Viral News: ನೀವೂ ತಡವಾಗಿ ಬರುತ್ತೀರಿ, ಅದಕ್ಕೆ ನಾನು ತಡವಾಗಿ ಬರುತ್ತಿದ್ದೇನೆ: ಹಿರಿಯ ಅಧಿಕಾರಿಯ ನೋಟಿಸ್​ಗೆ​​ ಉತ್ತರಿಸಿದ ಕಿರಿಯ ಅಧಿಕಾರಿ

|

Updated on: Jul 18, 2023 | 6:13 PM

ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರಿಗೆ ನೀವು ತಡವಾಗಿ ಬರುತ್ತಿದ್ದೀರಾ ಎಂದು ಹಿರಿಯ ಅಧಿಕಾರಿ ನೋಟಿಸ್​ ನೀಡಿದ್ದಾರೆ. ಇದಕ್ಕೆ ಕಿರಿಯ ಅಧಿಕಾರಿ ನೀಡಿರುವ ಉತ್ತರ ಎಲ್ಲ ಕಡೆ ವೈರಲ್​​ ಆಗಿದೆ.

Viral News: ನೀವೂ ತಡವಾಗಿ ಬರುತ್ತೀರಿ, ಅದಕ್ಕೆ ನಾನು ತಡವಾಗಿ ಬರುತ್ತಿದ್ದೇನೆ: ಹಿರಿಯ ಅಧಿಕಾರಿಯ ನೋಟಿಸ್​ಗೆ​​ ಉತ್ತರಿಸಿದ ಕಿರಿಯ ಅಧಿಕಾರಿ
ವೈರಲ್​​ ನ್ಯೂಸ್​​
Follow us on

ಜೈಪುರ್, ಜು.18: ಸರ್ಕಾರಿ ಕಚೇರಿಗಳಲ್ಲಿ ಹಿರಿಯ ಅಧಿಕಾರಿ, ಕಿರಿಯ ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ಬುದ್ಧಿವಾದ ಹೇಳುವುದು ಸಹಜ, ಆದರೆ ಅದೇ ಹಿರಿಯರು ತಪ್ಪು ಮಾಡಿದಾಗ ಏನು ಮಾಡಬೇಕು? ಹೀಗೆ ಮಾಡಬೇಕು ನೋಡಿ, ರಾಜಸ್ಥಾನದ ವಿದ್ಯುತ್ ಇಲಾಖೆಯ ಉದ್ಯೋಗಿಯೊಬ್ಬರಿಗೆ ನೀವು ತಡವಾಗಿ ಬರುತ್ತಿದ್ದೀರಾ ಎಂದು ಹಿರಿಯ ಅಧಿಕಾರಿ  ನೋಟಿಸ್​ ನೀಡಿದ್ದಾರೆ. ಇದಕ್ಕೆ ಕಿರಿಯ ಅಧಿಕಾರಿ ನೀಡಿರುವ ಉತ್ತರ ಎಲ್ಲ ಕಡೆ ವೈರಲ್​​ ಆಗಿದೆ. ನೀವು ಮೊದಲು ತಡವಾಗಿ ಬರುವುದನ್ನು ನಿಲ್ಲಿಸಿ, ನೀವು ತಡವಾಗಿ ಬರುತ್ತಿದ್ದಕ್ಕೆ ನಾನು ತಡವಾಗಿ ಬರುತ್ತಿದ್ದೇನೆ ಎಂದು ನೋಟಿಸ್​​ಗೆ ಉತ್ತರ ನೀಡಿದ್ದಾರೆ. ಕಿರಿಯ ಅಧಿಕಾರಿ, ವಲಯ ಮುಖ್ಯ ಎಂಜಿನಿಯರ್​ಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಚೇರಿಗೆ ತಡವಾಗಿ ಬಂದಿದ್ದಕ್ಕಾಗಿ ಕಿರಿಯ ವಿದ್ಯುಚ್ಛಕ್ತಿ ಅಧಿಕಾರಿ ಅಜಿತ್ ಸಿಂಗ್ ಅವರಿಗೆ ‘ಶೋಕಾಸ್’ ನೋಟಿಸ್ ನೀಡಲಾಯಿತು ಮತ್ತು ಅವರು ತಡವಾಗಿ ಬಂದ ಕಾರಣವನ್ನು ವಿವರಿಸುವಂತೆ ಕೇಳಲಾಯಿತು. ಈ ನೋಟಿಸ್​​​ಗೆ ಉತ್ತರ ನೀಡಿದ ಅಜಿತ್ ಸಿಂಗ್ ನೀವು ಕಚೇರಿಗೆ ಯಾಕೆ ತಡವಾಗಿ ಬರುತ್ತೀರಾ, ನಾನು ಕೂಡ ಅದಕ್ಕೆ ತಡವಾಗಿ ಬರುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ಈ ನೋಟಿಸ್​​ ಎಲ್ಲ ಕಡೆ ವೈರಲ್​​ ಆಗಿದ್ದು, ರಾಜಸ್ಥಾನದ ಕೋಟಾ ವಿದ್ಯುತ್ ಇಲಾಖೆಯಿಂದ ಇದು ವೈರಲ್​​ ಆಗಿರುವ ನೋಟಿಸ್​​ ಎಂದು ಹೇಳಲಾಗಿದೆ. ಈ ಪತ್ರವು ಕೋಟಾದಿಂದ ಜೈಪುರ ಪ್ರಧಾನ ಕಚೇರಿಯವರೆಗೆ ತಲುಪಿದೆ ಎಂದು ಹೇಳಲಾಗಿದೆ.

ಇದನ್ನೂ  ಓದಿ:  ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!

ಜು.14ರಂದು ವಲಯ ಮುಖ್ಯ ಎಂಜಿನಿಯರ್ ಜಿ.ಎಸ್.ಬೈರವಾ ಕಚೇರಿಯಲ್ಲಿ ದಿಢೀರ್ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ಸಮಯದಲ್ಲಿ, ಲೆಕ್ಕಪರಿಶೋಧನಾ ಶಾಖೆಯಲ್ಲಿ ವಾಣಿಜ್ಯ ಅಧಿಕಾರಿಯಾಗಿರುವ ಅಜಿತ್ ಸಿಂಗ್ ಅವರ ಕುರ್ಚಿ ಖಾಲಿ ಇತ್ತು. ಅಲ್ಲದೆ ಹಾಜರಾತಿ ದಾಖಲೆಯಲ್ಲಿ ಅಜಿತ್ ಸಹಿ ಇರಲಿಲ್ಲ. ವಲಯ ಅಧಿಕಾರಿ ಅಜಿತ್ ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ ಮತ್ತು ಹಾಜರಾತಿ ದಾಖಲೆ ಸಹಿ ಇಲ್ಲದ ಕಾರಣ ಶೋಕಾಸ್ ನೋಟಿಸ್​​ ನೀಡಿದ್ದಾರೆ.

ಜುಲೈ 17 ರಂದು, ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯಿಸಿದ ಅಜಿತ್ ಸಿಂಗ್, ‘ನೀವೇ ಕಚೇರಿಗೆ ತಡವಾಗಿ ಬರುತ್ತಿದ್ದೀರಿ , ಅದಕ್ಕೆ ನಾನು ಕೂಡ ತಡವಾಗಿ ಬಂದಿದ್ದೇನೆ’ ಎಂದು ಹೇಳಿದ್ದಾರೆ. ಜುಲೈ 14 ರಂದು ಬೆಳಿಗ್ಗೆ 9:45 ಕ್ಕೆ ತಪಾಸಣೆಯ ಸಮಯದಲ್ಲಿ ನೀವು ಕಚೇರಿಯಿಂದ ನಾಪತ್ತೆಯಾಗಿದ್ದೀರಿ ಎಂದು ಅಜಿತ್‌ಗೆ ಶೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರ ನೀಡಿ ಎಂದು ಕೇಳಿದಾಗ ಅಜಿತ್​ ಹೀಗೆ ಉತ್ತರ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Tue, 18 July 23