ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ
ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲ ಸಖತ್ ವೈರಲ್ ಆಗಿದೆ. ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್ ಕಪಿಚೇಷ್ಟೆಯನ್ನ ತಮ್ಮ […]
ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲ ಸಖತ್ ವೈರಲ್ ಆಗಿದೆ.
ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್ ಕಪಿಚೇಷ್ಟೆಯನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು ತಮ್ಮ ಬಳಿಯಿರುವ ಚೌಕ ಅಥವಾ ದುಪ್ಪಟ್ಟಾವನ್ನ ಮಾಸ್ಕ್ ಅಗಿ ಬಳಸಿರೋದನ್ನ ಸೂಕ್ಷ್ಮವಾಗಿ ಗಮನಿಸಿರುವ ಈ ಮಂಗ ಹಾಗೇ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಮಾಸ್ಕ್ ಧರಿಸದೆ ಬೀದಿಬೀದಿ ಅಲೆಯುವ ನಮ್ಮ ಜನರಿಗೆ ಕೋತಿಯ ಮಂಗಾಟದ ವಿಡಿಯೋ ಒಳ್ಳೇ ಸಂದೇಶ ನೀಡುತ್ತದೆ. ಕೊರೊನಾದಿಂದ ತಮ್ಮನ್ನು ಹಾಗೂ ಬೇರೆಯವರನ್ನ ಸುರಕ್ಷಿತವಾಗಿರಲು ಮಾಸ್ಕ್ ಧರಿಸಬೇಕೆಂಬ ಪಾಠವನ್ನು ಮನದಟ್ಟು ಮಾಡಿದೆ.
Published On - 1:02 pm, Wed, 8 July 20