Delhi Accident: ದೆಹಲಿಯ ರಾಜ್​ಪುರ್​​ನಲ್ಲಿ ಕಚೋರಿ ಅಂಗಡಿಗೆ ನುಗ್ಗಿದ ಕಾರು; ಭಯಾನಕ ವಿಡಿಯೋ ಇಲ್ಲಿದೆ ನೋಡಿ

|

Updated on: Apr 02, 2024 | 11:18 AM

ಕಾರೊಂದು ಕಚೋರಿ ಅಂಗಡಿಯೊಂದಕ್ಕೆ ವೇಗವಾಗಿ ನುಗ್ಗಿ ಜನರನ್ನು ಚೆಲ್ಲಾಪಿಲ್ಲಿಯಾಗಿಸಿದ ಭೀಕರ ಅಪಘಾತ ದೆಹಲಿಯ ರಾಜ್​ಪುರ್​​ನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಸಾವು ಸಂಭವಿಸಿಲ್ಲವಾದರೂ, ಅಪಘಾತದ ಭೀಕರ ದೃಶ್ಯ ಎದೆ ಝಲ್ಲೆನ್ನಿಸುವಂತಿದೆ. ಅಪಘಾತದ ಸಿಸಿಟಿವಿ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Delhi Accident: ದೆಹಲಿಯ ರಾಜ್​ಪುರ್​​ನಲ್ಲಿ ಕಚೋರಿ ಅಂಗಡಿಗೆ ನುಗ್ಗಿದ ಕಾರು; ಭಯಾನಕ ವಿಡಿಯೋ ಇಲ್ಲಿದೆ ನೋಡಿ
ದೆಹಲಿಯ ರಾಜ್​ಪುರ್​​ನಲ್ಲಿ ಕಚೋರಿ ಅಂಗಡಿಗೆ ನುಗ್ಗಿದ ಕಾರು
Follow us on

ನವದೆಹಲಿ, ಏಪ್ರಿಲ್ 2: ದೆಹಲಿಯ (Delhi) ರಾಜ್​ಪುರ್​​ನಲ್ಲಿ ವೇಗವಾಗಿ ಬಂದ ಕಾರೊಂದು ಕಚೋರಿ ಅಂಗಡಿಯೊಂದಕ್ಕೆ ನುಗ್ಗಿ (Car Accident) ಹಲವಾರು ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಇದೀಗ ಘಟನೆಗೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ (CCTV Video) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಅಪಘಾತದ ಭೀಕರತೆಯನ್ನು ತೋರಿಸಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಸಾವು ಸಂಭವಿಸಿಲ್ಲ ಎನ್ನಲಾಗಿದೆ. ಕೆಲವು ಮಂದಿ ಗ್ರಾಹಕರು ಅಂಗಡಿಯಲ್ಲಿ ಕಚೋರಿ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಅತಿವೇಗದಿಂದ ಬಂದ ಕಾರು ಅಂಗಡಿಗೆ ನುಗ್ಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಕಾರು ಬಲವಾಗಿ ಡಿಕ್ಕಿ ಹೊಡೆದ ಕಾರಣ ಕೆಲವರು ಅಂಗಡಿಯ ಇಕ್ಕೆಲಗಳಲ್ಲಿ ಎಸೆಯಲ್ಪಟ್ಟರು.

‘‘ರಾಜಪುರದ ಪ್ರಸಿದ್ಧ ‘ಫತೇ’ ಕಚೋರಿ ಅಂಗಡಿಗೆ ಕಾರೊಂದು ನುಗ್ಗಿ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತವನ್ನು ನೋಡಿದರೆ ನೀವೂ ಆಶ್ಚರ್ಯ ಪಡುತ್ತೀರಿ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ’ ಎಂದು ದೆಹಲಿಯ ಸ್ಥಳೀಯ ಮಾಧ್ಯಮ ‘ತೇಜ್ ತರಾರ್’ ವರದಿ ಮಾಡಿದ್ದು, ಸಿಸಿಟಿವಿ ವಿಡಿಯೋ ತುಣುಕನ್ನೂ ಪೋಸ್ಟ್ ಮಾಡಿದೆ.

ಕಾರು ಅಪಘಾತದ ಸಿಸಿಟಿವಿ ದೃಶ್ಯ


ಅಪಘಾತದ ನಂತರ, ಜನರು ನೋವಿನಿಂದ ನರಳುತ್ತಿರುವ ದೃಶ್ಯ ಸಿಸಿಟಿವಿ ವೀಡಿಯೊದಲ್ಲಿ ಕಂಡುಬಂದಿದೆ. ಕಾರು ಡಿಕ್ಕಿಯಾದ ಕೆಲವು ಸೆಕೆಂಡುಗಳ ನಂತರ, ಹತ್ತಿರದ ಜನರು ಗಾಯಗೊಂಡವರಿಗೆ ಸಹಾಯ ಮಾಡಲು ಮುಂದಾಗುತ್ತಿರುವುದು ಕೂಡ ಕಾಣಿಸಿದೆ.

ವರದಿಗಳ ಪ್ರಕಾರ, ದೆಹಲಿಯ ರಾಜ್‌ಪುರ ರಸ್ತೆಯ ಸಿವಿಲ್ ಲೈನ್‌ನಲ್ಲಿರುವ ಫತೇ ಕಿ ಕಚೋರಿ ಅಂಗಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಂಗಡಿಯಲ್ಲಿ ಹತ್ತಾರು ಜನ ಕಚೋರಿ ತಿನ್ನುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಎರಡು ನಿಮಿಷಗಳ ಅವಧಿಯ ವೀಡಿಯೊವು ಕಪ್ಪು ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ಕಾರು ಮತ್ತು ಗೋಡೆಯ ನಡುವೆ ಸಿಲುಕಿ ನಜ್ಜುಗುಜ್ಜಾಗುವುದರಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿರುವುದು ಕಾಣಿಸಿದೆ.

ಇದನ್ನೂ ಓದಿ: ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಐವರ ಸಾವು

ಡಿಕ್ಕಿಯ ನಂತರ ಚಾಲಕ ಕಾರಿನಿಂದ ಇಳಿಯಲಿಲ್ಲ. ತುಸು ಹೊತ್ತಿನಲ್ಲಿ ಆತ ಕಾರನ್ನು ರಿವರ್ಸ್ ತೆಗೆದುಕೊಂಡಿರುವುದು, ವ್ಯಕ್ತಿಯೊಬ್ಬರು ತಮ್ಮ ಜತೆಗಿದ್ದ ಮಹಿಳೆಯನ್ನು ಹುಡುಕುತ್ತಿರುವುದು ಕಾಣಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ