ದೆಹಲಿ: ರೈತ ಚಳುವಳಿಯ 40ನೇ ದಿನ ನಡೆಯಲಿರುವ 7 ಸುತ್ತಿನ ಸಭೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಆಗಮಿಸಿದ್ದಾರೆ. ‘ಇಂದಿನ ಸಭೆಯಲ್ಲಿ ರೈತರ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು’ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇಂದಿನ ಸಭೆಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಜನವರಿ 6 ಮತ್ತು 26ರಂದು ಟ್ರ್ಯಾಕ್ಟರ್ ಮೆರವಣಿಗೆ ಆಯೋಜಿಸುತ್ತೇವೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್ವಿಂದರ್ ಎಸ್. ಸಬ್ರಾ ತಿಳಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್, ಈವರೆಗೆ 60 ರೈತರು ಮೃತರಾಗಿದ್ದು, ರೈತರ ಸಾವಿಗೆ ಕೇಂದ್ರ ಸರ್ಕಾರವೇ ಉತ್ತರದಾಯಿಯಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಖಟ್ಟರ್ ಜನರಲ್ ಡೈಯರ್ಗೆ ಹೋಲಿಕೆ
ಇಂದು ಬೆಳಗ್ಗೆ ದೆಹಲಿಯತ್ತ ಹೊರಟ ಹರಿಯಾಣದ ರೈತರ ಮೇಲೆ ಅಶ್ರವಾಯು ಪ್ರಯೋಗಿಸಿದ ಕುರಿತು ಆಮ್ಆದ್ಮಿ ಪಕ್ಷ ಮುನಿಸಿಕೊಂಡಿದೆ. ಹರಿಯಾಣ ಮುಖ್ಯಮಂತ್ರಿ ಮೋಹನ್ ಲಾಲ್ ಖಟ್ಟರ್ರನ್ನು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ರೆಜಿನಾಲ್ಡ್ ಡೈಯರ್ಗೆ ಆಮ್ಆದ್ಮಿಯ ಮುಖಂಡ ರಾಘವ್ ಛಡ್ಡಾ ಹೋಲಿಸಿದ್ದಾರೆ. ರೈತರು ಸರ್ಕಾರದ ಶತ್ರುಗಳೇ ಎಂದು ಪ್ರಶ್ನಿಸಿರುವ ಅವರು, ಅವರು ನಮ್ಮ ದೇಶದ ರೈತರೇ ಹೊರತು ಚೀನಾ ಮತ್ತು ಪಾಕಿಸ್ತಾನದ ಸೈನಿಕರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Delhi Chalo: ಇಂದು 7ನೇ ಸುತ್ತಿನ ಸಭೆ; ಫಲಿತಾಂಶಕ್ಕೆ ಕಾದು ಕುಳಿತಿದೆ ಇಡೀ ದೇಶ
Published On - 1:32 pm, Mon, 4 January 21