ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥದಿಂದ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ: ಮೋಹನ್ ಭಾಗವತ್

|

Updated on: Oct 24, 2023 | 11:00 AM

ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥದಿಂದಾಗಿ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ ಎಂದು ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ. ನಾಗ್ಪುರದಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಕೃತಿಗಳು ಮತ್ತು ಅಪರಾಧಗಳು ಹೆಚ್ಚುತ್ತಿವೆ. ಮಿತಿಯಿಲ್ಲದ ವ್ಯಕ್ತಿವಾದದ ಕಾರಣದಿಂದ ಕುಟುಂಬಗಳು ಛಿದ್ರಗೊಳ್ಳುತ್ತಿವೆ.

ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥದಿಂದ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ: ಮೋಹನ್ ಭಾಗವತ್
ಮೋಹನ್ ಭಾಗವತ್
Follow us on

ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥದಿಂದಾಗಿ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ ಎಂದು ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ. ನಾಗ್ಪುರದಲ್ಲಿ ವಿಜಯದಶಮಿ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಕೃತಿಗಳು ಮತ್ತು ಅಪರಾಧಗಳು ಹೆಚ್ಚುತ್ತಿವೆ. ಮಿತಿಯಿಲ್ಲದ ವ್ಯಕ್ತಿವಾದದ ಕಾರಣದಿಂದ ಕುಟುಂಬಗಳು ಛಿದ್ರಗೊಳ್ಳುತ್ತಿವೆ.

ಪ್ರಕೃತಿಯ ಮಿತಿಮೀರಿದ ಶೋಷಣೆಯಿಂದ ಮಾಲಿನ್ಯ, ಜಾಗತಿಕ ತಾಪಮಾನದಲ್ಲಿ ಏರಿಕೆ, ಋತುಗಳ ವ್ಯವಸ್ಥೆಯಲ್ಲಿ ಅಸಂತುಲನ ಮತ್ತು ಅದರ ಫಲವಾಗಿ ಹುಟ್ಟುವ ನೈಸರ್ಗಿಕ ದುರಂತಗಳೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಆತಂಕವಾದ, ಶೋಷಣೆ ಮತ್ತು ನಿರಂಕುಶತೆ ಗಳಿಗೆ ತೆರೆದ ಮೈದಾನ ಸಿಕ್ಕಂತಾಗಿದೆ. ತನ್ನ ಅಸಮರ್ಪಕ ದೃಷ್ಟಿಯಿಂದಾಗಿ ಜಗತ್ತು ಈ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

ಹೀಗಾಗಿ ನಮ್ಮ ಸನಾತನ ಮೌಲ್ಯಗಳ ಮತ್ತು ಸಂಸ್ಕಾರಗಳ ಆಧಾರದ ಮೇಲೆ, ಭಾರತವು ತನ್ನ ಉದಾಹರಣೆಯ ಮೂಲಕ ಜಗತ್ತಿಗೆ ವಾಸ್ತವಿಕ ಸುಖ, ಶಾಂತಿಯ ಹೊಸಮಾರ್ಗವನ್ನು ತೋರಿಸಬೇಕಾದ ಅಪೇಕ್ಷೆ ಮೇಲೇಳುತ್ತಿದೆ ಎಂದರು.

ಕಳೆದ ವರ್ಷವಿಡೀ ನಮ್ಮ ದೇಶವು ಜಿ-20 ಹೆಸರಿನಲ್ಲಿ ಸೇರುವ ಪ್ರಮುಖ ದೇಶಗಳ ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿತ್ತು. ವರ್ಷವಿಡೀ ಸದಸ್ಯ ರಾಷ್ಟ್ರಗಳ ರಾಷ್ಟ್ರ ಪ್ರಮುಖರು, ಮಂತ್ರಿಗಳು, ಶಾಸಕರು ಮತ್ತು ಚಿಂತಕರೊಡನೆ ಅನೇಕ ಕಾರ್ಯಕ್ರಮಗಳು ಭಾರತದ ಅನೇಕ ಸ್ಥಳಗಳಲ್ಲಿ ನಡೆಯಿತು. ಭಾರತೀಯರ ಆತ್ಮೀಯ ಆತಿಥ್ಯದ ಅನುಭವ, ಭಾರತದ ಗೌರವಶಾಲಿ ಇತಿಹಾಸ ಮತ್ತು ವರ್ತಮಾನದ ಉತ್ಸಾಹಭರಿತ ಅಭ್ಯುದಯವು ಎಲ್ಲಾ ಸಹಭಾಗಿಗಳನ್ನೂ ಪ್ರಭಾವಿತರನ್ನಾಗಿಸಿತು.

ಮತ್ತಷ್ಟು ಓದಿ: ಇಸ್ರೇಲ್​-ಹಮಾಸ್​ ಕಂಡಂತೆ ಭಾರತ ಈ ವಿಚಾರದಲ್ಲಿ ಎಂದಿಗೂ ಸಂಘರ್ಷವನ್ನು ಕಂಡಿಲ್ಲ: ಮೋಹನ್ ಭಾಗವತ್

ಸಂಪೂರ್ಣ ರಾಷ್ಟ್ರದ ಪುರುಷಾರ್ಥದ ಮೂಲವು, ಆ ರಾಷ್ಟ್ರವನ್ನು ಜಗತ್ತಿಗೆ ಪ್ರಯೋಜನವಾಗುವಂತೆ ಸಿದ್ಧಗೊಳಿಸುವ ರಾಷ್ಟ್ರೀಯ ಆದರ್ಶದಲ್ಲಿದೆ. ಇದಕ್ಕಾಗಿಯೇ ನಮ್ಮ ಸಂವಿಧಾನದ ಮೂಲ ಪ್ರತಿಯ ಹಿಂಭಾಗದಲ್ಲಿ ಯಾವ ಚಿತ್ರವನ್ನು ಹಾಕಲಾಗಿದೆಯೋ ಅಂತಹ ಧರ್ಮದ ಮೂರ್ತಿವೆತ್ತ ಪ್ರತೀಕವಾದ ಶ್ರೀರಾಮನ ಬಾಲಕ ರೂಪದ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಮುಂಬರುವ ಜನವರಿ 22ರಂದು ಮಂದಿರದ ಗರ್ಭಗೃಹದಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ ಎಂಬುದಾಗಿ ಘೋಷಣೆಯಾಗಿದೆ ಎಂದರು.

ದೇಶದ ಗಡಿಗಳ ಸುರಕ್ಷೆ, ಜಲ ಸುರಕ್ಷೆ ಮತ್ತು ಪರಿಸರದ ಸ್ವಾಸ್ಥ್ಯಗಳ ದೃಷ್ಟಿಯಿಂದ ಭಾರತದ ಉತ್ತರ ಭಾಗದ ಗಡಿಗಳನ್ನು ನಿರ್ಣಯಿಸುವ ಈ ಪ್ರದೇಶಗಳು ಅತ್ಯಂತ ಮಹತ್ವಪೂರ್ಣವಾಗಿವೆ.‌ ಯಾವುದೇ ಬೆಲೆ ತೆತ್ತಾದರೂ ಇವುಗಳನ್ನು ರಕ್ಷಿಸಿಕೊಳ್ಳಲೇಬೇಕಿದೆ. ಸುರಕ್ಷೆ, ಪರಿಸರ, ಜನಸಂಖ್ಯೆ ಮತ್ತು ವಿಕಾಸದ ದೃಷ್ಟಿಯಿಂದ ಈ ಇಡೀ ಪ್ರದೇಶವನ್ನು ಒಂದು ಘಟಕ ಎಂದು ಪರಿಗಣಿಸಿ ಹಿಮಾಲಯ ಪ್ರದೇಶದ ಕುರಿತು ಯೋಚಿಸಬೇಕಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ರಾಜಕೀಯ ಸ್ವಾರ್ಥದ ಕಾರಣಕ್ಕಾಗಿ ರಾಜಕೀಯ ಪ್ರತಿಸ್ಪರ್ಧಿಯನ್ನು ಸೋಲಿಸಲು ಇಂತಹ ಅನಪೇಕ್ಷಿತ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅವಿವೇಕದ ಕೆಲಸ ಎಂದು ನುಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ