ಪ್ರತಿಭಟನೆ ವೇಳೆ ರೈತರು ಮೃತಪಟ್ಟಿದ್ದಾರೆಂಬುದಕ್ಕೆ ನಮ್ಮ ಬಳಿ ದಾಖಲೆಯೇ ಇಲ್ಲ, ಪರಿಹಾರ ಹೇಗೆ ಕೊಡೋದು?-ಸಂಸತ್ತಿನಲ್ಲಿ ಕೃಷಿ ಸಚಿವರ ಲಿಖಿತ ಪ್ರತಿಕ್ರಿಯೆ

| Updated By: Lakshmi Hegde

Updated on: Dec 01, 2021 | 11:54 AM

ನರೇಂದ್ರ ಮೋದಿಯವರು ಕೃಷಿ ಕಾಯ್ದೆ ವಾಪಸ್ ಪಡೆದ ಕೂಡಲೇ ರೈತರು ಪ್ರತಿಭಟನೆ ಹಿಂಪಡೆಯಲಿಲ್ಲ. ಬದಲಿಗೆ ಸಂಸತ್ತಿನಲ್ಲೂ ಕಾಯ್ದೆ ರದ್ದಾಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಇದೀಗ ಸಂಸತ್ತಿನಲ್ಲೂ ಕೂಡ ಕೃಷಿ ಕಾಯ್ದೆ ರದ್ದಾಗಿದೆ.

ಪ್ರತಿಭಟನೆ ವೇಳೆ ರೈತರು ಮೃತಪಟ್ಟಿದ್ದಾರೆಂಬುದಕ್ಕೆ ನಮ್ಮ ಬಳಿ ದಾಖಲೆಯೇ ಇಲ್ಲ, ಪರಿಹಾರ ಹೇಗೆ ಕೊಡೋದು?-ಸಂಸತ್ತಿನಲ್ಲಿ ಕೃಷಿ ಸಚಿವರ ಲಿಖಿತ ಪ್ರತಿಕ್ರಿಯೆ
ನರೇಂದ್ರ ಸಿಂಗ್​ ತೋಮರ್​
Follow us on

ದೆಹಲಿ: ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ಕಳೆದ ಒಂದು ವರ್ಷಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಹೀಗೆ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ಒಂದಷ್ಟು ರೈತರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ನಮ್ಮ ಸರ್ಕಾರದ ಬಳಿ ಯಾವುದೇ ದಾಖಲೆಯಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ಸಂಸತ್ತಿನಲ್ಲಿ ಲಿಖಿತವಾಗಿ ಉತ್ತರ ನೀಡಿದ್ದಾರೆ.  ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಹಲವರು ಮೃತಪಟ್ಟಿದ್ದಾರೆ. ಅಂಥವರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಏನು ಯೋಚನೆ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನಾ ನಿರತ ಸಾವಿನ ಬಗ್ಗೆ ನಮ್ಮ ಸಚಿವಾಲಯದ ಬಳಿ ಯಾವುದೇ ದಾಖಲೆ ಇಲ್ಲ. ಹಾಗಿದ್ದ ಮೇಲೆ ಪರಿಹಾರ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ. 

ಕಳೆದ ವರ್ಷ ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳನ್ನು ಅಂಗೀಕಾರ ಮಾಡಿ, ಅದನ್ನು ಕಾಯ್ದೆಯಾಗಿ ರೂಪಿಸಲಾಗಿತ್ತು. ಆದರೆ ಅದರ ವಿರುದ್ಧ ಸಾವಿರಾರರು ರೈತರು ಪ್ರತಿಭಟನೆ ನಡೆಸಿ, ಕಳೆದ  ಒಂದು ವರ್ಷದಿಂದ ಹೋರಾಟ ನಡೆಸಿದ್ದರು. ತತ್ಪರಿಣಾಮ ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯುವುದಾಗಿ ಘೋಷಿಸಿದ್ದರು. ಅದರಂತೆ ಸಂಸತ್ತಿನಲ್ಲಿ ಕೂಡ ಕೃಷಿ ಕಾಯ್ದೆಗಳ ರದ್ದತಿ ಮಸೂದೆ ಪಾಸ್ ಆಗಿದೆ. ಆದರೆ ಪ್ರತಿಭಟನೆ ವೇಳೆ ಸುಮಾರು 700 ರೈತರು ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆಗಳು, ಪ್ರತಿಪಕ್ಷಗಳು ಪ್ರತಿಪಾದಿಸುತ್ತಿದ್ದು, ಅವರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸುತ್ತಿವೆ.

ನರೇಂದ್ರ ಮೋದಿಯವರು ಕೃಷಿ ಕಾಯ್ದೆ ವಾಪಸ್ ಪಡೆದ ಕೂಡಲೇ ರೈತರು ಪ್ರತಿಭಟನೆ ಹಿಂಪಡೆಯಲಿಲ್ಲ. ಬದಲಿಗೆ ಸಂಸತ್ತಿನಲ್ಲೂ ಕಾಯ್ದೆ ರದ್ದಾಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಇದೀಗ ಸಂಸತ್ತಿನಲ್ಲೂ ಕೂಡ ಕೃಷಿ ಕಾಯ್ದೆ ರದ್ದಾಗಿದೆ. ಆದರೆ ಕನಿಷ್ಠ ಬೆಂಬಲ ಬೆಲೆ ಭರವಸೆಗಾಗಿ ಸರ್ಕಾರದ ಮೇಲೆ ರೈತ ಸಂಘಟನೆಗಳು ಒತ್ತಡ ಹೇರುತ್ತಿವೆ. ಈ ಬಗ್ಗೆ ಚರ್ಚಿಸಲು ಐವರನ್ನು ಕೇಂದ್ರ ಸರ್ಕಾರ ಆಹ್ವಾನಿಸಿದೆ. ಆದರೆ ಸಂಯುಕ್ತ ಕಿಸಾನ್​ ಮೋರ್ಚಾ ನಾವು ಚರ್ಚೆಗೆ ಯಾರನ್ನು ಕಳಿಸಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಡಿಸೆಂಬರ್​ ಮೊದಲ ವಾರದಲ್ಲಿ ತೀರ್ಮಾನಿಸಿ ಕಳಿಸುತ್ತೇವೆ ಎಂದು ಹೇಳಿದೆ.

ಇದನ್ನು ಓದಿ: Viral Video: ಜೆಸಿಬಿಯಲ್ಲಿ ಕುಳಿತು ಆರತಕ್ಷತೆಗೆ ಬಂದ ನವ ಜೋಡಿ; ಕೆಲವೇ ಕ್ಷಣದಲ್ಲಿ ಎಲ್ಲವೂ ಹೇಗೆ ಬದಲಾಯ್ತು ಗೊತ್ತಾ?