ಟಿವಿಕೆ ಭರವಸೆಗಳು: ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ

Tamilaga Vettri Kazhagam's poll promises: ದಳಪತಿ ವಿಜಯ್ ನೃತೃತ್ವದ ಟಿವಿಕೆ ಪಕ್ಷ ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಸಾಕಷ್ಟು ಕೊಡುಗೆಗಳ ಭರವಸೆಗಳಿದ್ದುವು. ಗೃಹಿಣಿಯರಿಗೆ ಮಾಸಿಕ 2,500 ರೂ, ವೃದ್ಧರಿಗೆ 3,000 ರೂ, ವರ್ಷಕ್ಕೆ 6 ಉಚಿತ ಎಲ್​ಪಿಜಿ ಗ್ಯಾಸ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವಕರಿಗೆ ನಿರುದ್ಯೋಗ ಭತ್ಯೆ, ಪ್ರತೀ ಕುಟುಂಬಕ್ಕೆ ಆರೋಗ್ಯ ವಿಮೆ, ಹೀಗೆ ಹಲವು ಭರವಸೆಗಳನ್ನು ಟಿವಿಕೆ ನೀಡಿದೆ.

ಟಿವಿಕೆ ಭರವಸೆಗಳು: ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ
ಟಿವಿಕೆ ಗೆಲುವನ್ನು ಸಂಭ್ರಮಿಸುತ್ತಿರುವ ಮಹಿಳೆ
Image Credit source: PTI

Updated on: May 04, 2026 | 3:49 PM

ಚೆನ್ನೈ, ಮೇ 4: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಸಿನಿಮಾ ಸ್ಟಾರ್ ದಳಪತಿ ವಿಜಯ್ (Thalapathi Vijay) ನೇತೃತ್ವದ ಟಿವಿಕೆ ಪಕ್ಷ ಅಚ್ಚರಿ ಗೆಲುವು ದಾಖಲಿಸಿದೆ. ಇತ್ತೀಚೆಗಷ್ಟೇ ಆರಂಭಗೊಂಡ ಟಿವಿಕೆ ಪಕ್ಷ ಈ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಯುವಕರಿಗೆ ಹೊಸ ಆಡಳಿತದ ಭರವಸೆ ಮೂಡಿಸಿದ ಜೊತೆಗೆ ಪ್ರಣಾಳಿಕೆ ಮೂಲಕ ಹಲವು ಭರವಸೆಗಳನ್ನೂ ಟಿವಿಕೆ ನೀಡಿತ್ತು. ಮನೆಯ ಯಜಮಾನ್ತಿಗೆ ಮಾಸಿಕ 2,500 ರೂ ಸೇರಿದಂತೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ, ರೈತರಿಗೆ ಭರ್ಜರಿ ಕೊಡುಗೆಗಳನ್ನು ನೀಡುವ ಭರವಸೆಯನ್ನು ನೀಡಲಾಗಿತ್ತು.

ಟಿವಿಕೆ ಚುನಾವಣಾ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು

ಮನೆ ಮತ್ತು ಮಹಿಳೆಯರಿಗೆ ಕೊಡುಗೆಗಳು

  • ಮನೆಯ ಯಜಮಾನ್ತಿಗೆ ತಿಂಗಳಿಗೆ 2,500 ರೂ ಸಹಾಯಧನ
  • ಅನ್ನಪೂರ್ಣಿ ಸೂಪರ್ ಸಿಕ್ಸ್ ಸ್ಕೀಮ್ ಮೂಲಕ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್​ಪಿಜಿ ಸಿಲಿಂಡರ್
  • ವಾರ್ಷಿಕ 5 ಲಕ್ಷ ರೂಗಿಂತ ಕಡಿಮೆ ಆದಾಯವಿರುವ ಕುಟುಂಬದ ಹೆಣ್ಮಗಳ ಮದುವೆಗೆ 8 ಗ್ರಾಮ್ ಚಿನ್ನ ಮತ್ತು ರೇಷ್ಮೆ ಸೀರೆ ಕೊಡುಗೆ.
  • ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ.
  • ವೆಟ್ರಿ ಪ್ರಯಾಣಂ ಸ್ಕೀಮ್ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.
  • ಕಾಮರಾಜರ್ ಕಲಿವಿ ಉರುದಿ ತಿಟ್ಟಂ ಸ್ಕೀಮ್ ಮೂಲಕ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಲು ಪೋಷಕರಿಗೆ ವರ್ಷಕ್ಕೆ 15,000 ರೂ ಸಹಾಯಧನ.
  • ಪ್ರತೀ ನವಜಾತ ಶಿಶುವಿಗೆ ಚಿನ್ನದ ಉಂಗುರ ಮತ್ತು ವೆಲ್ಕಮ್ ಕಿಟ್.
  • ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯ ವ್ಯವಸ್ಥೆ.

ಇದನ್ನೂ ಓದಿ: ವಿಜಯ್ vs ಎನ್‌ಟಿಆರ್: ಇಬ್ಬರು ಸೂಪರ್‌ಸ್ಟಾರ್‌ಗಳು, ಎರಡು ಭಿನ್ನ ದಾರಿಗಳು; ಹೀಗೊಂದು ಹೋಲಿಕೆ

ವಿದ್ಯುತ್ ಮತ್ತು ಅವಶ್ಯತೆಗಳು

  • ಪ್ರತೀ ಮನೆಗೆ 200 ಯುನಿಟ್​ಗಳಷ್ಟು ಉಚಿತ ವಿದ್ಯುತ್
  • ಎಲ್ಲಾ ಮನೆಗಳಿಗೂ ಉಚಿತ ಕುಡಿಯುವ ನೀರಿನ ಸಂಪರ್ಕ.
  • ಕೃಷಿ ಮತ್ತು ರೈತರಿಗೆ ಬೆಂಬಲ
  • ಕೃಷಿ ಸಹಕಾರಿ ಬೆಳೆ ಸಾಲಗಳು ಶೇ. 50ರಷ್ಟು ಮನ್ನಾ
  • ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಕೃಷಿ ಬೆಂಬಲ.

ಯುವಜನರು, ವಿದ್ಯಾರ್ಥಿಗಳಿಗೆ ನೆರವು

  • ನಿರುದ್ಯೋಗಿಗಳಿಗೆ ಧನಸಹಾಯ ನೀಡಲಾಗುತ್ತದೆ. ಪದವೀಧರರಿಗೆ ತಿಂಗಳಿಗೆ 4,000 ರೂ, ಹಾಗು ಡಿಪ್ಲೊಮಾ ಆದವರಿಗೆ ತಿಂಗಳಿಗೆ 2,000-2,500 ರೂ ನೆರವು.
  • 5 ಲಕ್ಷ ಯುವಕರಿಗೆ ಸ್ಟೈಪೆಂಡ್ ಜೊತೆಗೆ ಇಂಟರ್ನ್​ಶಿಪ್.
  • 5 ಲಕ್ಷ ಹೊಸ ಸರ್ಕಾರಿ ನೌಕರಿಗಳು
  • 20 ಲಕ್ಷ ರೂವರೆಗೆ ಅಡಮಾನರಹಿತ ಶಿಕ್ಷಣ ಸಾಲ
  • ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾದ ಎಐ ಶಕ್ತ ಕೋಚಿಂಗ್ ಸೌಲಭ್ಯ
  • ನೂರು ಕಾಮರಾಜರ್ ಶಾಲೆಗಳು

ಇದನ್ನೂ ಓದಿ: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?

ಸಾಮಾಜಿಕ ಭದ್ರತೆ ಮತ್ತು ಆರೋಗ್ಯ

  • ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಮಾಸಿಕ 3,000 ರೂ ಪಿಂಚಣಿ
  • ಪ್ರತೀ ಕುಟುಂಬಕ್ಕೆ 25 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ. ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯ.
  • ತಮಿಳುನಾಡನ್ನು ಮಾದಕವಸ್ತು ಮುಕ್ತ ಮಾಡಲು ವಿವಿಧ ಕ್ರಮಗಳು

ಮೀನುಗಾರರಿಗೆ ಕೊಡುಗೆಗಳು

  • ಮೀನುಗಾರಿಕೆ ಕಡಿಮೆ ಇರುವ ಸೀಸನ್​ನಲ್ಲಿ ಮೀನುಗಾರರಿಗೆ 27,000 ರೂ ಸಹಾಯಧನ
  • ಮೀನುಗಾರಿಕೆ ದೋಣಿಗೆ ಬಳಸುವ ಡೀಸಲ್​ಗೆ ಸಬ್ಸಿಡಿ, 25 ಲಕ್ಷ ರೂ ಅಪಘಾತ ವಿಮೆ
  • ಮೀನುಗಾರರಿಗೆ ಖಾಯಂ ವಸತಿ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us