ಫರೀದಾಬಾದ್‌ನಲ್ಲಿ ಭೀಕರ ಕೃತ್ಯ; ಪತಿಯ ಕೊಲೆ ಮಾಡಿ ಮನೆ ಬಳಿ ಹೂತುಹಾಕಿದ ಹೆಂಡತಿ-ಪ್ರಿಯಕರ!

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಪತಿಯನ್ನು ಕೊಲೆ ಮಾಡಿ, ಮನೆ ಬಳಿ ತೆಗೆದಿದ್ದ ಗುಂಡಿಯಲ್ಲಿ ಮೃತದೇಹವನ್ನು ಹೂತುಹಾಕಿದ ಭೀಕರ ಘಟನೆ ಫರೀದಾಬಾದ್‌ನಲ್ಲಿ ನಡೆದಿದೆ. ಹೂತಿಟ್ಟಿದ್ದ ಮೃತದೇಹದ ಬಗ್ಗೆ ಮಾಹಿತಿ ಸಿಕ್ಕ 24 ಗಂಟೆಗಳ ಒಳಗಾಗಿ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ನಿವಾಸಿ ಹಾಗೂ ಮೃತನ ಪತ್ನಿ ಕೇಶವ್ ಮತ್ತು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ನಿವಾಸಿ ಕಾಮತ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫರೀದಾಬಾದ್‌ನಲ್ಲಿ ಭೀಕರ ಕೃತ್ಯ; ಪತಿಯ ಕೊಲೆ ಮಾಡಿ ಮನೆ ಬಳಿ ಹೂತುಹಾಕಿದ ಹೆಂಡತಿ-ಪ್ರಿಯಕರ!
Crime News
Image Credit source: Getty Image

Updated on: Aug 25, 2026 | 10:52 PM

ಫರೀದಾಬಾದ್, ಆಗಸ್ಟ್ 25: ಅಕ್ರಮ ಸಂಬಂಧಕ್ಕೆ ಅಡ್ಡಲಾಗಿದ್ದ ಪತಿಯನ್ನು ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿ, ಮೃತದೇಹವನ್ನು ಮನೆ ಸಮೀಪದ ಗುಂಡಿಯಲ್ಲಿ ಹೂತುಹಾಕಿರುವ ಘಟನೆ ಹರಿಯಾಣದ ಫರೀದಾಬಾದ್‌ನ (Faridabad)  ಮೊಜಾಬಾದ್ ಗ್ರಾಮದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಡಿಎಲ್‌ಎಫ್ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸಿ 24 ಗಂಟೆಗಳ ಒಳಗಾಗಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತನನ್ನು 42 ವರ್ಷದ ಶ್ಯಾಮವೀರ್ ಎಂದು ಗುರುತಿಸಲಾಗಿದೆ. ಆತನ ಪತ್ನಿ ಕೇಶವ್ ಮತ್ತು ಅವರ ಮನೆಯಲ್ಲೇ ವಾಸಿಸುತ್ತಿದ್ದ ಪ್ರಿಯಕರ ಕಾಮತ್ ಬಂಧಿತ ಆರೋಪಿಗಳು. ಶ್ಯಾಮವೀರ್‌ಗೆ ತನ್ನ ಪತ್ನಿ ಹಾಗೂ ಕಾಮತ್ ನಡುವಿನ ಅಕ್ರಮ ಸಂಬಂಧದ ಬಗ್ಗೆ ತಿಳಿದುಬಂದಿದ್ದರಿಂದ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಇದರಿಂದ ಆತನನ್ನು ತೊಲಗಿಸಲು ಆರೋಪಿಗಳು ಸಂಚು ರೂಪಿಸಿದ್ದರು.

ಇದನ್ನೂ ಓದಿ: ಮಗುವಿಗೆ ಔಷಧಿ ಕೊಡುವ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ; ದೆಹಲಿಯ ಟೆಕ್ಕಿಯನ್ನು ಹೊಡೆದು ಕೊಂದ ಅತ್ತೆ-ಮಾವಂದಿರು

ಕೊಲೆ ಮಾಡಿದ ರೀತಿ:

ಆಗಸ್ಟ್ 16ರಂದು ಆರೋಪಿ ಕಾಮತ್, ಶ್ಯಾಮವೀರ್‌ಗೆ ಮದ್ಯ ಕುಡಿಸಿದ್ದ. ಆತ ಸಂಪೂರ್ಣವಾಗಿ ಮತ್ತೇರಿದಾಗ ಇಂಟರ್‌ಲಾಕಿಂಗ್ ಟೈಲ್‌ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ. ಈ ವೇಳೆ ಶಬ್ದ ಹೊರಗೆ ಕೇಳಿಸದಿರಲಿ ಎಂದು ಪತ್ನಿ ಕೇಶವ್ ಹೊರಗಿನಿಂದ ಬಾಗಿಲು ಹಾಕಿಕೊಂಡಿದ್ದಳು. ಹತ್ಯೆಯ ನಂತರ ಇಬ್ಬರೂ ಸೇರಿ ಮನೆ ಸಮೀಪ ತೋಡಿದ್ದ ಗುಂಡಿಯಲ್ಲಿ ಮೃತದೇಹವನ್ನು ಹೂತುಹಾಕಿ ಸಾಕ್ಷ್ಯ ಮುಚ್ಚಿಹಾಕಲು ಯತ್ನಿಸಿದ್ದರು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ತರುಣ್ ತೇಜ್‌ಪಾಲ್‌ಗೆ 2 ವಾರಗಳೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶ

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:

ಆಗಸ್ಟ್ 24ರಂದು ದುರ್ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು ತಿಗಾಂವ್ ಪೊಲೀಸ್ ಠಾಣೆಗೆ ಸುದ್ದಿ ತಲುಪಿಸಿದ್ದರು. ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದ ಪೊಲೀಸರು, ಮೃತರ ಸಹೋದರ ರಾಂಬೀರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು 24 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us