ಚಿತ್ತೂರಿ: ಆನೆಯೊಂದು ಬಾವಿ ಬಿದ್ದ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಸೋಮವಾರದಂದು ರಾತ್ರಿ ಆನೆಯು ಬಾವಿಗೆ ಬಿದ್ದಿದೆ. ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಆನೆಯನ್ನು ರಕ್ಷಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವೀಡಿಯೊದಲ್ಲಿ ಜೆಸಿಬಿ ಯಂತ್ರದಿಂದ ಬಾವಿಯ ಗೋಡೆಯ ಒಂದು ಭಾಗವನ್ನು ಧ್ವಂಸಗೊಳಿಸಿ ಆನೆಗೆ ಹೊರಬರಲು ಇಳಿಜಾರು ರೀತಿಯ ಹಾದಿಯನ್ನು ಮಾಡಿಕೊಟ್ಟಿದ್ದಾರೆ. ಈ ಬಾವಿ ತುಂಬಾ ಆಳವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾವಿಯೊಳಗೆ ಸಿಕ್ಕಿಬಿದ್ದ ಆನೆಯನ್ನು ರಕ್ಷಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಪುಟ್ಟ ಆನೆಯು ಆತಂಕದಿಂದ ಬಾವಿಯೊಳಗೆ ತಿರುಗಾಡುತ್ತಾ ಗೋಡೆಯ ಮೇಲೆ ಏರಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಾರಿ ಮಾಡಿಕೊಡಲು ಬಾವಿ ಗೋಡೆಯ ಒಂದು ಭಾಗವನ್ನು ಕೆಡವಿದಾಗ ಇದು ಆನೆಯ ಮರಿ ಎಂದು ಹೇಳಲಾಗಿದೆ. ನಂತರ ಆನೆ ಅಧಿಕಾರಿಗಳು ಮಾಡಿಕೊಟ್ಟ ದಾರಿಯಲ್ಲಿ ಹೊರಗೆ ಬರುತ್ತದೆ. ಅಪಾಯದಿಂದ ಪಾರದ ಆನೆಯು ಕಾಡಿನತ್ತ ತೆರಳುತ್ತಿದ್ದಂತೆ ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
#WATCH | An elephant that fell into a well Monday night in Gundla Palle village of Andhra Pradesh's Chittoor is rescued by a joint team of forest officials & fire brigade pic.twitter.com/S8tSB4OL6V
— ANI (@ANI) November 15, 2022
ಇದೇ ರೀತಿಯ ಉತ್ತರ ಪ್ರದೇಶದ ಘಟನೆಯ ಬಗ್ಗೆ ಪ್ರಾಣಿ ರಕ್ಷಣಾ ಎನ್‌ಜಿಒ ಸದಸ್ಯರು ಹಂಚಿಕೊಂಡಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಆಗ್ರಾದ ಹಳ್ಳಿಯೊಂದರಲ್ಲಿ 40 ಅಡಿ ತೆರೆದ ಬೋರ್‌ವೆಲ್‌ನಿಂದ ಗಂಡು ನರಿಯನ್ನು ರಕ್ಷಿಸಿದ್ದಾರೆ. ಅದನ್ನು ನಂತರದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅದನ್ನು ಪ್ರಾಣಿಯನ್ನು ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಗಿದೆ. ಅದೇ ದಿನ, ಎನ್‌ಜಿಒ ಎರಡು ದೊಡ್ಡ ಹಾವುಗಳನ್ನು ರಕ್ಷಿಸಿತು- ಏಳು ಅಡಿ ಭಾರತೀಯ ರಾಕ್ ಹೆಬ್ಬಾವು (ಆಗ್ರಾದಲ್ಲಿ ಕಂಡು ಬಂದ ಹಾವು) ಮತ್ತು ಆರು ಅಡಿ ಹೆಬ್ಬಾವನ್ನು ಏರ್ ಫೋರ್ಸ್ ಸ್ಟೇಷನ್‌ನಲ್ಲಿರುವ ಸಿವಿಲ್ ಏರ್‌ಪೋರ್ಟ್ ಆವರಣದಲ್ಲಿ ರಕ್ಷಿಸಲಾಗಿದೆ.
Published On - 4:43 pm, Tue, 15 November 22