಿ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ವಿಮಾನ ಹಾರಾಟ ಆರಂಭಿಸಲಿದೆ. ಫ್ಲೈ ಬಿಗ್ ಕಂಪನಿಯು ಈ ಮಾರ್ಗದಲ್ಲಿ ವಿಮಾನ ಸೇವೆಗಾಗಿ 20 ಆಸನಗಳ ವಿಮಾನವನ್ನು ಖರೀದಿಸಿದೆ. ವಿಮಾನ ನಿಲ್ದಾಣಕ್ಕೆ ಅನುಮತಿ ದೊರೆತ ನಂತರ ಈಗ ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ದೆಹಲಿ, ಡೆಹ್ರಾಡೂನ್, ಪಂತ್​ನಗರಕ್ಕೆ ವಿಮಾನ ಸೇವೆ ನೀಡಲು ನಿರ್ಧರಿಸಲಾಗಿದೆ. ದೇಶದ ಇತರ ಗಿರಿಧಾಮಗಳಲ್ಲಿ ಒಂದಾದ ಉತ್ತರಾಖಂಡದ ಈ ವಿಮಾನ ನಿಲ್ದಾಣವು ತನ್ನದೇ ಆದ ವಿಶಿಷ್ಟವಾಗಿದೆ.

ಚೀನಾ ಗಡಿಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಪಿಥೋರಗಢ್‌ನಲ್ಲಿರುವ ನೈನಿ ಸೈನಿ ವಿಮಾನ ನಿಲ್ದಾಣವು ಶೀಘ್ರದಲ್ಲೇ ವಿಮಾನ ಸೇವೆಗೆ ಸಿದ್ಧವಾಗಲಿದೆ. ಇದು ಉತ್ತರಾಖಂಡದ ಈ ದೂರದ ಗುಡ್ಡಗಾಡು ಪ್ರದೇಶವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಈ ಮಾರ್ಗದಲ್ಲಿ ವಿಮಾನ ಸೇವೆಗಾಗಿ ಟೆಂಡರ್​ಗಳನ್ನು ಆಹ್ವಾನಿಸುವ ಮೂಲಕ ವಿಮಾನಯಾನ ಕಂಪನಿಗಳನ್ನು ಆಯ್ಕೆ ಮಾಡಿದೆ.

ಮತ್ತಷ್ಟು ಓದಿ: ಹಸಿರು ವಿಮಾನ ನಿಲ್ದಾಣ: ಅತ್ಯುನ್ನತ ಲೆವೆಲ್ 4+ ಟ್ರಾನ್ಸಿಶನ್ ಮಾನ್ಯತೆ ಪಡೆದ ಬೆಂಗಳೂರು ವಿಮಾನ ನಿಲ್ದಾಣ

ಇದನ್ನು ದೃಢಪಡಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡದಲ್ಲಿ ವಿಶೇಷವಾಗಿ ಕುಮಾವೂನ್ ಪ್ರದೇಶದಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. ಪಿಥೋರಘರ್‌ನಲ್ಲಿರುವ ಈ ವಿಮಾನ ನಿಲ್ದಾಣಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

1991ರಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣದಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಹಾರಾಟ
ಪಿಥೋರಗಢದ ನೈನಿ ಸೈನಿ ವಿಮಾನ ನಿಲ್ದಾಣವನ್ನು ಕಾರ್ಯತಂತ್ರವಾಗಿ ಹಸ್ತಾಂತರಿಸಲು ಉತ್ತರಾಖಂಡದ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಈ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯಿಂದ ಮೊದಲ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ.

ಆದಾಗ್ಯೂ, 1991ರಲ್ಲಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು ಉತ್ತರಾಖಂಡದ ನಾಗರಿಕ ವಿಮಾನಯಾನ ಇಲಾಖೆ ನಿರ್ವಹಿಸುತ್ತದೆ. ವಿಮಾನ ನಿಲ್ದಾಣವು 1,508 ಮೀಟರ್ ಉದ್ದವಾಗಿದೆ ಮತ್ತು ಇದುವರೆಗೆ ಸರ್ಕಾರಿ ಸ್ವಾಮ್ಯದ ಪವನ್ ಹನ್ಸ್ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ಗಾಗಿ ಬಳಸಲ್ಪಟ್ಟಿದೆ.

ಇದನ್ನು ನಿಯಮಿತವಾಗಿ ಮಾಡಲಾಗುವುದಿಲ್ಲ. ವಿಮಾನ ನಿಲ್ದಾಣದ ಬಳಿ 7ಕ್ಕೂ ಹೆಚ್ಚು ಕಟ್ಟಡಗಳು ವಿಮಾನ ಹಾರಾಟಕ್ಕೆ ಅಡ್ಡಿಯಾಗುವುದರಿಂದ ಡಿಜಿಸಿಎಯಿಂದ ಪರವಾನಗಿ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಈ ಎಲ್ಲಾ ಮನೆಗಳನ್ನು ನೆಲಸಮಗೊಳಿಸಲಾಯಿತು. ಮುಂದಿನ 40 ದಿನಗಳಲ್ಲಿ ವಿಮಾನ ಹಾರಾಟ ಶುರುವಾಗಲಿದೆ. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಒಂದು ಶಾಲೆ ಹಾಗೂ 6 ಮನೆಗಳನ್ನು ನೆಲಸಮಗೊಳಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ