ಬಿಹಾರ ಚುನಾವಣೆ:35 ಕ್ಷೇತ್ರಗಳಲ್ಲಿ ವಿರೋಧಿಗಳ ಗೆಲುವಿಗೆ ಕಾರಣರಾದ ಪ್ರಶಾಂತ್ ಕಿಶೋರ್
ಬಿಹಾರ ವಿಧಾನಸಭೆ ಚುನಾವಣೆ(Bihar Assembly Election) ನಡೆದು ಫಲಿತಾಂಶವು ಹೊರಬಿದ್ದಿದೆ. ಎನ್‌ಡಿಎ ಭಾರಿ ಬಹುಮತ ಪಡೆದು ಜಯಭೇರಿ ಬಾರಿಸಿದೆ. ಜನ್ ಸುರಾಜ್ ಪಕ್ಷ ಕಟ್ಟಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ಗೆ ಭಾರೀ ಆಘಾತವಾಗಿದೆ. ರಾಜ್ಯದ 243 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ತಂತ್ರಗಾರಿಕೆ ಕೆಲಸ ಮಾಡಿಲ್ಲ.

ಪಾಟ್ನಾ, ನವೆಂಬರ್ 16: ಬಿಹಾರ ವಿಧಾನಸಭೆ ಚುನಾವಣೆ(Bihar Assembly Election) ನಡೆದು ಫಲಿತಾಂಶವು ಹೊರಬಿದ್ದಿದೆ. ಎನ್‌ಡಿಎ ಭಾರಿ ಬಹುಮತ ಪಡೆದು ಜಯಭೇರಿ ಬಾರಿಸಿದೆ. ಜನ್ ಸುರಾಜ್ ಪಕ್ಷ ಕಟ್ಟಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ಗೆ ಭಾರೀ ಆಘಾತವಾಗಿದೆ. ರಾಜ್ಯದ 243 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ತಂತ್ರಗಾರಿಕೆ ಕೆಲಸ ಮಾಡಿಲ್ಲ.
ಒಂದು ಕ್ಷೇತ್ರದಲ್ಲಿ ಗೆಲ್ಲದಿದ್ದರೂ 35 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತ ಪಡೆದು ಆ ಮೂಲಕ ಇನ್ನೊಂದು ಪಕ್ಷದ ಸೋಲಿಗೆ ಕಾರಣರಾಗಿದ್ದಾರೆ. ಅದರ ಪೈಕಿ ಎನ್‌ಡಿಎ 19 ಗೆದ್ದರೆ, ಮಹಾ ಮೈತ್ರಿಕೂಟ 14 ಗೆದ್ದಿದೆ. ಎಐಎಂಐಎಂ ಮತ್ತು ಬಿಎಸ್‌ಪಿ ತಲಾ ಒಂದು ಸ್ಥಾನವನ್ನು ಗೆದ್ದಿವೆ.
ಮೊದ ಮೊದಲು ಪ್ರಶಾಂತ್ ಕಿಶೋರ್ ಅವರ ಪಾದಯಾತ್ರೆ, ಪ್ರಚಾರದಿಂದ ಜನ್ ಸುರಾಜ್ ಪಕ್ಷ ಈ ಬಾರಿ ಬಿಹಾರ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ನೀಡಲಿದ್ದು, ತ್ರಿಕೋನ ಹಣಾಹಣೆ ಏರ್ಪಡಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಜೆಡಿಯು, ಬಿಜೆಪಿ ನೇತೃತ್ವದ ಎನ್‌ಡಿಎ ಮುಂದೆ ಪ್ರಶಾಂತ್ ಕಿಶೋರ್ ಪಕ್ಷ ನೆಲಕಚ್ಚಿದೆ.
ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು 238 ಸ್ಥಾನಗಳ ಪೈಕಿ 236 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಹಲವಾರು ಸ್ಥಾನಗಳಲ್ಲಿ ಪಕ್ಷವು ಸ್ಪರ್ಧೆಯನ್ನು ಆಸಕ್ತಿದಾಯಕವಾಗಿಸಿದೆ. ಹಾಗೆಯೇ 35 ಕ್ಷೇತ್ರಗಳಲ್ಲಿ ವಿರೋಧಿಗಳ ಗೆಲುವಿಗೆ ಪ್ರಶಾಂತ್ ಕಿಶೋರ್ ದಾರಿ ಮಾಡಿಕೊಟ್ಟಂತಾಗಿದೆ.
ಒಂದು ವೇಳೆ ನಿತೀಶ್ ಅವರ ಜೆಡಿಯು ಪಕ್ಷ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದರೆ, ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ’ ಎಂದು ಘೋಷಿಸಿದ್ದರು. ಅತಿಯಾದ ಉತ್ಸಾಹ, ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.
ಮತ್ತಷ್ಟು ಓದಿ: Bihar Election 2025 Results: ಮತ ಎಣಿಕೆ ನಿಧಾನಗೊಳಿಸುವ ಹುನ್ನಾರ ನಡೆಯುತ್ತಿದೆ: ತೇಜಸ್ವಿ ಗಂಭೀರ ಆರೋಪ
ಆರಂಭದಲ್ಲಿ ತೇಜಸ್ವಿ ಯಾದವ್ ವಿರುದ್ಧ ರಾಘೋಪುರ್ ಅಥವಾ ಕಾರ್ಗಹರ್ ನಿಂದ ಸ್ಪರ್ಧಿಸುತ್ತೇನೆ ಎಂದಿದ್ದ ಪ್ರಶಾಂತ್ ಅವರು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ‘ಪಕ್ಷದ ಸದಸ್ಯ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಲು ಗಮನಹರಿಸಬೇಕೆಂದು ನಿರ್ಧರಿಸಿದ್ದು, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ’ ಎಂದು ಪ್ರಶಾಂತ್ ತಿಳಿಸಿದ್ದರು.
ಉನ್ನತ ಮಟ್ಟದ ಪ್ರಚಾರ ಮತ್ತು ಭರವಸೆಗಳ ಹೊರತಾಗಿಯೂ, ಪಕ್ಷವು ಎಲ್ಲಾ ಕ್ಷೇತ್ರಗಳಲ್ಲಿ ಕಳಪೆ ಫಲಿತಾಂಶವನ್ನು ಕಂಡಿದೆ. ತಾರಾಪುರದಲ್ಲಿ, ಅದರ ಅಭ್ಯರ್ಥಿ ಸಂತೋಷ್ ಕುಮಾರ್ ಕೇವಲ 3,898 ಮತಗಳನ್ನು ಗಳಿಸಿದರು. ಅಲಿನಗರದಲ್ಲಿ, ಜನ್ ಸುರಾಜ್ ಅಭ್ಯರ್ಥಿ 2,275 ಮತಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಸ್ವತಂತ್ರ ಅಭ್ಯರ್ಥಿ ಸೈಫುದ್ದೀನ್ ಅಹ್ಮದ್ 2,803 ಮತಗಳನ್ನು ಗಳಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿ ಗಾಯಕಿ ಮೈಥಿಲಿ ಠಾಕೂರ್ ಅಲಿನಗರ ಸ್ಥಾನವನ್ನು 11,730 ಮತಗಳ ಅಂತರದಿಂದ ಗೆದ್ದು, ಬಿಹಾರದ ಅತ್ಯಂತ ಕಿರಿಯ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಹಲವು ರಾಜಕೀಯ ಪಕ್ಷಗಳಿಗೆ ತಂತ್ರಗಾರಿಕೆ ಹೆಣೆದಿದ್ದ ಪ್ರಶಾಂತ್ ತಮ್ಮ ಸ್ವಂತ ಪಕ್ಷಕ್ಕೆ ಸರಿಯಾದ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




