ಡಿಸ್ಪೂರ್: ಕ್ರಿಸ್ಮಸ್ ಸಮಯದಲ್ಲಿ ಚರ್ಚ್ಗಳಿಗೆ ಭೇಟಿ ನೀಡುವ ಹಿಂದೂಗಳನ್ನು ಥಳಿಸುತ್ತೇವೆ ಎಂದು ಭಜರಂಗ ದಳದ ನಾಯಕ ನೀಡಿರುವ ಹೇಳಿಕೆ ಈಗ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಸ್ಸಾಂನ ಕಚರ್ ಜಿಲ್ಲೆಯ ಸಿಲ್ಚಾರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಜರಂಗ ದಳದ ನಾಯಕ ಹಾಗೂ ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಈ ಹೇಳಿಕೆ ನೀಡಿದ್ದಾರೆ. ಈ ಬಾರಿ ಕ್ರಿಸ್ಮಸ್ನಲ್ಲಿ ಯಾವುದೇ ಹಿಂದುಗಳು ಚರ್ಚ್ಗೆ ತೆರಳಬಾರದು. ಹಾಗೆ ಹೋಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ನಮ್ಮವರು ಚರ್ಚ್ಗೆ ಹೋಗುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಹೀಗಾಗಿ, ಈ ಬಾರಿ ಕ್ರಿಸ್ಮಸ್ಗೆ ತೆರಳುವ ಹಿಂದುಗಳಿಗೆ ನಾವು ಏಟು ಹಾಕುತ್ತೇವೆ ಎಂದು ಮಿಥು ನಾಥ್ ಎಚ್ಚರಿಕೆ ರವಾನಿಸಿದರು.
ನಾನು ಈ ರೀತಿ ಹೇಳಿಕೆ ನೀಡುವುದರಿಂದ ನಾಳೆ ಸುದ್ದಿವಾಹಿನಿಗಳಲ್ಲಿ ಗೂಂಡಾ ದಳ ಎನ್ನುವ ಹೆಡ್ಲೈನ್ ಬರುತ್ತದೆ ಎಂಬುದು ನನಗೆ ಗೊತ್ತಿದೆ. ಆದರೆ, ಅದು ನಮಗೆ ಮುಖ್ಯವಲ್ಲ. ಹಿಂದೂಗಳು, ಚರ್ಚ್ಗಳಿಗೆ ಹೋಗಬಾರದು ಎಂಬುದಷ್ಟೇ ನಮ್ಮ ಉದ್ದೇಶ ಎಂದು ಮಿಥು ನಾಥ್ ಹೇಳಿದರು.
ಲವ್ ಜಿಹಾದ್ ವಿಚಾರದಲ್ಲೂ ಮಿಥು ನಾಥ್ ಸಿಟ್ಟಾಗಿದ್ದು ನಮ್ಮ ಅಮ್ಮಂದಿರು ಹಾಗೂ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಾವು ಎಲ್ಲ ಟೀಕೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಮಿಥು ನಾಥ್ ಹೇಳಿದರು.
ಡಿಜೆ ಹಳ್ಳಿ-ಕೆಜಿ ಹಳ್ಳಿ ವ್ಯಾಪ್ತಿಯ ಹಿಂದೂಗಳ ರಕ್ಷಣೆಗೆ ಭಜರಂಗದಳ ಆಗ್ರಹ