70 ಗಂಟೆಗಳ ಕೆಲಸ, ನಾರಾಯಣ ಮೂರ್ತಿ ಹೇಳಿದ್ರಲ್ಲಿ ತಪ್ಪೇನಿದೆ?: ಕಾಂಗ್ರೆಸ್ ನಾಯಕ

|

Updated on: Nov 10, 2023 | 3:38 PM

ನಾರಾಯಣ ಮೂರ್ತಿಯವರಂತಹ ಹಲವಾರು ಸಾರ್ವಜನಿಕ ಪ್ರತಿನಿಧಿಗಳು ದಿನಕ್ಕೆ 12-15 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ​​ ಮನೀಶ್ ತಿವಾರಿ ಹೇಳಿದ್ದಾರೆ. ಈ ಬಗ್ಗೆ ಮನೀಶ್ ತಿವಾರಿ ಅವರು ಎಕ್ಸ್​​ನಲ್ಲಿ ಟ್ವೀಟ್​​ ಕೂಡ ಮಾಡಿದ್ದಾರೆ. ನಾರಾಯಣ ಮೂರ್ತಿ ಅವರು 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಯೋಚನೆ ನನಗೆ ಅರ್ಥವಾಗಿಲ್ಲ, ಆದರೆ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಟ್ವೀಟ್​​ ಮಾಡಿದ್ದಾರೆ.

70 ಗಂಟೆಗಳ ಕೆಲಸ, ನಾರಾಯಣ ಮೂರ್ತಿ ಹೇಳಿದ್ರಲ್ಲಿ ತಪ್ಪೇನಿದೆ?: ಕಾಂಗ್ರೆಸ್ ನಾಯಕ
ಕಾಂಗ್ರೆಸ್ ನಾಯಕ​​ ಮನೀಶ್ ತಿವಾರಿ
Follow us on

ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ  (Narayan Murthy) ಅವರ ವಾರದಲ್ಲಿ 70 ಗಂಟೆಗಳ ಕಾಲ ಯುವಕರು ಕೆಲಸ ಮಾಡಬೇಕು ಎಂಬ ಹೇಳಿಕೆ ಭಾರೀ ಚರ್ಚೆ ಕಾರಣವಾಗಿತ್ತು. ಈ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿತ್ತು. ಅನೇಕರು ಈ ವಿಚಾರವನ್ನು ಒಪ್ಪಿಕೊಂಡರೇ, ಇನ್ನು ಕೆಲವರು ಇದನ್ನು ವಿರೋಧಿಸಿದರೆ. ಇದೀಗ ನಾರಾಯಣ ಮೂರ್ತಿ ಅವರು ಈ ಹೇಳಿಕೆಯನ್ನು ಕಾಂಗ್ರೆಸ್​​​ ನಾಯಕರೊಬ್ಬರು ಒಪ್ಪಿಕೊಂಡಿದ್ದಾರೆ. ನಾರಾಯಣ ಮೂರ್ತಿಯವರಂತಹ ಹಲವಾರು ಸಾರ್ವಜನಿಕ ಪ್ರತಿನಿಧಿಗಳು ದಿನಕ್ಕೆ 12-15 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ​​ ಮನೀಶ್ ತಿವಾರಿ ಹೇಳಿದ್ದಾರೆ. ಈ ಬಗ್ಗೆ ಮನೀಶ್ ತಿವಾರಿ ಅವರು ಎಕ್ಸ್​​ನಲ್ಲಿ ಟ್ವೀಟ್​​ ಕೂಡ ಮಾಡಿದ್ದಾರೆ. ನಾರಾಯಣ ಮೂರ್ತಿ ಅವರು 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಯೋಚನೆ ನನಗೆ ಅರ್ಥವಾಗಿಲ್ಲ, ಆದರೆ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಟ್ವೀಟ್​​ ಮಾಡಿದ್ದಾರೆ.

ಒಂದು ದಿನದ ರಜೆಯೊಂದಿಗೆ 70 ಗಂಟೆಗಳ ಕೆಲಸವು ರೂಢಿಯಾಗಬೇಕು. ಭಾರತವು ನಿಜವಾಗಿಯೂ ಒಂದು ದೊಡ್ಡ ಶಕ್ತಿಯಾಗಬೇಕಾದರೆ ಒಂದು ಅಥವಾ ಎರಡು ತಲೆಮಾರುಗಳು ವಾರಕ್ಕೆ 70 ಗಂಟೆಗಳ ಕೆಲಸದ ನೀತಿಯನ್ನಾಗಿ ಮಾಡಿಕೊಳ್ಳಬೇಕು. ವಾರಕ್ಕೆ 70 ಗಂಟೆಗಳ ಒಂದು ದಿನ ರಜೆ ಮತ್ತು ಒಂದು ವರ್ಷದಲ್ಲಿ 15 ದಿನಗಳ ರಜೆಗಳು ರೂಢಿಯಾಗಬೇಕು ಎಂದು ಮನೀಶ್ ತಿವಾರಿ ಹೇಳಿದ್ದಾರೆ.

ನಾರಾಯಣ ಮೂರ್ತಿ ಅವರು ಈ ಹೇಳಿಕೆ ಚರ್ಚೆ ಕಾರಣವಾಗಿತ್ತು. ಇದೀಗ ಈ ವಿಚಾರ ಎಲ್ಲ ಕಡೆ ವಾದ-ವಿವಾದಕ್ಕೆ ಕಾರಣವಾಗಿದೆ. ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ. ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸಬೇಕು. ಇಲ್ಲದಿದ್ದರೆ ಅದ್ಭುತವಾದ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ನಾವು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ನಮ್ಮ ಯುವಕರು 70 ಗಂಟೆಗಳ ಕಾಲ ದುಡಿಯಬೇಕು ಎಂಬುದು ನನ್ನ ವಿನಂತಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾರಾಯಣಮೂರ್ತಿ ಹೇಳಿದ್ದು ಹಂಗಲ್ಲ, ಹಿಂಗೆ: 70 ಗಂಟೆ ಕೆಲಸವನ್ನು ಬಿಡಿಸಿ ವಿವರಿಸಿದ ಟೆಕ್ ಮಹೀಂದ್ರ ಸಿಇಒ ಗುರ್ನಾನಿ

ಇನ್ನು ಈ ಕ್ರಮಗಳನ್ನು ಅನುಸರಿಸಿದ ದೇಶಗಳು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡಿದೆ. ಎರಡನೆಯ ಮಹಾಯುದ್ಧದ ನಂತರ ಜರ್ಮನ್ನರು ಮತ್ತು ಜಪಾನಿಯರು ಮಾಡಿದ್ದು ಇದನ್ನೇ ಎಂದು ಹೇಳಿದರು. ನಾರಾಯಣ ಮೂರ್ತಿ ಅವರ ಈ ಹೇಳಿಕೆಯನ್ನು ಜೆಎಸ್‌ಡಬ್ಲ್ಯು ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರು ಬೆಂಬಲಿಸಿದ್ದಾರೆ. ನಾನು ನಾರಾಯಣ ಮೂರ್ತಿಯವರ ಹೇಳಿಕೆಯನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳವೇ, 2047ರ ವೇಳೆ ನಾವೆಲ್ಲರೂ ಹೆಮ್ಮೆಪಡುವಂತಹ ಆರ್ಥಿಕ ಮಹಾಶಕ್ತಿಯಾಗಿ ಭಾರತವನ್ನು ಮಾಡಬೇಕು ಎಂದು ಹೇಳಿದರು.

ಇದರ ಜತೆಗೆ ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಕೂಡ ನಾರಾಯಣ ಮೂರ್ತಿಯವರ ಮಾತುಗಳನ್ನು ಒಪ್ಪಿಕೊಂಡಿದ್ದಾರೆ. ನಾವು ಕಡಿಮೆ ಕೆಲಸ ಮಾಡುವುದು ಅಥವಾ ಮನರಂಜನೆ ಮಾಡಿಕೊಂಡು ಇರುವ ಸಮಯವಲ್ಲ, ಬದಲಿಗೆ ಇತರ ದೇಶಗಳು ನಿರ್ಮಿಸಿದ್ದನ್ನು ಒಂದು ಪೀಳಿಗೆಯಲ್ಲಿ ನಾವು ನಿರ್ಮಿಸಬೇಕು ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ