ಅಟ್ಟಾಡಿಸಿಕೊಂಡು ಬಂದ ನಾಯಿಗಳ ಗುಂಪು: ಹೆದರಿದ ಬಾಲಕ ಓಡುವಾಗ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಾವು, ಅಪ್ಪ-ಅಮ್ಮನಿಗೆ ಏಕೈಕ ಪುತ್ರ

ತೆಲಂಗಾಣ ದಶಾಬ್ದಿ ಆಚರಣೆ ಅಂಗವಾಗಿ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಭಾಗವಹಿಸಲು ಧನುಷ್ ಹೋಗುವಾಗ ಬೀದಿ ನಾಯಿಗಳು ಹಿಂಬಾಲಿಸಿವೆ.

ಅಟ್ಟಾಡಿಸಿಕೊಂಡು ಬಂದ ನಾಯಿಗಳ ಗುಂಪು: ಹೆದರಿದ ಬಾಲಕ ಓಡುವಾಗ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಾವು, ಅಪ್ಪ-ಅಮ್ಮನಿಗೆ ಏಕೈಕ ಪುತ್ರ
ಅಟ್ಟಾಡಿಸಿಕೊಂಡು ಬಂದ ನಾಯಿಗಳ ಗುಂಪು

Updated on: Jun 21, 2023 | 1:28 PM

ಹನುಮಕೊಂಡ: ಬೀದಿ ನಾಯಿಗಳು (Stray Dogs) ಅಟ್ಟಿಸಿಕೊಂಡು ಬಂದಿದ್ದರಿಂದ ಬಾಲಕನೊಬ್ಬ ಹೆದರಿ ಓಡಿದ್ದಾನೆ. ಅವುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಹನುಮಕೊಂಡ ಜಿಲ್ಲೆಯಲ್ಲಿ ಮಂಗಳವಾರ (ಜೂನ್ 20) ಈ ದಾರುಣ ಘಟನೆ ನಡೆದಿದೆ. ವಿವರಗಳನ್ನು ನೋಡುವುದಾದರೆ… ಹನುಮಕೊಂಡ ಜಿಲ್ಲೆಯ (Hanumakonda) ಕಮಲಾಪುರ ಮಂಡಲದ ಮರ್ರಿಪಲ್ಲಿಗುಡ್ಡೆ ನಿವಾಸಿಗಳಾದ ಜಯಪಾಲ್ ಮತ್ತು ಸ್ವಪ್ನಾ ದಂಪತಿಯ ಏಕೈಕ ಮಗು ಧನುಷ್ (10). ಸ್ಥಳೀಯ ಸರಕಾರಿ ಪ್ರೌಢಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ತೆಲಂಗಾಣ ದಶಾಬ್ದಿ ಆಚರಣೆ ಅಂಗವಾಗಿ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಧನುಷ್ ಭಾಗವಹಿಸಬೇಕಿದ್ದ (Telangana Crime).

ಈ ರ‍್ಯಾಲಿಯಲ್ಲಿ ಭಾಗವಹಿಸಲು ಹೋಗುವಾಗ ಬೀದಿ ನಾಯಿಗಳು ಹಿಂಬಾಲಿಸಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಬಾಲಕ ನಡು ರಸ್ತೆಯಲ್ಲಿ ಓಡಿದ್ದಾನೆ. ಅದೇ ವೇಳೆ, ಅದೇ ಗ್ರಾಮದ ರಿಕ್ಕಲ ನಾರಾಯಣ ರೆಡ್ಡಿ ಎಂಬುವವರ ಟ್ರ್ಯಾಕ್ಟರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಟ್ರ್ಯಾಕ್ಟರ್ ಚಾಲಕ ತೋಟ ವಿಜಯೇಂದರ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಟ್ರ್ಯಾಕ್ಟರ್ ಬಾಲಕನಿಗೆ ಡಿಕ್ಕಿ ಹೊಡೆದಿದೆ.

Also Read: ದೇಶಾಭಿಮಾನ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಇದೆ, ದೇಶಸೇವೆಗೆ ಹೊರಟವು ಅಂಕೋಲಾದ 17 ಶ್ವಾನಮರಿಗಳು!

ಅಪಘಾತದಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಲುಕಿಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ. ತಮ್ಮ ಏಕೈಕ ಪುತ್ರನ ಅಕಾಲಿಕ ಮರಣಕ್ಕೆ ಧನುಷ್ ಪೋಷಕರು ರೋದಿಸಿದ್ದಾರೆ. ಧನುಷ್ ತಂದೆ ಜಯಪಾಲ್ ಅವರು ಟ್ರ್ಯಾಕ್ಟರ್ ಮಾಲೀಕ ನಾರಾಯಣ ರೆಡ್ಡಿ ಮತ್ತು ಚಾಲಕ ತೋಟ ವಿಜಯೇಂದರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ