ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅರುಣಾಚಲ ಪ್ರದೇಶದ ಗಡಿ ಗ್ರಾಮವಾದ ಕಿಬಿತುದಲ್ಲಿ ವೈಬ್ರೆಂಟ್ ವಿಲೇಜ್(Vibrant Village Program) ಕಾರ್ಯಕ್ರಮ ಅಥವಾ ಚೈತನ್ಯದಾಯಕ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ತರಲು ಮತ್ತು ಅವುಗಳನ್ನು ಸ್ವಾವಲಂಬಿ ಮತ್ತು ಸಮೃದ್ಧ ಸಮುದಾಯಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ನಿನ್ನೆ, ಅಮಿತ್ ಶಾ ಅವರು ಕಿಬಿತೂದಲ್ಲಿ ಐಟಿಬಿಪಿ ಜವಾನರೊಂದಿಗೆ ಸಂವಾದ ನಡೆಸಿದರು. ಹಿಮಾಲಯ ಬಂಡೆಗಳಲ್ಲಿ ಇರುವ ಮುರಿಯಲಾಗದ ಇಚ್ಛಾಶಕ್ತಿ ಮತ್ತು ಅದರ ಒರಟಾದ ಭೂಪ್ರದೇಶಗಳ ದೃಢತೆಯನ್ನು ಐಟಿಬಿಪಿ ಸೈನಿಕರು ಹೊಂದಿದ್ದಾರೆ. ವಿಶ್ವದ ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿ ರಾಷ್ಟ್ರದ ಗಡಿಯನ್ನು ರಕ್ಷಿಸುವ ಐಟಿಬಿಪಿ ಸೈನಿಕರ ಬದ್ಧತೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದು ಅಮಿತ್ ಶಾ ಹೊಗಳಿದರು.
The commitment of the @ITBP_official soldiers to protect the borders of the nation in one of the toughest terrains in the world is truly inspiring.
Pleased to accompany them in their Badakhana, a ritual in which soldiers of all ranks dine together as a mark of brotherhood. pic.twitter.com/n61mTe0RLj
— Amit Shah (@AmitShah) April 10, 2023
ದೇಶದ 19 ಜಿಲ್ಲೆಗಳು, 46 ವಿಭಾಗಗಳು ಮತ್ತು 2,963 ಹಳ್ಳಿಗಳಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ಮೊದಲ ಹಂತದಲ್ಲಿ 4,800 ಕೋಟಿ ರೂಪಾಯಿ ವೆಚ್ಚದಲ್ಲಿ 11 ಜಿಲ್ಲೆಗಳು, 23 ಬ್ಲಾಕ್‌ಗಳು ಮತ್ತು 1,451 ಗ್ರಾಮಗಳನ್ನು ಸೇರಿಸಲಾಗುವುದು. ವೈಬ್ರಂಟ್ ವಿಲೇಜಸ್ ಕಾರ್ಯಕ್ರಮದೊಂದಿಗೆ ನರೇಂದ್ರ ಮೋದಿ ಸರ್ಕಾರವು ಅಭಿವೃದ್ಧಿಯ ಮೂಲಕ ಗಡಿ ಗ್ರಾಮಗಳ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಲಿದೆ ಎಂದರು. ಈ ಕಾರ್ಯಕ್ರಮವು ಉತ್ತರದ ಗಡಿಯ ಎಲ್ಲಾ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಅಮಿತ್ ಶಾ ಕಾರ್ಯಕ್ರಮದಲ್ಲಿ ಹೇಳಿದರು. ಈ ಗ್ರಾಮಗಳಲ್ಲಿ ಸರ್ಕಾರದ ಎಲ್ಲ ಯೋಜನೆಗಳು ಶೇ 100 ರಷ್ಟು ಅನುಷ್ಠಾನಗೊಳ್ಳುವಂತೆ ಸರ್ಕಾರ ಖಚಿತಪಡಿಸುತ್ತದೆ ಎಂದರು.
ಇದನ್ನೂ ಓದಿ: Amit Shah: ‘ಒಂದು ಇಂಚು ನೆಲವನ್ನೂ ಬಿಟ್ಟುಕೊಡಲ್ಲ’- ಚೀನಾ ಕ್ಯಾತೆ ಮಧ್ಯೆಯೂ ಅರುಣಾಚಲದಲ್ಲಿ ಅಮಿತ್ ಶಾ ಗುಡುಗು
ಗೃಹ ಸಚಿವರು ಪ್ರಾರಂಭಿಸಿದ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮವು ಮೂಲ ಸೌಕರ್ಯಗಳಿಗೆ ಒದಗಿಸುವ ಮೂಲಕ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಈಗಿನ ಪರಿಸ್ಥಿತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮವು ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲ ಸೌಕರ್ಯಗಳ ನಿರ್ಮಾಣ, ವಿದ್ಯುತ್ ಒದಗಿಸುವಿಕೆ ಮತ್ತು ಶುದ್ಧ ಕುಡಿಯುವ ನೀರಿನ ಪ್ರವೇಶದಂತಹ ವಿವಿಧ ಉಪಕ್ರಮಗಳನ್ನು ಒಳಗೊಂಡಿದೆ. ಇದು ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡಿದೆ.
Modi government with the Vibrant Villages Programme:
– Will reach the last person in the border villages with development.
– Will connect border villages by physical and digital means.
– Will rehabilitate the deserted villages by providing basic facilities. pic.twitter.com/HsGPJeiAsW— Amit Shah (@AmitShah) April 10, 2023
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:35 pm, Tue, 11 April 23