ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ

| Updated By:

Updated on: Jul 08, 2020 | 5:57 PM

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ. ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ […]

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ
Follow us on

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ.

ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು ತಮ್ಮ ಬಳಿಯಿರುವ ಚೌಕ ಅಥವಾ ದುಪ್ಪಟ್ಟಾವನ್ನ ಮಾಸ್ಕ್​ ಅಗಿ ಬಳಸಿರೋದನ್ನ ಸೂಕ್ಷ್ಮವಾಗಿ ಗಮನಿಸಿರುವ ಈ ಮಂಗ ಹಾಗೇ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಮಾಸ್ಕ್​ ಧರಿಸದೆ ಬೀದಿಬೀದಿ ಅಲೆಯುವ ನಮ್ಮ ಜನರಿಗೆ ಕೋತಿಯ ಮಂಗಾಟದ ವಿಡಿಯೋ ಒಳ್ಳೇ ಸಂದೇಶ ನೀಡುತ್ತದೆ. ಕೊರೊನಾದಿಂದ ತಮ್ಮನ್ನು ಹಾಗೂ ಬೇರೆಯವರನ್ನ ಸುರಕ್ಷಿತವಾಗಿರಲು ಮಾಸ್ಕ್​ ಧರಿಸಬೇಕೆಂಬ ಪಾಠವನ್ನು ಮನದಟ್ಟು ಮಾಡಿದೆ.

 

Published On - 1:02 pm, Wed, 8 July 20