ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಏಳನೇ ಹಂತದ ಚುನಾವಣೆಗೆ ಮತದಾನ ಮುಕ್ತಾಯವಾಗಿದೆೆ. 11, 376 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ಶೇ 75.06 ಮತದಾನವಾಗಿದೆ. ಈ ಹಂತದ ಚುನಾವಣೆ ವೇೆಳೆ ₹332.94 ಕೋಟಿ ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಪಶ್ಚಿಮ ಬರ್ಧಮಾನ್, ದಕ್ಷಿಣ ದಿನಜ್ಪುರ್, ಮಾಲ್ಡಾ ಮತ್ತು ಕೊಲ್ಕತ್ತಾ ಸೇರಿದಂತೆ 34 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದ್ದು, ಶಾಂತಿಯುತ ಮತದಾನ ನಡೆದಿದೆ. ಬೆಳಗ್ಗೆ7 ಗಂಟೆಗೆ ಮತದಾನ ಆರಂಭವಾಗಿದ್ದು 9.30ರ ಹೊತ್ತಿಗೆ ಶೇ17.47 ಮತದಾನವಾಗಿದೆ. ಬೆಳಗ್ಗೆ 11.30ರ ಹೊತ್ತಿಗೆ ಶೇ 37.72 ಮತದಾನ ದಾಖಲು ಆಗಿದೆ. ಮಧ್ಯಾಹ್ನ 1.30ರ ಹೊತ್ತಿಗೆ ಶೇ 55.12 ಮತದಾನ ದಾಖಲಾಗಿದ್ದು ಸಂಜೆ 3.31ರ ಹೊತ್ತಿಗೆ ಶೇ 67. 27 ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಟ್ವೀಟ್ ಮಾಡಿದೆ.
Peaceful polling held in 11,376 polling Stations across 34 ACs in Phase 7 of the West Bengal Assembly elections. 75.06% voter turnout recorded till 5pm. During the ongoing polls till this phase, seizure of Rs. 332.94 Crores reported: Election Commission of India pic.twitter.com/SyDOcwoCao
— ANI (@ANI) April 26, 2021
ಬಂಗಾಳದಿಂದ ಪೊಲೀಸ್ ಅಧಿಕಾರಿಗಳ ವರ್ಗ
ಪಶ್ಚಿಮ ಬಂಗಾಳದಲ್ಲಿ ಏಳನೇ ಹಂತದ ಚುನಾವಣೆ ನಡೆಯುತ್ತಿದ್ದಂತೆ ಚುನಾವಣಾ ಆಯೋಗವು ಕೆಲವು ಪೊಲೀಸ್ ಅಧಿಕಾರಿಗಳನ್ನು ಬಂಗಾಳದಿಂದ ವರ್ಗಾವಣೆ ಮಾಡಿದೆ. ಆರ್ಥಿಕ ಅಪರಾಧಗಳ ಇಲಾಖೆಯ ನಿರ್ದೇಶನಾಲಯದ ಪೊಲೀಸ್ ಇನ್ಸ್ ಪೆಕ್ಟರ್ ಶಂತನು ಸಿನ್ಹಾ ಬಿಸ್ವಾಸ್ ಅವರನ್ನು ಕ್ರೈಂ ಇನ್ಸ್ ಪೆಕ್ಟರ್ ಆಗಿ ಡಿಐಡಿ ಜಲ್ಪೈಗುರಿ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಅಂಚೆ ಮತಗಳಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಬಿಜೆಪಿ ಸಿನ್ಹಾ ಅವರ ಮೇಲೆ ಆರೋಪ ಹೊರಿಸಿತ್ತು.ಅ ಅಸಾನ್ಸಲ್- ದುರ್ಗಾಪುರ್ ಪೊಲೀಸ್ ಸಹಾಯಕ ಆಯುಕ್ತ ಶ್ರೀಮಂತ ಕುಮಾರ್ ಬಂದೋಪಾಧ್ಯಾಯ್ ಅವರನ್ನು ಬೊಲಾಪುರ್ನ ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಶುಬೇಂದ್ರ ಕುಮಾರ್ ಅವರು ಬೊಲಾಪುರ್ನಲ್ಲಿ ಪ್ರಸ್ತುತ ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಯಾದ್ದು, ಕೊವಿಡ್ ರೋಗಕ್ಕೊಳಗಾಗಿದ್ದಾರೆ. ಕೃಷ್ಣನಗರ ಪೊಲೀಸ್ ಜಿಲ್ಲೆಯ ಕೃಷ್ಣಗಂಜ್‌ನ ಸರ್ಕಲ್ ಇನ್ಸ್‌ಪೆಕ್ಟರ್ ನಿಹಾರ್ ರಂಜನ್ ರಾಯ್ ಅವರನ್ನು ಮುರ್ಷಿದಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಹೊಸ ಇನ್ಸ್‌ಪೆಕ್ಟರ್ ಆಗಿ ನೇಮಕ ಮಾಡಲಾಗಿದೆ.
People cast their votes for the seventh phase of #WestBengalElections2021 today. Visuals from Samsi Primary School – designated as booth number 142/142 A – in Ratua constituency of Malda district. pic.twitter.com/IhLUl6j147
— ANI (@ANI) April 26, 2021
ಅಸನ್ಸೋಲ್ ಕ್ಷೇತ್ರದಲ್ಲಿ ಗಲಭೆ
ಅಸನ್ಸೋಲ್ ಪ್ರದೇಶದಿಂದ ಕೆಲವು ಅಹಿತಕರ ಘಟನೆ ವರದಿಯಾಗಿವೆ. ಟಿಎಂಸಿ ಅಭ್ಯರ್ಥಿ ಸಯೋನಿ ಘೋಷ್ ಬಿಜೆಪಿ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಮತಗಟ್ಟೆಗಳ ನಿರ್ವಹಣೆಗೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪೌಲ್ ಆಧಾರರಹಿತ ಎಂದಿದ್ದಾರೆ. ಘೋಷ್ ಪರಾಭವಗೊಳ್ಳುವ ಭಯದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಪೌಲ್ ಹೇಳಿದ್ದಾರೆ.
ಜಮುರಿಯಾ ಕ್ಷೇತ್ರದಲ್ಲಿ, ಎಡಪಕ್ಷದ ಅಭ್ಯರ್ಥಿ ಆಯಿಷೆ ಘೋಷ್, ತಮ್ಮ ಪಕ್ಷದ ಏಜೆಂಟರನ್ನು ಟಿಎಂಸಿ ಕಾರ್ಯಕರ್ತರು ಬೂತ್‌ಗೆ ಪ್ರವೇಶಿಸುವುದನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದು ಇದನ್ನು ಟಿಎಂಸಿ ನಿರಾಕರಿಸಿದೆ.
West Bengal CM Mamata Banerjee shows victory symbol after she cast her vote at a polling station in Kolkata#WestBengalElections2021 pic.twitter.com/AAAJzJQMtP
— ANI (@ANI) April 26, 2021
ಬಿಜೆಪಿ ಅಭ್ಯರ್ಥಿಯ ಮತಗಟ್ಟೆ ಏಜೆಂಟ್ ಬಂಧನ
ನಗರದ ನ್ಯೂ ಅಲಿಪೋರ್ ಪ್ರದೇಶದ ಮತದಾನ ಕೇಂದ್ರದೊಳಗೆ ಕೆಲವು ಮಹಿಳಾ ಮತದಾರರನ್ನು ಕಿರುಕುಳ ನೀಡಿದ ಆರೋಪದ ಮೇಲೆ ರಾಶ್‌ಬೆಹರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೆಫ್ಟಿನೆಂಟ್ ಜನರಲ್ ಸುಬ್ರತಾ ಸಾಹ ಅವರ ಏಜೆಂಟ್ ಮೋಹನ್ ರಾವ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿದ್ಯಾ ಭಾರತಿ ಶಾಲೆಯೊಳಗೆ ತಮ್ಮ ಕೈಗಳನ್ನು ಹಿಡಿದು ಎಳೆಯಲು ಪ್ರಯತ್ನಿಸಿದರು ಎಂದು ಹಲವಾರು ಮಹಿಳಾ ಮತದಾರರು ದೂರು ನೀಡಿದ ಹಿನ್ನೆಲೆಯಲ್ಲಿ ಮೋಹನ್ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ರಾವ್ ಆರೋಪಗಳನ್ನು ನಿರಾಕರಿಸಿದ್ದು ಮತ್ತು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ಟಿಎಂಸಿ ಕಾರ್ಯಕರ್ತರು ಈ ಪ್ರದೇಶದಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ಮತದಾನಕ್ಕೆ ಅಡ್ಡಿಪಡಿಸುವ ಉದ್ದೇಶ ಇದು ಎಂದು ಸಾಹಾ ಆರೋಪಿಸಿದ್ದಾರೆ.
(Voting concluded for the seventh phase of the West Bengal Assembly elections 2021)