Watch: ಮುನ್ಸಿಪಲ್ ಕಾರ್ಪೊರೇಷನ್ ಜೂನಿಯರ್ ಇಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ ಮೀರಾ ಭಾಯಂದರ್ ಶಾಸಕಿ ಗೀತಾ ಜೈನ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಜೈನ್ ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಶನ್‌ನ ಇಬ್ಬರು ಎಂಜಿನಿಯರ್‌ಗಳನ್ನು ನಿಂದಿಸುತ್ತಿರುವುದನ್ನು ಕಾಣಬಹುದು. ಮನೆಯೊಂದನ್ನು ಕೆಡವಿದ್ದರಿಂದ ಅಲ್ಲಿ ವಾಸಿಸುತ್ತಿದ್ದ ಕುಟುಂಬ ಬೀದಿಗೆ ಬಂದಿದೆ.
ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವ ಮತ್ತು ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ಆದಾಗ್ಯೂ, ಕೆಲವೊಮ್ಮೆ ಅಧಿಕಾರ ಮತ್ತು ಹಣದ ಮದದಿಂದ ಜನರು ಕಾನೂನು ಕೈಗೆತ್ತಿಕೊಳ್ಳುವುದುಂಟು. ಮಹಾರಾಷ್ಟ್ರದ (Maharashtra) ಮೀರಾ ಭಾಯಂದರ್ (Mira Bhayandar) ಪ್ರದೇಶದಲ್ಲಿನ ಪಕ್ಷೇತರ ಶಾಸಕಿಯೊಬ್ಬರು ಮುನ್ಸಿಪಲ್ ಕಾರ್ಪೊರೇಷನ್ ನೌಕರನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ (MBMC)ಯ ಜೂನಿಯರ್ ಇಂಜಿನಿಯರ್ ಕಾಶಿಮಿರಾ ಪ್ರದೇಶದಲ್ಲಿ ಕೆಡವುವ ಕಾಮಗಾರಿ ನಡೆಸುತ್ತಿದ್ದ ವೇಳೆ ಅಲ್ಲಿನ ಶಾಸಕಿ ಗೀತಾ ಜೈನ್ ಮಂಗಳವಾರ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಜೈನ್ ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಶನ್‌ನ ಇಬ್ಬರು ಎಂಜಿನಿಯರ್‌ಗಳನ್ನು ನಿಂದಿಸುತ್ತಿರುವುದನ್ನು ಕಾಣಬಹುದು. ಮನೆಯೊಂದನ್ನು ಕೆಡವಿದ್ದರಿಂದ ಅಲ್ಲಿ ವಾಸಿಸುತ್ತಿದ್ದ ಕುಟುಂಬ ಬೀದಿಗೆ ಬಂದಿದೆ. ಮುಂಗಾರು ಮಳೆ ಬಂದಿರುವಾಗ ಅವರಿಗೆ ಈ ಪರಿಸ್ಥಿತಿ ಮಾಡಿದ್ದಕ್ಕಾಗಿ ಇಬ್ಬರು ಉದ್ಯೋಗಿಗಳಲ್ಲಿ ಒಬ್ಬನ ಕಾಲರ್ ಹಿಡಿದು ಶಾಸಕಿ ಕೆನ್ನೆಗೆ ಬಾರಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದಾದ ನಂತ ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಶಾಸಕಿ, ನಿಗಮದ ನೌಕರನಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ, ಶಿಕ್ಷೆಯನ್ನು ಎದುರಿಸಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ. ಮುನ್ಸಿಪಲ್ ಕಾರ್ಪೊರೇಷನ್ ನೌಕರರು ಬಿಲ್ಡರ್‌ಗಳ ಸಹಯೋಗದಲ್ಲಿ ಖಾಸಗಿ ಭೂಮಿಯಲ್ಲಿದ್ದ ಕಟ್ಟಡಗಳ ನೆಲಸಮ ಕಾರ್ಯವನ್ನು ನಡೆಸಿದರು ಎಂದು ಅವರು ಹೇಳಿದರು.
ತನ್ನ ಕಾರ್ಯವು ಕಾನೂನಿಗೆ ವಿರುದ್ಧವಾಗಿದೆ ಎಂದು ಒಪ್ಪಿಕೊಂಡ ಜೈನ್, ಮನೆಗಳನ್ನು ಕೆಡವಲಾದ ಮನೆಮಾಲೀಕರ ಅವಸ್ಥೆಯನ್ನು ನೋಡಿ ಇಬ್ಬರು ಎಂಜಿನಿಯರ್‌ಗಳು ನಗುತ್ತಿರುವುದನ್ನು ಕಂಡು ಕೋಪದಿಂದ ನಿಯಂತ್ರಣವನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: International Yoga Day 2023: ಸೀರೆಯುಟ್ಟು ಯೋಗ ಮಾಡಿದ ಮಹಿಳೆಯರು
ಯಾರು ಈ ಗೀತಾ ಜೈನ್?
ಜುಲೈ 5, 1964 ರಂದು ಜನಿಸಿದ ಜೈನ್, 2019 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದರು. ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (MVA) ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು. ನಂತರ ಶಿವಸೇನಾ ಪರವಾದರು. ಏಕನಾಥ್ ಶಿಂಧೆಯವರ ಬಂಡಾಯದ ನಂತರ, ಜೈನ್ ಬಿಜೆಪಿ ಸೇರಿದರು. ಫೆಬ್ರವರಿ 2015 ರಿಂದ ಆಗಸ್ಟ್ 2017 ರವರೆಗೆ ಮೀರಾ-ಭಾಯಂದರ್ ಮೇಯರ್ ಆಗಿ ಸೇವೆ ಸಲ್ಲಿಸಿದರು. ಮೀರಾ-ಭಾಯಂದರ್‌ನ ಮೂರು ಬಾರಿ ಕಾರ್ಪೊರೇಟರ್ ಆಗಿರುವ ಗೀತಾ ಜೈನ್ ಅವರ ಪತಿ ಭರತ್ ಜೈನ್. ಇವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ