Parliament Winter Session 12 ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ವಿಪಕ್ಷ ನಾಯಕರ ಪ್ರತಿಭಟನೆ
ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಮಸೂದೆ, 2020 ಅನ್ನು ಮಂಡಿಸಲಿದ್ದಾರೆ. ರಾಜ್ಯಸಭೆಯಲ್ಲಿ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ಅಣೆಕಟ್ಟು ಸುರಕ್ಷತೆ ಮಸೂದೆಯನ್ನು ಮಂಡಿಸಲಿದ್ದಾರೆ.
ದೆಹಲಿ: ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ(Winter Session of Parliament) ಮಂಗಳವಾರದ ಅಧಿವೇಶನದ ನಂತರ ಅಮಾನತುಗೊಂಡಿರುವ ಪ್ರತಿಪಕ್ಷಗಳ ಸಂಸದರು ಬುಧವಾರ ಸಂಸತ್ತಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ಆರಂಭಿಸಲಿದ್ದಾರೆ. ಎಂ. ವೆಂಕಯ್ಯ ನಾಯ್ಡು(M Vekaiah Naidu) ತಮ್ಮ 12 ಸಂಸದರ ಅಮಾನತು ಹಿಂಪಡೆಯಲು ನಿರಾಕರಿಸಿದ ನಂತರ ಕನಿಷ್ಠ ಮುಂದಿನ ಎರಡು ದಿನಗಳ ಕಾಲ ಕಲಾಪಕ್ಕೆ ಅಡ್ಡಿಪಡಿಸಲಿರುವುದಾಗಿ ಪ್ರತಿಪಕ್ಷಗಳು ಸೂಚಿಸಿವೆ. “ಸರ್ಕಾರವು ಮೊದಲ ದಿನದಿಂದ ಮುಖಾಮುಖಿಯ ಹಾದಿಯನ್ನು ಪ್ರಾರಂಭಿಸಿದೆ.ಇದು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಚರ್ಚೆ ಮತ್ತು ಸಂಸತ್ತಿನ ಕ್ರಮಬದ್ಧವಾದ ಕಾರ್ಯನಿರ್ವಹಣೆಯ ಕರೆಗೆ ವಿರುದ್ಧವಾಗಿದೆ. ಇದೀಗ ಅವರು ಮತ್ತೊಂದು ಸುತ್ತಿನ ಮುಖಾಮುಖಿಯನ್ನು ಪ್ರಚೋದಿಸಿದ್ದಾರೆ. ಇದು ಪ್ರತಿಪಕ್ಷಗಳ ಮೇಲಿನ ಸಂಚು. ಆ ರೀತಿ ನಾವು ಮುಂದುವರಿಸಲು ನಿರಾಕರಿಸಿದ್ದೇವೆ ಎಂದು ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಏತನ್ಮಧ್ಯೆ, ಲೋಕಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಮಸೂದೆ, 2020 (Assisted Reproductive Technology (Regulation) Bill, 2020)ಅನ್ನು ಮಂಡಿಸಲಿದ್ದಾರೆ. ರಾಜ್ಯಸಭೆಯಲ್ಲಿ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ಅಣೆಕಟ್ಟು ಸುರಕ್ಷತೆ ಮಸೂದೆಯನ್ನು(Dam Safety Bill) ಮಂಡಿಸಲಿದ್ದಾರೆ. ರಾಜ್ಯಸಭೆಯ ವಿರೋಧ ಪಕ್ಷದ 12 ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ನಾಯಕರು ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
Opposition leaders protest at Mahatma Gandhi statue in Parliament premises demanding revocation of suspension of 12 Opposition MPs of Rajya Sabha pic.twitter.com/v9IVEGjzby
— ANI (@ANI) December 1, 2021
ಲೋಕಸಭೆ: ಹಣದುಬ್ಬರದ ಕುರಿತು ಮನೀಶ್ ತಿವಾರಿ ಅವರು ನಿಲುವಳಿ ಸೂಚನೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಲೋಕಸಭೆಯಲ್ಲಿ “ಹಣದುಬ್ಬರದ ದರ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ” ಕುರಿತು ನಿಲುವಳಿ ಸೂಚನೆ ನೀಡಿದರು.
ಲೋಕಸಭೆ: ಕೊವಿಡ್-19 ಸಾವುಗಳ ಕುರಿತು ಮಾಣಿಕಂ ಟ್ಯಾಗೋರ್ ನಿಲುವಳಿ ಸೂಚನೆ “ಕೊವಿಡ್ 19 ಸಾವುಗಳ ನಿಜವಾದ ಸಂಖ್ಯೆಯನ್ನು ಚರ್ಚಿಸಲು ಮತ್ತು ಬಡವರಿಗೆ ತಲಾ 4 ಲಕ್ಷ ರೂ.ಗಳನ್ನು ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶಿಸಲು” ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಲೋಕಸಭೆಯಲ್ಲಿ ನಿಲುವಳಿ ಸೂಚನೆ ನೀಡಿದರು. ಅದೇ ವೇಳೆ ಟಿಆರ್‌ಎಸ್ ಸಂಸದ ನಾಮ ನಾಗೇಶ್ವರ ರಾವ್ ಅವರು ಲೋಕಸಭೆಯಲ್ಲಿ ‘ಆಹಾರ ಧಾನ್ಯಗಳ ಸಂಗ್ರಹಣೆಯ ರಾಷ್ಟ್ರೀಯ ನೀತಿ ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ’ ವಿಷಯದ ಕುರಿತು ನಿಲುವಳಿ ಸೂಚನೆ ನೀಡಿದರು.
ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ ಅವರು ‘ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಆರ್ಥಿಕ ಸಹಾಯಕ್ಕಾಗಿ ಕಾನೂನು ಖಾತ್ರಿಯ ಬಗ್ಗೆ ಚರ್ಚೆ ಒತ್ತಾಯಿಸಿ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: 12 ರಾಜ್ಯ ಸಭಾ ಸಂಸದರು ಕ್ಷಮೆ ಯಾವುದಕ್ಕೆ ಕೇಳಬೇಕು? ಅದು ಸಾಧ್ಯವೇ ಇಲ್ಲ: ರಾಹುಲ್ ಗಾಂಧಿ
Published On - 10:17 am, Wed, 1 December 21