West Bengal Elections 2021: ಮೇ 2ರಂದು ಮಮತಾ ಬ್ಯಾನರ್ಜಿಯನ್ನು ಜನರು ಬಂಗಾಳದಿಂದ ಹೊರಗೆ ಕಳಿಸಲಿದ್ದಾರೆ: ನರೇಂದ್ರ ಮೋದಿ

|

Updated on: Mar 21, 2021 | 5:29 PM

Narendra Modi in Bankura: ನೀವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕಾದ್ದರೆ ಬಿಜೆಪಿಗೆ ಮತ ಹಾಕಿ. ಬಂಗಾಳದ ಅಭಿವೃದ್ದಿ ನಿಮ್ಮ ಆದ್ಯತೆಯಾಗಿದ್ದರೆ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

West Bengal Elections 2021: ಮೇ 2ರಂದು ಮಮತಾ ಬ್ಯಾನರ್ಜಿಯನ್ನು ಜನರು ಬಂಗಾಳದಿಂದ ಹೊರಗೆ ಕಳಿಸಲಿದ್ದಾರೆ: ನರೇಂದ್ರ ಮೋದಿ
ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ
Follow us on

ಬಂಕುರಾ : ಪಶ್ಚಿಮಬಂಗಾಳದ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಬಂಕುರಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಶೋಲ್ ಪೊರಿಬರ್ತನ್ (ನಿಜವಾದ ಬದಲಾವಣೆ) ತರುವುದಾಗಿ ಹೇಳಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮತಾ ಬ್ಯಾನರ್ಜಿ ಹಲವಾರು ಹುಸಿ ಭರವಸೆಯನ್ನು ನೀಡಿದ್ದು, ಕಳೆದ 10 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ದೀದಿ ನೀವು ಖೇಲಾ ಹೋಬೆ (ನಾವು ಆಡ್ತೀವೆ) ಎಂದು ಹೇಳುತ್ತಿದ್ದೀರಿ. ಆದರೆ ಬಂಗಾಳದ ಜನರು ಖೇಲಾ ಶೇಶ್ ಹೋಬೆ (ಆಟ ಮುಗಿಸ್ತೀವಿ) ಎನ್ನುತ್ತಿದ್ದಾರೆ ಎಂದಿದ್ದಾರೆ ಮೋದಿ.

ನೀವು ನನಗೆ ಹೊಡೆಯಬಹುದು, ಅದಕ್ಕಾಗಿ ನಿಮಗೆ ನನ್ನ ಫೋಟೊ ಮಾತ್ರ ಸಾಕು. ಆದರೆ ನಾನು ಬಂಗಾಳದ ಅಭಿವೃದ್ಧಿಗೆ ಏಟು ನೀಡಲು ಬಿಡಲಾರೆ. ಬಂಕುರಾದ ಈ ಜನರೇ ಸಾಕ್ಷಿ. ಬಂಗಾಳದ ಜನರು ಮೇ ತಿಂಗಳಲ್ಲಿ ನಿಮ್ಮನ್ನು ಹೊರಗೆ ಕಳುಹಿಸುತ್ತಾರೆ. ನಾನು ಇಲ್ಲಿಗೆ ಲೋಕಸಭಾ ಚುನಾವಣೆಗೆ ಮುನ್ನ ಬಂದಿದ್ದೆ. ಆಗ ದೀದಿ ಯಾವ ರೀತಿ ಇಲ್ಲಿನ ರಸ್ತೆಗಳನ್ನು ಬಂದ್ ಮಾಡಿದ್ದರು ಎಂದು ಗೊತ್ತಿದೆ. ನಾವು ರ‍್ಯಾಲಿ ಸ್ಥಳಕ್ಕೆ ತಲುಪದಂತೆ ತಡೆಯಲು ಪೊಲೀಸರನ್ನು ನಿಯೋಜಿಸಿದ್ದರು.

ಇವತ್ತು ನಾನು ಬಂಕುರಾಗೆ ಬಂದಿದ್ದು, ರಾಮ ರಾಮ ಎಂದು ರಾಮಪದ ಜಪಿಸುವ ಸಹೋದರ ಮತ್ತು ಸಹೋದರಿ
ಯರನ್ನುದ್ದೇಶಿಸಿ ಮಾತನಾಡಲಿದ್ದೇನೆ. ಇವತ್ತು ರಾಮಪದ ಜಗತ್ತಿನಲ್ಲಿ ಎಲ್ಲರಿಗೂ ಗೊತ್ತು. ನೀವು ರಾಮಪದದಲ್ಲಿ ನೀವು ರಾಮನನ್ನು ಕರೆದರೆ ಎಲ್ಲ ಮನೆಯಿಂದಲೂ ರಾಮ ಬರುತ್ತಾನೆ.


ಇಲ್ಲಿನ ರೈತರು ವರ್ಷಕ್ಕೆ ಒಂದೇ ಒಂದು ಬೆಳೆಯುವಂತೆ ಬಲವಂತ ಮಾಡಲಾಗುತ್ತಿದೆ. ಇಲ್ಲಿನ ನೀರಾವರಿ ಯೋಜನೆ ಅರ್ಧಕ್ಕೆ ನಿಂತಿರುವುದೇಕೆ? . ಇಲ್ಲಿನ ಯುವ ಜನಾಂಗ ಚಿಂತಿತರಾಗಿದ್ದಾರೆ. ಕೆಲಸ, ಕೈಗಾರಿಕೆ, ಹೂಡಿಕೆ ಎಲ್ಲಿದೆ ದೀದಿ? ಇಲ್ಲಿ ದೀದಿ ಮತ್ತು ಅವರ ಸರ್ಕಾರ 10 ವರ್ಷಗಳಲ್ಲಿ ಯಾವ ರೀತಿ ಆಟವಾಡಿದೆ ಎಂಬುದಕ್ಕೆ ಇಲ್ಲಿನ ಪ್ರದೇಶಗಳೇ ಸಾಕ್ಷಿ. ತೃಣಮೂಲ ಸರ್ಕಾರದ ಆಟದಲ್ಲಿ ಅಜಿತ್ ಮೊರ್ಮೂ ಸೇರಿದಂತೆ ಹಲವಾರು ಬುಡಕಟ್ಟು ಜನಾಂಗದ ನಮ್ಮ ಸಂಗಾತಿಗಳು ಹುತಾತ್ಮರಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.  ನೀವು ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಕಿತ್ತೆಸೆಯಬೇಕಾದ್ದರೆ ಬಿಜೆಪಿಗೆ ಮತ ಹಾಕಿ. ಬಂಗಾಳದ ಅಭಿವೃದ್ದಿ ನಿಮ್ಮ ಆದ್ಯತೆಯಾಗಿದ್ದರೆ ಬಿಜೆಪಿಗೆ ಮತ ನೀಡಿ ಎಂದಿದ್ದಾರೆ.


ಯಾವುದಾದರೂ ಯೋಜನೆ ಬಂದರೆ ಟಿಎಂಸಿ ಅಲ್ಲಿ ಹಗರಣ ನಡೆಸುವ ಅವಕಾಶ ಹುಡುಕುತ್ತದೆ. ಬಿಜೆಪಿ ಯೋಜನೆಗಳನ್ನು ಜಾರಿ ಮಾಡಲು ಬಯಸುತ್ತಿದೆ. ಆದರೆ ಟಿಎಂಸಿ ಹಗರಣ ಮಾಡಲು ಬಯಸುತ್ತಿದೆ. ಎಲ್ಲಿಯಾದರೂ ಯಾವುದೇ ಯೋಜನೆ ಇಲ್ಲದೆ, ಅಲ್ಲಿ ಹಗರಣ ನಡೆಸಲು ಅವಕಾಶ ಹುಡುಕುತ್ತಿರುತ್ತದೆ ಟಿಎಂಸಿ ಎಂದು ಮೋದಿ ಆರೋಪಿಸಿದ್ದಾರೆ.

 ಇದನ್ನೂ ಓದಿ:  Assam Elections 2021: ಕಾಂಗ್ರೆಸ್ ಟೀ ರಾಜಕಾರಣ ಮಾಡುತ್ತಿದೆ, ಬಿಜೆಪಿ ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕೆ ಬದ್ಧ: ನರೇಂದ್ರ ಮೋದಿ

Published On - 5:24 pm, Sun, 21 March 21