ಹಾಪುರ್: ವಾರ್ಷಿಕ ಕನ್ವರ್ ಯಾತ್ರೆಗೆ ಭಕ್ತರ ಸಮೂಹವೇ ಹರಿದುಬರುತ್ತಿದ್ದಾರೆ. ಈ ನಡುವೆ ಯಾತ್ರೆಗೆ ಬಂದ ಶಿವಭಕ್ತರೊಬ್ಬರು ಕಾಲು ನೋವಿನಿಂದ ಬಳಲಿದಾಗ ಪೊಲೀಸ್ ಅಧಿಕಾರಿಯೊಬ್ಬರು ನೋವು ನಿವಾರಕಗಳನ್ನು ಹಚ್ಚಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಶಿವಭಕ್ತನ ಕಾಲಿಗೆ ನೋವು ನಿವಾರಕ ಸ್ಪ್ರೇ ಅನ್ನು ಪೊಲೀಸ್ ಇನ್ಸ್‌ಪೆಕ್ಟರ್ ಹಾಕುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಕೊರೋನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಶಿವನ ಭಕ್ತರ ವಾರ್ಷಿಕ ಕನ್ವರ್ ಯಾತ್ರೆ ಜು.14ರಂದು ಆರಂಭಗೊಂಡಿದೆ. ಕನ್ವಾರಿಯರು ಗಂಗಾ ನದಿಯಿಂದ ಪವಿತ್ರ ನೀರನ್ನು ತರಲು ಉತ್ತರಾಖಂಡದ ಹರಿದ್ವಾರ, ಗೌಮುಖ ಮತ್ತು ಗಂಗೋತ್ರಿಗೆ ಭೇಟಿ ನೀಡುತ್ತಾರೆ. ಅದರಂತೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ನಗರಗಳಲ್ಲಿ ಹಿರಿಯ ಆಡಳಿತ ಮತ್ತು ಅನೇಕ ಪೊಲೀಸ್ ಅಧಿಕಾರಿಗಳು ಕನ್ವಾರಿಯಾಗಳನ್ನು ಸ್ವಾಗತಿಸಿದ್ದಾರೆ.
Visuals from Amroha, UP.
A sub-inspector Rajendra Pundir seen applying ointment on the leg of Kanwariyas resting in a makeshift camp. pic.twitter.com/YaFkd6lCoQ
— Piyush Rai (@Benarasiyaa) July 24, 2022
ಭಾನುವಾರ ಕೆಲವು ಅಧಿಕಾರಿಗಳು ಕನ್ವಾರಿಯಾಗಳ ಮೇಲೆ ಹೂವಿನ ದಳಗಳನ್ನು ಸುರಿಸಿದ್ದರು. ಇದಕ್ಕೂ ಮುನ್ನ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಬುಧವಾರ ಹರಿದ್ವಾರದಲ್ಲಿ ಕನ್ವಾರಿಯಾಗಳಿಗೆ ಆತ್ಮೀಯ ಸ್ವಾಗತವನ್ನು ನೀಡಿ ಅವರ ಪಾದಗಳನ್ನು ತೊಳೆದು ಆಶೀರ್ವಾದ ಪಡೆದರು. ಇದೀಗ ಸ್ಟೇಷನ್ ಹೌಸ್ ಆಫೀಸರ್ (SHO) ಸೋಮವೀರ್ ಸಿಂಗ್ ಹಾಪುರ್ನ ತಾತ್ಕಾಲಿಕ ಶಿಬಿರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕನ್ವಾರಿಯಾದ ಕಾಲುಗಳಿಗೆ ಪೊಲೀಸರು ನೋವು ನಿವಾರಕ ಸ್ಪ್ರೇ ಅನ್ನು ಅನ್ವಯಿಸುವ ವಿಡಿಯೋ ವೈರಲ್ ಆಗುತ್ತಿದೆ.
ಕನ್ವರ್ ಯಾತ್ರೆಗೆ ರಾಜ್ಯ ಸರ್ಕಾರಗಳು ಮತ್ತು ಪೊಲೀಸರಿಂದ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಅದಾಗ್ಯೂ, ರಸ್ತೆ ಅಪಘಾತದಲ್ಲಿ ಆರು ಕನ್ವಾರಿಯಾಗಳು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಉತ್ತರ ಪ್ರದೇಶ ಸರ್ಕಾರ ಭಾನುವಾರ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಿದೆ.
Published On - 2:22 pm, Mon, 25 July 22