AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಕೋವಿಡ್‌ ಟೆಸ್ಟ್‌ ಸಂಖ್ಯೆ ತುಂಬಾ ಕಡಿಮೆ! ಜಸ್ಟ್ 1 ಕೋಟಿ ದಾಟಿದೆ..

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಟೆಸ್ಟಿಗೆ ಒಳಗಾದವರ ಸಂಖ್ಯೆ ಈಗ ಒಂದು ಕೋಟಿ ದಾಟಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ ಅಂಶಗಳುಳ್ಳ ಮಾಹಿತಿ ಬಿಡುಗಡೆ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಸೋಮವಾರದವರೆಗೆ ನಡೆಸಿದ ಕೋವಿಡ್‌ ಟೆಸ್ಟ್‌ ಸಂಖ್ಯೆ ಒಂದು ಕೋಟಿ ದಾಟಿದೆ. ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಲ್ಯಾಬ್‌ಗಳು ಸೇರಿ 1,115 ಟೆಸ್ಟಿಂಗ್‌ ಲ್ಯಾಬ್‌ಗಳಲ್ಲಿ ಕೋರೊನಾ ಸೋಂಕಿನ ಟೆಸ್ಟ್‌ ನಡೆಸಲಾಗುತ್ತಿದೆ. ಇದ್ರಲ್ಲಿ 4,39,947 ಪ್ರಕರಣಗಳು ಕೊರೊನಾದಿಂದ ಗುಣಮುಖರಾಗಿದ್ದಾರೆ. ಒಟ್ಟಾರೆಯಾಗಿ ಈಗೀರುವ ಸೋಂಕಿತರಿಗಿಂತ 1,80,390ನಷ್ಟು […]

ದೇಶದಲ್ಲಿ ಕೋವಿಡ್‌ ಟೆಸ್ಟ್‌ ಸಂಖ್ಯೆ ತುಂಬಾ ಕಡಿಮೆ! ಜಸ್ಟ್ 1 ಕೋಟಿ ದಾಟಿದೆ..
ಕೊರೊನಾ ಟೆಸ್ಟ್
Guru
| Updated By: ಸಾಧು ಶ್ರೀನಾಥ್​|

Updated on: Jul 07, 2020 | 4:18 PM

Share

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಟೆಸ್ಟಿಗೆ ಒಳಗಾದವರ ಸಂಖ್ಯೆ ಈಗ ಒಂದು ಕೋಟಿ ದಾಟಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ ಅಂಶಗಳುಳ್ಳ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಸೋಮವಾರದವರೆಗೆ ನಡೆಸಿದ ಕೋವಿಡ್‌ ಟೆಸ್ಟ್‌ ಸಂಖ್ಯೆ ಒಂದು ಕೋಟಿ ದಾಟಿದೆ. ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಲ್ಯಾಬ್‌ಗಳು ಸೇರಿ 1,115 ಟೆಸ್ಟಿಂಗ್‌ ಲ್ಯಾಬ್‌ಗಳಲ್ಲಿ ಕೋರೊನಾ ಸೋಂಕಿನ ಟೆಸ್ಟ್‌ ನಡೆಸಲಾಗುತ್ತಿದೆ. ಇದ್ರಲ್ಲಿ 4,39,947 ಪ್ರಕರಣಗಳು ಕೊರೊನಾದಿಂದ ಗುಣಮುಖರಾಗಿದ್ದಾರೆ. ಒಟ್ಟಾರೆಯಾಗಿ ಈಗೀರುವ ಸೋಂಕಿತರಿಗಿಂತ 1,80,390ನಷ್ಟು ಹೆಚ್ಚಿನ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಪ್ರಮಾಣ ಶೇ. 61.13ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಇದುವರೆಗೆ ನಡೆದ ಟೆಸ್ಟ್‌ ಪ್ರಮಾಣ ಕೇವಲ ಶೇ.07 ಮಾತ್ರ ಆದ್ರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ನಡೆದ ಟೆಸ್ಟ್‌ ಪ್ರಮಾಣ ಕೇವಲ ಶೇ. 0.7 ಮಾತ್ರ. ಭಾರತದ ಜನಸಂಖ್ಯೆ ಅಧಿಕೃತವಾಗಿ 135 ಕೋಟಿ ಇದೆ. ಇದ್ರಲ್ಲಿ ಇದುವರೆಗೆ ಟೆಸ್ಟ್‌ಗೊಳಪಟ್ಟವರ ಸಂಖ್ಯೆ ಕೇವಲ ಒಂದು ಕೋಟಿ. ಅಂದ್ರೆ ಟೆಸ್ಟ್‌ಗೊಳಗಾದವರ ಪ್ರಮಾಣ ಶೇ. 0.7 ಮಾತ್ರ. ಆದ್ರೆ ಅಮೆರಿಕದಲ್ಲಿ 33 ಕೋಟಿ ಜನಸಂಖ್ಯೆಯಿದೆ. ಅವರು ಇದುವರೆಗೆ ನಡೆಸಿದ ಟೆಸ್ಟ್‌ ಸಂಖ್ಯೆ 3,62,55,888. ಅಂದ್ರೆ ಶೇ. 11ರಷ್ಟು. ಅಂದ್ರೆ ಭಾರತದ ಜನಸಂಖ್ಯೆಗಿಂತ ಐದು ಪಟ್ಟು ಕಡಿಮೆ ಇರುವ ದೇಶ, ಭಾರತಕ್ಕಿಂತ ಮೂರು ಪಟ್ಟು ಹೆಚ್ಚಿಗೆ ಟೆಸ್ಟ್‌ ಮಾಡಿದೆ.

ಈಗ ಪ್ರತಿದಿನಕ್ಕೆ 2.5 ಲಕ್ಷ ಜನರ ಟೆಸ್ಟ್‌ ಇದೆಲ್ಲದರ ನಡುವೆಯೂ ಸಮಾಧಾನಕರ ಅಂಶ ಅಂದ್ರೆ ಆರಂಭದಲ್ಲಿ ಪ್ರತಿದಿನಕ್ಕೆ 10,000ದಂತೆ ಆರಂಭವಾದ ಟೆಸ್ಟಿಂಗ್‌ ಪ್ರಮಾಣ ಈಗ ಪ್ರತಿ ದಿನಕ್ಕೆ 2.5 ಲಕ್ಷಕ್ಕೆ ತಲುಪಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಸುವ ಸಾಧ್ಯತೆಯಂತೂ ಇದ್ದೇ ಇದೆ.