ಬೆಡ್​ರೂಂನಲ್ಲೂ ಸಾಮಾಜಿಕ ಅಂತರಕಾಯ್ದುಕೊಂಡ ಗಂಡ: ಅನುಮಾನಗೊಂಡು ಅವನ ಪುರುಷತ್ವ ಪರೀಕ್ಷೆ ಮಾಡಿಸಿದ ಪತ್ನಿ

| Updated By: ganapathi bhat

Updated on: Apr 07, 2022 | 5:37 PM

ಕೊರೊನಾಗೆ ಭಾರೀ ಹೆದರಿದ್ದ ಈ ವ್ಯಕ್ತಿ ನಿತ್ಯ ಹೆಂಡತಿಯಿಂದ ದೂರ ಮಲಗುತ್ತಿದ್ದ. ಆಕೆ ಕೆಲವು ದಿನ ಇದನ್ನು ಸಹಿಸಿಕೊಂಡಳಾದರೂ ನಂತರ ಆಕೆ ಇದರಿಂದ ಸಿಟ್ಟಾಗಿದ್ದಳು. ನೋಡುವಷ್ಟು ನೋಡಿ, ಅಪ್ಪನಮನೆ ಹಾದಿ ಹಿಡಿದಿದ್ದಳು.

ಬೆಡ್​ರೂಂನಲ್ಲೂ ಸಾಮಾಜಿಕ ಅಂತರಕಾಯ್ದುಕೊಂಡ  ಗಂಡ: ಅನುಮಾನಗೊಂಡು ಅವನ ಪುರುಷತ್ವ ಪರೀಕ್ಷೆ ಮಾಡಿಸಿದ ಪತ್ನಿ
ಸಾಂದರ್ಭಿಕ ಚಿತ್ರ
Follow us on

ಭೋಪಾಲ್​: ಕೊರೊನಾ ವೈರಸ್​ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸುತ್ತಲೇ ಇದೆ. ನಿಯಮ ಮರೆತ ಅನೇಕರಿಗೆ ದಂಡ ಕೂಡ ವಿಧಿಸಲಾಗಿದೆ. ಭೋಪಾಲ್​ನಲ್ಲೊಬ್ಬ ಕೊರೊನಾಗೆ ಭಯಬಿದ್ದು ಹೆಂಡತಿ ಜೊತೆಯೇ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾನೆ! ಇದರಿಂದ ಆತ ಅನುಭವಿಸಿದ ಫಜೀತಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕೊರೊನಾ ಕಾಣಿಸಿಕೊಳ್ಳುವುದಕ್ಕೂ ಕೆಲವೇ ದಿನಗಳ ಮೊದಲು ಈತ ಮದುವೆ ಆಗಿದ್ದ. ಕೊರೊನಾ ಎಂದರೆ ಬೆಚ್ಚಿ ಬೀಳುತ್ತಿದ್ದ ಈತ, ಸರ್ಕಾರ ಕೊಟ್ಟ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ. ದಿನಕ್ಕೆ ಒಂದು ಹತ್ತು ಬಾರಿಯಾದರೂ ಕೈ ತೊಳೆಯುತ್ತಿದ್ದ. ಇದರ ಜೊತೆಗೆ ಮನೆಯವರ ಜೊತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದ!

ಕೊರೊನಾಗೆ ಭಾರಿ ಹೆದರಿದ್ದ ಈ ವ್ಯಕ್ತಿ ನಿತ್ಯ ಹೆಂಡತಿಯಿಂದ ದೂರ ಮಲಗುತ್ತಿದ್ದ. ಆಕೆ ಕೆಲವು ದಿನ ಇದನ್ನು ಸಹಿಸಿಕೊಂಡಳಾದರೂ ನಂತರ ಆಕೆ ಇದರಿಂದ ಸಿಟ್ಟಾಗಿದ್ದಳು. ಕೊನೆಗೆ ತಾಳ್ಮೆಯ ಕಟ್ಟೆ ಒಡೆದು ತಂದೆ-ತಾಯಿ ಜೊತೆ ಹೋಗಿ ವಾಸ ಮಾಡಲು ಆರಂಭಿಸಿದ್ದಳು.

ಇದನ್ನು ಸಹಿಸದ ಗಂಡ ಆಕೆಯ ಮನೆಗೆ ಹೋಗಿ ಗಲಾಟೆ ಮಾಡಿದ್ದ. ಹೆಂಡತಿಯನ್ನು ಮನೆಗೆ ಕಳುಹಿಸಿಕೊಡದಿದ್ದರೆ ಹುಷಾರ್​ ಎಂದು ಮಾವ-ಅತ್ತೆಗೆ ಅವಾಜ್​ ಹಾಕಿದ್ದ. ಇದರಿಂದ ಕೋಪಗೊಂಡ ಮಹಿಳೆ, ನೇರವಾಗಿ ಕಾನೂನು ಸೇವಾ ಪ್ರಾಧಿಕಾರದ ಮೆಟ್ಟಿಲೇರಿದ್ದಾಳೆ.  “ನನ್ನ ಗಂಡನ ಜೊತೆ ನನಗೆ ಇರಲು ಸಾಧ್ಯವಾಗುತ್ತಿಲ್ಲ. ಆತನಿಂದ ನಾನು ವಿಚ್ಛೇದನ ಪಡೆದುಕೊಳ್ಳುತ್ತಿದ್ದೇನೆ. ಆತ ಪುರುಷನೇ ಅಲ್ಲ. ಹೀಗಾಗಿ, ಆತ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆ,” ಎಂದು ದೂರಿದ್ದಾಳೆ!

ಈ ಹೇಳಿಕೆ ಕೇಳಿದ ಗಂಡ ಕಕ್ಕಾಬಿಕ್ಕಿ ಆಗಿದ್ದಾನೆ. ನಂತರ ಆತ ಪುರಷತ್ವ ಪರೀಕ್ಷೆಗೂ ಒಳಪಟ್ಟಿದ್ದಾನೆ. ವರದಿಯಲ್ಲಿ ಆತ ಪುರುಷ ಎಂಬುದು ಸಾಬೀತಾಗಿದೆ. ಈ ವರದಿ ನೋಡಿದ ನಂತರ ದಂಪತಿ ಕೌನ್ಸಿಲರ್​ ಭೇಟಿ ಮಾಡಿದ್ದಾರೆ. ಹೆಂಡತಿಯಿಂದ ಅಂತರ ಕಾಯ್ದುಕೊಳ್ಳುವುದಿಲ್ಲ  ಎಂಬ ಭರವಸೆ ಸಿಕ್ಕ ನಂತರ ಮಹಿಳೆ ಮನೆಗೆ ಬಂದಿದ್ದಾಳೆ.

ಫಸ್ಟ್ ನೈಟ್​ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?

Published On - 6:22 pm, Sat, 5 December 20