ಎತ್ತಿನ ಬಂಡಿಯಲ್ಲಿ ಶವ ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿದರು

| Updated By: ಸಾಧು ಶ್ರೀನಾಥ್​

Updated on: Jul 13, 2020 | 1:17 PM

ಹೈದರಾಬಾದ್: ಮಹಾಮಾರಿ ಕೊರೊನಾ‌ ಜನರನ್ನು ಭಯ ಭೀತರನ್ನಾಗಿಸಿದೆ. ಕೊರೊನಾ ಭಯಕ್ಕೆ ಜನ ಮಾನವೀಯತೆಯನ್ನ ಮರೆಯುತ್ತಿದ್ದಾರೆ. ಕೊರೊನಾ ಪ್ರಪಂಚಕ್ಕೆ ಕಾಲಿಟ್ಟಾಗಿನಿಂದ ಎಲ್ಲವೂ ಬದಲಾಗಿದೆ. ಬದಲಾಗುತ್ತಿದೆ. ತೆಲಂಗಾಣದ ನಲಗೊಂಡ‌ ಬಳಿಯ ಶಾಲಿಗೌರಾರಂ ಮಂಡಲದ ಆಕಾರಂನಲ್ಲಿ ಅಮಾನವೀಯ ಘಟನೆ ನಡೆದಿದೆ. ಸಹಜ ಸಾವು ಆಗಿದ್ರೂ ಕೊರೊನಾದಿಂದ ಸಾವು ಸಂಭವಿಸಿದೆ ಎಂದು ಊರಿನ ಜನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಎತ್ತುಗಳಿಲ್ಲದ ಕಾರಣ ಹೆಗಲು ಕೊಟ್ಟು ತಾವೇ ಬಂಡಿ ಎಳೆದರು ಅನಾರೋಗ್ಯದಿಂದ ನಲ್ಗೊಂಡ ಸರಕಾರಿ ಆಸ್ಪತ್ರೆಯಲ್ಲಿ ಜಾನಯ್ಯ ಎಂಬುವವರು ಮೃತಪಟ್ಟಿದ್ದರು. ಇವರು ಸಹಜ  ಸಾವುಗೀಡಾದರೂ ಕೊರೊನಾದಿಂದ‌ […]

ಎತ್ತಿನ ಬಂಡಿಯಲ್ಲಿ ಶವ ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿದರು
Follow us on

ಹೈದರಾಬಾದ್: ಮಹಾಮಾರಿ ಕೊರೊನಾ‌ ಜನರನ್ನು ಭಯ ಭೀತರನ್ನಾಗಿಸಿದೆ. ಕೊರೊನಾ ಭಯಕ್ಕೆ ಜನ ಮಾನವೀಯತೆಯನ್ನ ಮರೆಯುತ್ತಿದ್ದಾರೆ. ಕೊರೊನಾ ಪ್ರಪಂಚಕ್ಕೆ ಕಾಲಿಟ್ಟಾಗಿನಿಂದ ಎಲ್ಲವೂ ಬದಲಾಗಿದೆ. ಬದಲಾಗುತ್ತಿದೆ.

ತೆಲಂಗಾಣದ ನಲಗೊಂಡ‌ ಬಳಿಯ ಶಾಲಿಗೌರಾರಂ ಮಂಡಲದ ಆಕಾರಂನಲ್ಲಿ ಅಮಾನವೀಯ ಘಟನೆ ನಡೆದಿದೆ. ಸಹಜ ಸಾವು ಆಗಿದ್ರೂ ಕೊರೊನಾದಿಂದ ಸಾವು ಸಂಭವಿಸಿದೆ ಎಂದು ಊರಿನ ಜನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ.

ಎತ್ತುಗಳಿಲ್ಲದ ಕಾರಣ ಹೆಗಲು ಕೊಟ್ಟು ತಾವೇ ಬಂಡಿ ಎಳೆದರು
ಅನಾರೋಗ್ಯದಿಂದ ನಲ್ಗೊಂಡ ಸರಕಾರಿ ಆಸ್ಪತ್ರೆಯಲ್ಲಿ ಜಾನಯ್ಯ ಎಂಬುವವರು ಮೃತಪಟ್ಟಿದ್ದರು. ಇವರು ಸಹಜ  ಸಾವುಗೀಡಾದರೂ ಕೊರೊನಾದಿಂದ‌ ಸಾವಿಗೀಡಾಗಿರಬಹುದೆಂಬ ಭೀತಿಯಿಂದ ಗ್ರಾಮಸ್ಥರು ಯಾರೂ ಅಂತ್ಯಕ್ರಿಯೆಗೆ‌ ಬಂದಿಲ್ಲ.

ಕೊನೆಗೆ, ಮೃತನ ಭಾವಂದಿರು ಎತ್ತಿನ‌ ಬಂಡಿಯಲ್ಲೇ ಮೃತದೇಹ ಇಟ್ಟುಕೊಂಡು,‌ ಎತ್ತುಗಳಿಲ್ಲದ ಕಾರಣ ತಮ್ಮ ಹೆಗಲು ಕೊಟ್ಟು ಬಂಡಿಯನ್ನು ತಾವೇ ಎಳೆದುಕೊಂಡು ಹೋಗಿರುವ ಮನಕಲಕುವ ದೃಶ್ಯ ಕಂಡುಬಂದಿದೆ. ಕುಟುಂಬಸ್ಥರೇ ಕಿಲೋ ಮೀಟರ್ ಗಟ್ಟಲೆ ಎತ್ತಿನ ಬಂಡಿ ಎಳೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

Published On - 1:08 pm, Mon, 13 July 20