ಹೈದರಾಬಾದ್: ಯುವತಿಯನ್ನ ಅತ್ಯಾಚಾರ ಮಾಡಿ ಸಜೀವ ದಹನ ಮಾಡಿರುವ ದಾರುಣ ಘಟನೆ ಹೈದರಾಬಾದ್ ಹೊರವಲಯದ ರಂಗಾರೆಡ್ಡಿ ಜಿಲ್ಲೆಯ ಷಾದ್ ನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಗಳು ಈ ಕೃತ್ಯ ಎಸಗಿದ್ದು, ಪಶುವೈದ್ಯೆಯಾದ ಪ್ರಿಯಾಂಕಾಳ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈಕೆ ಶಂಷಾಬಾದನಿಂದ ಮಾದಾಪುರ ಆಸ್ಪತ್ರೆಗೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ದಾರಿ ಮಧ್ಯೆ ಸ್ಕೂಟಿ ಪಂಕ್ಚರ್ ಆಗಿದೆ. ಆವಾಗ.. ದಾರಿಯಲ್ಲಿ ಒಬ್ಬಳೆ ಇದ್ದೇನೆ. ಇಲ್ಲಿ ಓಡಾಡುವ ಲಾರಿ ಡ್ರೈವರುಗಳಿಂದ ಭಯವಾಗುತ್ತಿದೆ ಎಂದು ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದಾರೆ.
ಇದೇ ಸಮಯಕ್ಕೆ ಬಂದ ಅಪರಿಚಿತ ವ್ಯಕ್ತಿಗೆ ಲಿಫ್ಟ್ ಕೇಳಿ ವಾಹನ ಏರಿ ಅಲ್ಲಿಂದ ಹೊರಟಿದ್ದಾರೆ. ಮುಂದೆ ಅತ್ಯಾಚಾರಕ್ಕೀಡಾಗಿ, ಸಜೀವ ದಹನವಾಗಿ ಪತ್ತೆಯಾಗಿದ್ದಾರೆ. ಷಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸೈಬರಾಬಾದ್ ಪೊಲೀಸ್ ಕಮೀಷನರ್ ವಿಶ್ವನಾಥ ಸಜ್ಜನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡ್ತಿದ್ದಾರೆ.
Published On - 3:04 pm, Thu, 28 November 19