
ಕೊಲ್ಕತ್ತಾ, ಅಕ್ಟೋಬರ್ 14: ಪಶ್ಚಿಮ ಬಂಗಾಳದ ದುರ್ಗಾಪುರದ (Durgapur Horror) ಖಾಸಗಿ ಕಾಲೇಜಿನ ಬಳಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆಯ ಸಮಯದಲ್ಲಿ ನಡೆದ ಹಲ್ಲೆಯನ್ನು ವಿವರಿಸಿದ್ದಾರೆ. ಅತ್ಯಾಚಾರ ನಡೆಸಿದ ಯುವಕರು ನನ್ನನ್ನು ಹತ್ತಿರದ ಕಾಡಿನೊಳಗೆ ಕರೆದುಕೊಂಡು ಹೋದರು ಎಂದ ಆಕೆ ಅವರು ತನ್ನ ಮೇಲೆ ಹೇಗೆಲ್ಲ ದಾಳಿ ಮಾಡಿ ಬಲವಂತಪಡಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರ ಮುಂದೆ ಆಕೆ ಈ ಹೇಳಿಕೆ ನೀಡಿದ್ದಾರೆ. “ಅವರು ತಮ್ಮ ಕಾರನ್ನು ಬಿಟ್ಟು ನಮ್ಮ ಕಡೆಗೆ ಬರುತ್ತಿರುವುದನ್ನು ನಾವು ಗಮನಿಸಿದೆವು. ಆಗ ನಾವು ಕಾಡಿನ ಕಡೆಗೆ ಓಡಲು ಪ್ರಾರಂಭಿಸಿದೆವು. ನಂತರ ಆ ಮೂವರು ನಮ್ಮ ಹಿಂದೆ ಓಡಿ ಬಂದು ನನ್ನನ್ನು ಹಿಡಿದು ಕಾಡಿನೊಳಗೆ ಎಳೆದೊಯ್ದರು” ಎಂದು ಆ ಯುವತಿ ಹೇಳಿದ್ದಾರೆ.
ಇದನ್ನೂ ಓದಿ: ಹುಡುಗಿಯರು ರಾತ್ರಿ ಹೊರಗೆ ಹೋಗಬಾರದು; ಅತ್ಯಾಚಾರದ ಬಗ್ಗೆ ಮಮತಾ ಬ್ಯಾನರ್ಜಿ ಶಾಕಿಂಗ್ ಹೇಳಿಕೆ
“ಅವರು ನನ್ನನ್ನು ಹಿಂದಿನಿಂದ ಹಿಡಿದು, ನನ್ನ ಫೋನ್ ತೆಗೆದುಕೊಂಡು ನನ್ನ ಸ್ನೇಹಿತನಿಗೆ ಕರೆ ಮಾಡಲು ಹೇಳಿದರು. ಅವನು ಬರದಿದ್ದಾಗ, ಅವರು ನನ್ನನ್ನು ಮಲಗಲು ಒತ್ತಾಯಿಸಿದರು. ನಾನು ಕಿರುಚಿದೆ. ಆಗ ನಾನು ಶಬ್ದ ಮಾಡಿದರೆ, ಅವರು ಇನ್ನಷ್ಟು ಪುರುಷರನ್ನು ಕರೆಯುತ್ತೇವೆ ಎಂದು ಹೆದರಿಸಿದರು. ಆದ್ದರಿಂದ ನಾನು ಹೆದರಿ ಸುಮ್ಮನಾದೆ” ಎಂದು ಆಕೆ ವೈದ್ಯರಿಗೆ ಹೇಳಿದ್ದಾರೆ.
ಒಡಿಶಾದ ಜಲೇಶ್ವರದ 23 ವರ್ಷದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಶುಕ್ರವಾರ ರಾತ್ರಿ ಖಾಸಗಿ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ನ ಹೊರಗೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ