ನವದೆಹಹಲಿ: ಭಾರತದಲ್ಲಿ ಚಳಿಯ ಜೊತೆಗೆ ಮಳೆಯೂ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD)ಯ ಇತ್ತೀಚಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಹೊಸ ವರ್ಷಕ್ಕೂ ಮೊದಲು ಈ ವರ್ಷ ಅನೇಕ ರಾಜ್ಯಗಳಲ್ಲಿ ತೀವ್ರವಾದ ಚಳಿ ಮತ್ತು ಶೀತ ಗಾಳಿ ಆವರಿಸಲಿದೆ. ದೇಶದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಮತ್ತು ಲಘು ಮಳೆಯಾಗುವ ಸಾಧ್ಯತೆಯಿದೆ. IMDಯ ಇತ್ತೀಚಿನ ಹವಾಮಾನ ಮುನ್ಸೂಚನೆಯಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಈ ವಾರ ಶೀತ ಗಾಳಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಮತ್ತು ಆಲಿಕಲ್ಲು ಸಹಿತ ಮಳೆಯೂ ಆಗಲಿದೆ.
ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಡಿಸೆಂಬರ್ 31ರಿಂದ ಜನವರಿ 2ರವರೆಗೆ ಶೀತ ಗಾಳಿಯ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ರಾಜಸ್ಥಾನದಲ್ಲಿ ಜನವರಿ 1 ಮತ್ತು 2ರಂದು ತೀವ್ರ ಚಳಿ ಉಂಟಾಗಲಿದೆ. IMD ಪ್ರಕಾರ, ಡಿಸೆಂಬರ್ 29 ಮತ್ತು 30ರಂದು ಬಿಹಾರದಲ್ಲಿ ಶೀತ ವಾತಾವರಣ ಇರಲಿದೆ. ಮುಂದಿನ ಮೂರು ದಿನಗಳಲ್ಲಿ ರಾತ್ರಿ ಮತ್ತು ಬೆಳಗಿನ ಸಮಯದಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ರಾಜಸ್ಥಾನದಲ್ಲಿ ಮತ್ತು ಡಿಸೆಂಬರ್ 30 ಮತ್ತು 31ರಂದು ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ದಟ್ಟವಾದ ಮಂಜು ಇರುತ್ತದೆ ಎಂದು ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.
28/12/2021; 1800 IST; Light to moderate intensity rain would occur over and adjoining areas of few places of Delhi, NCR (Ghaziabad, Gurugram, Manesar) Sohana, Nuh (Haryana) Saharanpur, Deoband, Kandhla, Baraut, Bagpat, Khekra, Sahaswan, Badayun, Kasganj, Sikandra Rao,
— India Meteorological Department (@Indiametdept) December 28, 2021
ವಾಯುವ್ಯ ಭಾರತದ ಭಾಗಗಳಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಇದೇ ರೀತಿಯ ಪರಿಸ್ಥಿತಿಗಳು ಇಂದು ಮತ್ತು ಡಿಸೆಂಬರ್ 29ರಂದು ಮಧ್ಯ ಭಾರತದ ಮೇಲೆ ಮತ್ತು ಡಿಸೆಂಬರ್ 30ರವರೆಗೆ ಪೂರ್ವ ಭಾರತದಲ್ಲಿ ಮಳೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಡಿಸೆಂಬರ್ 29ರಂದು ಚದುರಿದ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ.
28/12/2021: 14:00 IST; Light to moderate intensity rain would occur over and adjoining areas of few places of Delhi, NCR (Hindon AF Station, Ghaziabad, Indirapuram, Chhapraula, Noida, Gurugram, Manesar)
— India Meteorological Department (@Indiametdept) December 28, 2021
ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಇಂದು ಲಘುವಾಗಿ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಡಿಸೆಂಬರ್ 29ರಂದು ಉತ್ತರ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಇಂದು ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ಮಳೆಯಾಗಲಿದೆ.
ಇದನ್ನೂ ಓದಿ: Karnataka Weather Today: ಕರ್ನಾಟಕದಲ್ಲಿ ಇನ್ನೂ 4 ದಿನ ಭಾರೀ ಚಳಿ; ಈ ರಾಜ್ಯಗಳಲ್ಲಿ ಇಂದು ಮಳೆ, ಹಿಮಪಾತ
Karnataka Dam Water Level: ದೇಶಾದ್ಯಂತ ನಿಲ್ಲದ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Published On - 7:47 pm, Tue, 28 December 21