ತೊಡಲು ಬೆಚ್ಚನೆಯ ಬಟ್ಟೆ ಇಲ್ಲದೆ ಬಿಹಾರ ಶಾಲೆಯ ವಿದ್ಯಾರ್ಥಿ ಸಾವು

|

Updated on: Jan 11, 2024 | 2:45 PM

ತೊಡಲು ಬೆಚ್ಚನೆಯ ಬಟ್ಟೆ ಇಲ್ಲದೆ 10 ವರ್ಷದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಬಿಹಾರ ಶಾಲೆಯಲ್ಲಿ ನಡೆದಿದೆ. ಬಿಹಾರದಲ್ಲಿ ಶೀತ ಅಲೆ ಮುಂದುವರೆದಿದೆ, ಪೂರ್ವ ಚಂಪಾರಣ್ ಜಿಲ್ಲೆಯ ಶಾಲಾ ವಿದ್ಯಾರ್ಥಿಯೊಬ್ಬ ಬುಧವಾರ ಸಾವನ್ನಪ್ಪಿದ್ದಾನೆ.

ತೊಡಲು ಬೆಚ್ಚನೆಯ ಬಟ್ಟೆ ಇಲ್ಲದೆ ಬಿಹಾರ ಶಾಲೆಯ ವಿದ್ಯಾರ್ಥಿ ಸಾವು
ಶಾಲೆ
Image Credit source: NDTV
Follow us on

ತೊಡಲು ಬೆಚ್ಚನೆಯ ಬಟ್ಟೆ ಇಲ್ಲದೆ 10 ವರ್ಷದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಬಿಹಾರ ಶಾಲೆಯಲ್ಲಿ ನಡೆದಿದೆ. ಬಿಹಾರದಲ್ಲಿ ಶೀತ ಅಲೆ ಮುಂದುವರೆದಿದೆ, ಪೂರ್ವ ಚಂಪಾರಣ್ ಜಿಲ್ಲೆಯ ಶಾಲಾ ವಿದ್ಯಾರ್ಥಿಯೊಬ್ಬ ಬುಧವಾರ ಸಾವನ್ನಪ್ಪಿದ್ದಾನೆ.

ಚಾಕಿಯಾದ ಆದರ್ಶ್ ಸರ್ಕಾರಿ ಮಧ್ಯಮ ಶಾಲೆಯಲ್ಲಿ ಈ ಪ್ರಕರಣ ನಡೆದಿದ್ದು, ಆರನೇ ತರಗತಿಯ ವಿದ್ಯಾರ್ಥಿ ಮನೀಶ್ ಕುಮಾರ್ ಪ್ರಾರ್ಥನೆಯ ವೇಳೆ ಪ್ರಜ್ಞಾಹೀನನಾಗಿ ಕುಸಿದುಬಿದ್ದಿದ್ದ. ಶಿಕ್ಷಕರು ಅವರನ್ನು ಸ್ಥಳೀಯ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.

ಬಾಲಕ ಬೆಚ್ಚನೆಯ ಬಟ್ಟೆ ಧರಿಸದೇ ಇರುವುದು, ಬೆಳಗ್ಗೆ ತಿಂಡಿ ತಿನ್ನದ ಕಾರಣ ಪ್ರಜ್ಞೆ ತಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಮನೆಯವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದ. ಬಳಿಕ ಆಸ್ಪತ್ರೆಯಲ್ಲಿಯೇ ಆಕ್ರೋಶ ವ್ಯಕ್ತವಾಗಿತ್ತು.  ಶಾಲೆಗೆ ಬಂದ ಬಳಿಕ ಚಳಿ ಮತ್ತಷ್ಟು ಹೆಚ್ಚಾಗಿತ್ತು, ತೊಡಲು ಬಟ್ಟೆ ಇರಲಿಲ್ಲ.

ಮತ್ತಷ್ಟು ಓದಿ: ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು ವ್ಯಕ್ತಿ ಸಾವು..!

ಮೃತರ ಹಿರಿಯ ಸಹೋದರ ಚಂದನ್ ಕುಮಾರ್ ಮಾತನಾಡಿ, ಇಂದು ಬೆಳಗ್ಗೆ ಮನೀಷ್​ ಶಾಲೆಗೆ ಹೋಗಿದ್ದ, ಸ್ವಲ್ಪ ಸಮಯದ ನಂತರ ಶಿಕ್ಷಕರು ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದರು, ಆಸ್ಪತ್ರೆಗೆ ಬಂದ ಬಳಿಕ ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದು ವೈದ್ಯರು ಹೇಳಿರುವುದಾಗಿ ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಆದರೆ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್‌ಕುಮಾರ್ ಮಾತನಾಡಿ, ಮಗುವಿನ ಕುಟುಂಬಸ್ಥರು ಥಳಿಸಿದ್ದಾರೆ ಬಾಲಕನ್ನು ಥಳಿಸಿದ್ದರು, ಇದರಿಂದ ಕೋಪಗೊಂಡು ಊಟ ಸೇವಿಸದೆ, ಬೆಚ್ಚನೆಯ ಬಟ್ಟೆ ಧರಿಸದೆ ಶಾಲೆಗೆ ಬಂದಿದ್ದ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ