ದಾಳಿಕೋರರಿಂದ ಹುಡುಗಿಯನ್ನು ರಕ್ಷಿಸಲು ಚಲಿಸುತ್ತಿದ್ದ ಆಟೋದಲ್ಲಿ ವ್ಯಕ್ತಿಯ ಅಪಾಯಕಾರಿ ಸ್ಟಂಟ್, ಇದು ನಿಜವೇ?

Updated on: Nov 16, 2025 | 8:48 AM

ಚಲಿಸುತ್ತಿರುವ ಆಟೋದ ಹಿಂಭಾಗದಲ್ಲಿ ಯುವಕನೊಬ್ಬ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಟೋ ಒಳಗಿರುವ ವ್ಯಕ್ತಿಯೊಬ್ಬ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಅದರಲ್ಲಿದೆ. ಆಟೋದೊಳಗೆ ಯುವತಿಯಿದ್ದು ಆಕೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಇಷ್ಟು ಕಷ್ಟ ಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಅದರ ಅಸಲಿಯತ್ತೇ ಬೇರೆ, ಇದು ನಿಜವಾದ ಘಟನೆಯಲ್ಲ ಬದಲಾಗಿ ಶಾರ್ಟ್​ ಫಿಲ್ಮ್​ ಎಂದು ತಿಳಿದುಬಂದಿದೆ. ನಿಜವಾಗಿಯೂ ಅಂಥಾ ಯಾವುದೇ ಘಟನೆಯೂ ನಡೆದಿಲ್ಲ.

ನವದೆಹಲಿ, ನವೆಂಬರ್ 16: ಚಲಿಸುತ್ತಿರುವ ಆಟೋದ ಹಿಂಭಾಗದಲ್ಲಿ ಯುವಕನೊಬ್ಬ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಟೋ ಒಳಗಿರುವ ವ್ಯಕ್ತಿಯೊಬ್ಬ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿರುವ ದೃಶ್ಯ ಅದರಲ್ಲಿದೆ. ಆಟೋದೊಳಗೆ ಯುವತಿಯಿದ್ದು ಆಕೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಇಷ್ಟು ಕಷ್ಟ ಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಅದರ ಅಸಲಿಯತ್ತೇ ಬೇರೆ, ಇದು ನಿಜವಾದ ಘಟನೆಯಲ್ಲ ಬದಲಾಗಿ ಶಾರ್ಟ್​ ಫಿಲ್ಮ್​ ಎಂದು ತಿಳಿದುಬಂದಿದೆ. ನಿಜವಾಗಿಯೂ ಅಂಥಾ ಯಾವುದೇ ಘಟನೆಯೂ ನಡೆದಿಲ್ಲ. ಯೂಟ್ಯೂಬ್ ಅಥವಾ ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಣೆಗಳು ಮತ್ತು ಚಂದಾದಾರರನ್ನು ಆಕರ್ಷಿಸಲು ನಿರ್ಮಾಣ ತಂಡಗಳು ಈ ರೀತಿಯ ಕಿರುಚಿತ್ರಗಳನ್ನು ಮಾಡುತ್ತಿವೆ. ವೈಶಾಲಿ ಮಿಶ್ರಾ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ