Video Viral: ತಮಿಳುನಾಡಿನ ಶಿವಕಾಶಿ ದೇವಸ್ಥಾನದ ಗೋಪುರಕ್ಕೆ ಬೆಂಕಿ

ತಮಿಳುನಾಡಿನ (Tamil Nadu) ವಿರುದುನಗರದ ಶಿವಕಾಶಿಯಲ್ಲಿರುವ (Sivakashi) ಬದ್ರಕಾಳಿ ಅಮ್ಮನ್ ದೇವಸ್ಥಾನದ ರಾಜಗೋಪುರದಲ್ಲಿ (ದೇವಾಲಯದ ಗೋಪುರ) ಬೆಂಕಿ ಕಾಣಿಸಿಕೊಂಡಿದೆ.

Video Viral: ತಮಿಳುನಾಡಿನ ಶಿವಕಾಶಿ ದೇವಸ್ಥಾನದ ಗೋಪುರಕ್ಕೆ ಬೆಂಕಿ
sivakasi temple fire
Edited By:

Updated on: Nov 21, 2022 | 12:09 PM

ಶಿವಕಾಶಿ: ತಮಿಳುನಾಡಿನ (Tamil Nadu) ವಿರುದುನಗರದ ಶಿವಕಾಶಿಯಲ್ಲಿರುವ (Sivakashi) ಬದ್ರಕಾಳಿ ಅಮ್ಮನ್ ದೇವಸ್ಥಾನದ ರಾಜಗೋಪುರದಲ್ಲಿ (ದೇವಾಲಯದ ಗೋಪುರ) ಬೆಂಕಿ ಕಾಣಿಸಿಕೊಂಡಿದೆ. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲಾಗಿದೆ. ಗೋಪುರದ ನವೀಕರಣ ಕಾರ್ಯ ನಡೆಯುತ್ತಿದ್ದು, ಅದನ್ನು ಮರದ ಚೌಕಟ್ಟಿನಿಂದ ಮುಚ್ಚಲಾಗಿತ್ತು. ಘಟನೆಯ ವಿಡಿಯೋದಲ್ಲಿ ದೇವಾಲಯದ ಗೋಪುರ ಬೆಂಕಿಯಿಂದ ಆವೃತವಾಗಿರುವುದನ್ನು ಕಾಣಬಹುದು.


ಭಕ್ತರು ಗೋಪುರಕ್ಕೆ ಬೆಂಕಿ ಬಿದ್ದಿರುವುದನ್ನು ಕಂಡು ದೇವಸ್ಥಾನದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಅಗ್ನಿಶಾಮಕ ವಾಹನಗಳನ್ನು ತಂದು ಬೆಂಕಿ ನಂದಿಸಲಾಯಿತು. ಮದುವೆಯ ಮೆರವಣಿಗೆಯ ಅಂಗವಾಗಿ ಸಿಡಿಸಲಾದ ಪಟಾಕಿಗಳು ಬೆಂಕಿಗೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶಿವಕಾಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

Published On - 12:08 pm, Mon, 21 November 22