ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರನ್ನು ಭೇಟಿ ಮಾಡಿದ ಬಾಲಕಿಯೊಬ್ಬಳು ಮುಖ್ಯಮಂತ್ರಿಯಾಗಬೇಕಾದರೆ ಏನು ಮಾಡಬೇಕು? ಎಂದು ಕೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದರೆ ನಾನು ಮುಖ್ಯಮಂತ್ರಿ ಆಗಬಹುದೇ ಎಂದು ಬಾಲಕಿ ಅನ್ನದಾ ದಾಮ್ರೆ ಶಿಂಧೆ ಅವರಲ್ಲಿ ಕೇಳಿದ್ದಾರೆ. ಅಸ್ಸಾಂನಲ್ಲಿ ಪ್ರವಾಹ ಬಂದಾಗ ನೀವು ನೀರಲ್ಲೇ ಹೋಗಿ ಜನರಿಗೆ ಸಹಾಯ ಮಾಡಿದ್ದೀರಿ. ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ನಾನು ಮುಖ್ಯಮಂತ್ರಿ ಆಗಬಹುದೇ ಎಂದು ಬಾಲಕಿ ಕೇಳಿದ್ದಾಳೆ. ಇದಕ್ಕೆ ನಗುತ್ತಾ ಉತ್ತರಿಸಿದ ಶಿಂಧೆ, ನೀವು ಖಂಡಿತವಾಗಿಯೂ ಮುಖ್ಯಮಂತ್ರಿ ಆಗಬಹುದು. ಈ ಬಗ್ಗೆ ನಾವು ನಿರ್ಣಯ ಅಂಗೀಕರಿಸುತ್ತೇವೆ ಎಂದಿದ್ದಾರೆ. ಈ ವರ್ಷ ದೀಪಾವಳಿಗೆ ನನ್ನನ್ನು ಗುವಾಹಟಿಗೆ ಕರೆದುಕೊಂಡು ಹೋಗಬೇಕು ಎಂದು ಬಾಲಕಿ ಶಿಂಧೆಯವರಲ್ಲಿ ಹೇಳಿದ್ದಾಳೆ. ಖಂಡಿತವಾಗಿಯೂ, ನೀನು ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯಕ್ಕೆ ಹೋಗಲು ಬಯಸುತ್ತೀಯಾ ಎಂದು ಶಿಂಧೆ ಕೇಳಿದಾಗ ಬಾಲಕಿ ಹೂಂ ಎಂದಿದ್ದಾಳೆ.
#WATCH | After meeting Maharashtra CM Eknath Shinde at his Nandanvan bungalow in Mumbai, a girl Annada Damre requested him to take her to Guwahati during Diwali vacation and also asked if she could become the CM by helping flood-affected people just like he did?
(Source: CMO) pic.twitter.com/WSdUN16jHq
— ANI (@ANI) July 18, 2022
ಬಾಲಕಿಯ ಚುರುಕುತನವನ್ನು ಮೆಚ್ಚಿದ ಶಿಂಧೆ ಈ ಬಾಲಕಿ ತುಂಬಾ ಬುದ್ಧಿವಂತೆ ಎಂದು ಹೇಳಿದ್ದಾರೆ. ಕಳೆದ ತಿಂಗಳು ಶಿವಸೇನಾದಲ್ಲಿ ಬಂಡಾಯವೆದ್ದ ಶಿಂಧೆ ಉದ್ಧವ್ ಠಾಕ್ರೆ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಶಿಂಧೆ ಜೂನ್ 30ರಂದು ಮುಖ್ಯಮಂತ್ರಿಯಾಗಿ ಮತ್ತು ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
Published On - 1:01 pm, Tue, 19 July 22